ಗೋವಾದಲ್ಲಿ ಡೀಸೆಲ್‌ಗಿಂತ ಪೆಟ್ರೋಲ್ ಅಗ್ಗ!

Published : Jul 10, 2017, 06:13 PM ISTUpdated : Apr 11, 2018, 12:50 PM IST
ಗೋವಾದಲ್ಲಿ ಡೀಸೆಲ್‌ಗಿಂತ ಪೆಟ್ರೋಲ್ ಅಗ್ಗ!

ಸಾರಾಂಶ

2012ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಮನೋಹರ್ ಪರಿಕ್ಕರ್ ಅವರು ಬಿಜೆಪಿ ಆಡಳಿತಕ್ಕೆ ಬಂದಲ್ಲಿ ಪೆಟ್ರೋಲ್ ಮೇಲೆ ಇದ್ದ ಶೇ.20ರಷ್ಟು ತೆರಿಗೆ (ವ್ಯಾಟ್)ಯನ್ನು ಶೇ.0.1ಗೆ ಇಳಿಸುವುದಾಗಿ ಭರವಸೆ ನೀಡಿದ್ದರು. ಬಿಜೆಪಿ ಅಧಿಕಾರಕ್ಕೇರಿತು. ಮುಖ್ಯಮಂತ್ರಿಯಾದ ಪರಿಕ್ಕರ್ ಕೊಟ್ಟ ಮಾತನ್ನು ಈಡೇರಿಸಿದರು. ಪೆಟ್ರೋಲ್ ದರದಲ್ಲಿ ಭಾರಿ ಇಳಿಕೆಯಾಯಿತು. ಆದರೆ, ಡೀಸೆಲ್ ದರ ಮಾತ್ರ ಆಗಾಗ ಹೆಚ್ಚುತ್ತಲೆ ಇದೆ.

ಕಾರವಾರ(ಜು.10): ದೇಶಾದ್ಯಂತ ಡೀಸೆಲ್‌ಗಿಂತ ಪೆಟ್ರೋಲ್ ಬೆಲೆ ಹೆಚ್ಚು. ಆದರೆ, ಗೋವಾದಲ್ಲಿ ಮಾತ್ರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಅಂತಹ ವ್ಯತ್ಯಾಸವೇನೂ ಇಲ್ಲ. ಕೆಲವೊಮ್ಮೆ ಡೀಸೆಲ್‌ಗಿಂತ ಪೆಟ್ರೋಲ್ ಬೆಲೆಯೇ ಕಡಿಮೆಯಾಗುತ್ತದೆ.

ಗೋವಾದಲ್ಲಿ ಈಗ ಪೆಟ್ರೋಲ್ ಲೀಟರ್‌ಗೆ 57.20 ರೂ. ಇದ್ದರೆ, ಡೀಸೆಲ್‌ಗೆ 56.43 ರೂ. ಇದೆ. ಸಾಗಾಟ ವೆಚ್ಚ ಹಾಗೂ ದಿನದಿಂದ ದಿನಕ್ಕೆ ಪೆಟ್ರೋಲ್ ದರ ಪರಿಷ್ಕರಣೆಯಾಗುವುದರಿಂದ ಸ್ವಲ್ಪ ಮಟ್ಟಿಗೆ ವ್ಯತ್ಯಾಸ ಸಹಜ. ಒಮ್ಮೊಮ್ಮೆ ಪೆಟ್ರೋಲ್‌ಗಿಂತ ಡೀಸೆಲ್ ದರ 1-2 ರೂ.ವರೆಗೂ ಕಡಿಮೆಯಾದ ಉದಾಹರಣೆಯೂ ಇದೆ.

ಕಾರಣವೇನು?:

2012ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಮನೋಹರ್ ಪರಿಕ್ಕರ್ ಅವರು ಬಿಜೆಪಿ ಆಡಳಿತಕ್ಕೆ ಬಂದಲ್ಲಿ ಪೆಟ್ರೋಲ್ ಮೇಲೆ ಇದ್ದ ಶೇ.20ರಷ್ಟು ತೆರಿಗೆ (ವ್ಯಾಟ್)ಯನ್ನು ಶೇ.0.1ಗೆ ಇಳಿಸುವುದಾಗಿ ಭರವಸೆ ನೀಡಿದ್ದರು. ಬಿಜೆಪಿ ಅಧಿಕಾರಕ್ಕೇರಿತು. ಮುಖ್ಯಮಂತ್ರಿಯಾದ ಪರಿಕ್ಕರ್ ಕೊಟ್ಟ ಮಾತನ್ನು ಈಡೇರಿಸಿದರು. ಪೆಟ್ರೋಲ್ ದರದಲ್ಲಿ ಭಾರಿ ಇಳಿಕೆಯಾಯಿತು. ಆದರೆ, ಡೀಸೆಲ್ ದರ ಮಾತ್ರ ಆಗಾಗ ಹೆಚ್ಚುತ್ತಲೆ ಇದೆ.

ಕರ್ನಾಟಕದಲ್ಲಿ ಅಂದರೆ ಕಾರವಾರದಲ್ಲಿ ಈಗ ಪೆಟ್ರೋಲ್ ಲೀಟರ್‌ಗೆ 65.83 ರೂ. ಇದ್ದರೆ ಡೀಸೆಲ್ ಲೀಟರ್‌ಗೆ 56.14 ರೂ. ಇದೆ. ಕಾರವಾರಕ್ಕಿಂತ ಲೀಟರ್‌ಗೆ 8.50 ರೂ. ಕಡಿಮೆ ಆಗಿದೆ. ಹೀಗಾಗಿ ಕಾರವಾರದ ಜನತೆ 12 ಕಿ.ಮೀ. ಕ್ರಮಿಸಿ ಪೆಟ್ರೋಲ್‌ಗಾಗಿ ಗೋವಾ ಗಡಿಯಾದ ಪೋಳೆಂಗೆ ತೆರಳುತ್ತಿದ್ದಾರೆ. ಹಿಂದೆ ಗೋವಾದಲ್ಲಿ ಪೆಟ್ರೋಲ್ ದರ ಕಾರವಾರಕ್ಕಿಂತ ಲೀಟರ್‌ಗೆ 12-14 ರೂ.ರಷ್ಟು ಕಡಿಮೆ ಆಗಿತ್ತು. ಗೋವಾದಲ್ಲಿ ನಂತರ ಶೇ.7 ವ್ಯಾಟ್ ಹೆಚ್ಚಿಸಿದ್ದರಿಂದ ಈ ಅಂತರ ಕಡಿಮೆಯಾಯಿತು.

ಪೆಟ್ರೋಲ್ ಕಾರು ಹೆಚ್ಚು ಖರೀದಿ

ಗೋವಾದಲ್ಲಿ 3-4 ವರ್ಷಗಳಿಂದ ಪೆಟ್ರೋಲ್ ಕಾರುಗಳೇ ಹೆಚ್ಚಾಗಿ ರಸ್ತೆಗಿಳಿಯುತ್ತಿವೆ. ಪೆಟ್ರೋಲ್ ಕಾರಿಗಿಂತ ಡೀಸೆಲ್ ಕಾರು ತುಟ್ಟಿ. ನಿರ್ವಹಣಾ ವೆಚ್ಚವೂ ಹೆಚ್ಚು. ಆದರೆ, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ವ್ಯತ್ಯಾಸ ಇಲ್ಲದೆ ಇರುವುದರಿಂದ ಜನತೆ ಪೆಟ್ರೋಲ್ ಕಾರು ಖರೀದಿಸುತ್ತಿದ್ದಾರೆ.

ಕೋಟ್-ಗೋವಾದ ಪೋಳೆಂನಂತಹ ಚಿಕ್ಕ ಊರಿನಲ್ಲಿ 3 ಪೆಟ್ರೋಲ್ ಪಂಪ್‌ಗಳಿವೆ. ಕಾರವಾರದವರೆ ಇಲ್ಲಿನ ಪೆಟ್ರೋಲ್ ಪಂಪ್‌ಗಳಿಗೆ ಪ್ರಮುಖ ಗ್ರಾಹಕರಾಗಿದ್ದಾರೆ.

-ದೀಪಕ ಮೇತ್ರಿ ಪೆಟ್ರೋಲ್ ಪಂಪ್ ನೌಕರ

ವರದಿ: ವಸಂತಕುಮಾರ್ ಕತಗಾಲ, ಕನ್ನಡಪ್ರಭ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಏನಿದು, ಯಾಕಿದು ವಾರಾಹಿ ನದಿಯ ಸಿದ್ಧಾಪುರ ಏತ ನೀರಾವರಿ ವಿವಾದ? ಅಡ್ಡಗಾಲು ಹಾಕಿದ್ಯಾರು?
Kodagu: ಕೊಡಗಿನ ಕಾಡು ಕಾಯಲು 'ಅಗ್ನಿ' ರಣತಂತ್ರ: ಬೆಂಕಿ ರೇಖೆ ನಿರ್ಮಾಣ ಕಾರ್ಯ ಬಿರುಸು