ಗಮನಿಸಿ.. ಪೆಟ್ರೋಲ್ ಬೆಲೆಯಲ್ಲಿ ಆಗಲಿದೆ ಭಾರೀ ಏರಿಕೆ

By Web DeskFirst Published Oct 11, 2016, 12:58 PM IST
Highlights

ಸದ್ಯ ತೈಲ ಬೆಲೆ ಒಂದು ಬ್ಯಾರೆಲ್'ಗೆ 53 ಡಾಲರ್'ಗೆ ಏರಿಕೆಯಾಗಿದೆ. ಇದು ಕಳೆದ ಒಂದು ವರ್ಷದಲ್ಲಿ ಅತೀ ಹೆಚ್ಚು ಬೆಲೆಯಾಗಿದೆ. ಒಂದು ವೇಳೆ ತೈಲ ಕಂಪನಿಗಳು ಉತ್ಪಾದನೆಯನ್ನು ಸೀಮಿತಗೊಳಿಸಿದರೆ ಮುಂಬರುವ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್'ಗೆ ಬೇಡಿಕೆ ಹೆಚ್ಚಾಗಲಿದೆ.

ನವದೆಹಲಿ(ಅ. 11): ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಭಾರೀ ಏರಿಕೆಯಾಗಲಿದೆ ಎಂಬ ಶಾಕಿಂಗ್ ಸುದ್ದಿ ಎರಗಿ ಬಂದಿದೆ. ಜಾಗತಿಕ ತೈಲ ಬೆಲೆಗಳಲ್ಲಿ ಭಾರೀ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಭಾರತದಲ್ಲೂ ಅನಿವಾರ್ಯವಾಗಿ ಬೆಲೆ ಏರಿಕೆ ಮಾಡಬೇಕಾದ ಸ್ಥಿತಿ ಇದೆ ಎನ್ನಲಾಗಿದೆ. ಭಾರತದ ತೈಲ ಮಾರುಕಟ್ಟೆ ಕಂಪನಿಗಳು ಈ ತಿಂಗಳ ಅಂತ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್'ನ ಬೆಲೆಗಳನ್ನು ಏರಿಸುವ ಸಾಧ್ಯತೆ ಇದೆ.

ರಷ್ಯಾದವು ಸೇರಿದಂತೆ ಜಾಗತಿಕ ತೈಲ ಕಂಪನಿಗಳು ತೈಲ ಉತ್ಪಾದನೆಯನ್ನು ಕಡಿಮೆಗೊಳಿಸಲು ನಿರ್ಧರಿಸಿರುವ ಕಾರಣ ತೈಲ ಬೆಲೆಗಳು ಏರಿಕೆಯಾಗಲು ಶುರುವಾಗಿದೆ. ಸದ್ಯ ತೈಲ ಬೆಲೆ ಒಂದು ಬ್ಯಾರೆಲ್'ಗೆ 53 ಡಾಲರ್'ಗೆ ಏರಿಕೆಯಾಗಿದೆ. ಇದು ಕಳೆದ ಒಂದು ವರ್ಷದಲ್ಲಿ ಅತೀ ಹೆಚ್ಚು ಬೆಲೆಯಾಗಿದೆ. ಒಂದು ವೇಳೆ ತೈಲ ಕಂಪನಿಗಳು ಉತ್ಪಾದನೆಯನ್ನು ಸೀಮಿತಗೊಳಿಸಿದರೆ ಮುಂಬರುವ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್'ಗೆ ಬೇಡಿಕೆ ಹೆಚ್ಚಾಗಲಿದೆ.

ಇಷ್ಟು ದಿನ ಬೆಲೆ ಇಳಿಕೆ ಹಾಗೂ ಸಾಧಾರಣ ಏರಿಕೆಯ ಸುಖದಲ್ಲಿದ್ದ ಭಾರತೀಯರು ಇನ್ಮುಂದೆ ಬೆಲೆ ಏರಿಕೆಯ ಬಿಸಿ ತಾಳಬೇಕಾಗುತ್ತದೆ.

click me!