16 ದಿನಗಳ ಬಳಿಕ ಇಳಿದ ಪೆಟ್ರೋಲ್ ದರ

First Published May 30, 2018, 11:09 AM IST
Highlights

ಸತತವಾಗಿ  ಕಳೆದ  16 ದಿನಗಳಿಂದ ಏರುಮುಖದಲ್ಲಿ ಸಾಗಿ ಜನರಿಗೆ ಶಾಕ್ ಮೂಡಿಸಿದ್ದ ಪೆಟ್ರೋಲ್ ದರವು ಇಂದು ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ. 
 

ನವದೆಹಲಿ : ಸತತವಾಗಿ  ಕಳೆದ  16 ದಿನಗಳಿಂದ ನಿರಂತರವಾಗಿ ಏರುಮುಖದಲ್ಲಿ ಸಾಗಿ ಜನರಿಗೆ ಶಾಕ್ ಮೂಡಿಸಿದ್ದ ಪೆಟ್ರೋಲ್ ದರವು ಇಂದು ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ. 

ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 60 ಪೈಸೆಯಷ್ಟು ಇಳಿಕೆಯಾಗಿದ್ದು, ಪ್ರತೀ ಲೀಟರ್ ಡೀಸೆಲ್ ಮೇಲೆ 56 ಪೈಸೆಯಷ್ಟು ಕಡಿಮೆಯಾಗಿದೆ. 

ಕಳೆದ ಕೆಲ ದಿನಗಳಿಂದ ಏರಿಕೆಯಾಗುತ್ತಲೇ ಸಾಗಿದ್ದ ದರವು 80 ರು.ವರೆಗೂ ಕೂಡ ತಲುಪಿತ್ತು. ಇಂದಿನ ಇಳಿಕೆಯಿಂದ ಸದ್ಯ ದಿಲ್ಲಿಯಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರವು 77.83 ರು. ನಷ್ಟಾಗಿದೆ.

ಮೇ 14ರಿಂದಲೂ ಕೂಡ ಪೆಟ್ರೋಲ್ ದರದಲ್ಲಿ  ಹೆಚ್ಚಿನ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿತ್ತು. ಪ್ರತಿದಿನವೂ ಕೂಡ ನಿರಂತರವಾಗಿ ಏರಿಕೆಯಾಗುತ್ತಲೇ ಸಾಗಿತ್ತು. 

ಕರ್ನಾಟಕ ಚುನಾವಣೆ  ಆದ ಬಳಿಕವೇ ಏರಿಕೆಯಾಗಲು ಆರಂಭವಾದ ಬೆಲೆ ಇಂದು ಅಲ್ಪ ಪ್ರಮಾಣದಲ್ಲಿ ಕುಸಿತವಾಗಿ ಗ್ರಾಹಕರಿಗೆ ಅಲ್ಪ ಪ್ರಮಾಣದಲ್ಲಿ ನಿರಾಳವನ್ನುಂಟು ಮಾಡಿದೆ.   

ಕಳೆದ 2 ವಾರಗಳಲ್ಲಿ ಪೆಟ್ರೋಲ್ ದರದಲ್ಲಿ 3.8 ರು. ಡೀಸೆಲ್ ದರದಲ್ಲಿ 3.38 ರಷ್ಟು ಏರಿಕೆಯಾಗಿತ್ತು. ಅಲ್ಲದೇ ಆಯಾ ರಾಜ್ಯದಲ್ಲಿ ಮಾರಾಟದ ವ್ಯಾಟ್ ಗೆ ಅನುಗುಣವಾಗಿ ಬೆಲೆ ಹೆಚ್ಚಳ ಮಾಡಲಾಗಿತ್ತು. 

click me!