10 ವರ್ಷದಿಂದ ಕೈ ತೊಳೆದಿಲ್ಲವಂತೆ ಈ ಆ್ಯಂಕರ್!: ಕಾರಣವಿಷ್ಟು!

Published : Feb 13, 2019, 10:26 AM IST
10 ವರ್ಷದಿಂದ ಕೈ ತೊಳೆದಿಲ್ಲವಂತೆ ಈ ಆ್ಯಂಕರ್!: ಕಾರಣವಿಷ್ಟು!

ಸಾರಾಂಶ

 ಅಮೆರಿಕದ ಫಾಕ್ಸ್‌ ನ್ಯೂಸ್‌ನ ನಿರೂಪಕ ಪೀಟ್‌ ಹೆಗ್ಸೆತ್‌ ಎಂಬಾತ 10 ವರ್ಷದಿಂದ ಕೈಯನ್ನೇ ತೊಳೆದಿಲ್ಲವಂತೆ! ಇದಕ್ಕೆ ಕಾರಣವೇನು? ಇಲ್ಲಿದೆ ವಿವರ.

ನ್ಯೂಯಾರ್ಕ್[ಫೆ.13]: ಕೈ ಸ್ಪಲ್ಪ ಕೊಳೆಯಾದರೂ ಅಸಹ್ಯ ಎನಿಸುತ್ತೆ. ಆದರೆ, ಅಮೆರಿಕದ ಫಾಕ್ಸ್‌ ನ್ಯೂಸ್‌ನ ನಿರೂಪಕ ಪೀಟ್‌ ಹೆಗ್ಸೆತ್‌ ಎಂಬಾತ 10 ವರ್ಷದಿಂದ ಕೈಯನ್ನೇ ತೊಳೆದಿಲ್ಲವಂತೆ. ಫ್ರಿಜ್‌ನಲ್ಲಿ ಇಟ್ಟಿರದ ಅಳಿದುಳಿದ ಪಿಜ್ಜಾ ತಿಂದಿದ್ದಕ್ಕೆ ಸ್ನೇಹಿತರು ಹೆಗ್ಸೆತ್‌ರನ್ನು ಲೇವಡಿ ಮಾಡಿದ್ದರು.

ಇದಕ್ಕೆ ಭಾನುವಾರ ‘ಫಾಕ್ಸ್‌ ಆ್ಯಂಡ್‌ ಫ್ರೆಂಡ್ಸ್‌’ ಕಾರ್ಯಕ್ರಮದಲ್ಲಿ ಉತ್ತರಿಸಿದ ಹೆಗ್ಸೆತ್‌ ‘ಕಣ್ಣಿಗೆ ಕಾಣದ ರೋಗಾಣುಗಳ ಮೇಲೆ ನನಗೆ ನಂಬಿಕೆ ಇಲ್ಲ. ಇಂದಿನ ದಿನಗಳಲ್ಲಿ ಜನರು ಕಿಸೆಯಲ್ಲಿ ಕೈ ತೊಳೆಯುವ ಶಾಂಪು ಇಟ್ಟುಕೊಂಡು ಓಡಾಡುತ್ತಾರೆ. ದಿನಕ್ಕೆ 19 ಸಾವಿರ ಬಾರಿ ಕೈ ತೊಳೆದುಕೊಳ್ಳುತ್ತಾರೆ. ಹೀಗೆ ಮಾಡುವುದರಿಂದ ಅವರ ಜೀವ ಉಳಿಯುತ್ತದೆಯೇ ಎಂದು ಪ್ರಶ್ನಿಸಿದ್ದಾರೆ?

ಈ ಹೇಳಿಕೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಹೆಗ್ಸೆತ್‌ ಗೇಲಿಗೆ ಒಳಗಾಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಔಷಧಿ ಸೇರಿ 68 ಟನ್ ಅಗತ್ಯ ವಸ್ತುಗಳ ನೆರವು ನೀಡಿದ ಭಾರತಕ್ಕೆ ಶಾಕ್ ಕೊಟ್ಟ ನೇಪಾಳ
ChatGPT ಬಳಸಿ ₹75,000 ನಕಲಿ ಡೊನೇಶನ್‌ ರಸೀದಿ ಸೃಷ್ಟಿ! ಕಳುಹಿಸಿದ್ದು ಸ್ವಂತ QR ಕೋಡ್, ಕತರ್ನಾಕ್ ಅರೆಸ್ಟ್!