ಬೆನಜೀರ್ ಭುಟ್ಟೋ ಹತ್ಯೆ: ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಜೈಲುಶಿಕ್ಷೆ

By Suvarna Web DeskFirst Published Aug 31, 2017, 5:37 PM IST
Highlights

ಬೆನಜೀರ್ ಭುಟ್ಟೋ ಹತ್ಯೆ ಪ್ರಕರಣದಲ್ಲಿ ಮಾಜಿ ಪಾಕ್ ಪ್ರಧಾನಿ ಪರ್ವೇಜ್ ಮುಷ್ರಫ್’ರವರು ತಲೆಮರೆಸಿಕೊಂಡಿದ್ದಾರೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದ್ದು, ಹತ್ಯೆಗೆ ಸಂಬಂಧಿಸಿದಂತೆ ಇಬ್ಬರು ಹಿರಿಯ ಅಧಿಕಾರಿಗಳಿಗೆ 17 ವರ್ಷ ಜೈಲುಶಿಕ್ಷೆ  ಹಾಗೂ ತಲಾ 5 ಲಕ್ಷ ದಂಡವನ್ನು ವಿಧಿಸಿದೆ.

ನವದೆಹಲಿ (ಆ.31): ಬೆನಜೀರ್ ಭುಟ್ಟೋ ಹತ್ಯೆ ಪ್ರಕರಣದಲ್ಲಿ ಮಾಜಿ ಪಾಕ್ ಪ್ರಧಾನಿ ಪರ್ವೇಜ್ ಮುಷ್ರಫ್’ರವರು ತಲೆಮರೆಸಿಕೊಂಡಿದ್ದಾರೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದ್ದು, ಹತ್ಯೆಗೆ ಸಂಬಂಧಿಸಿದಂತೆ ಇಬ್ಬರು ಹಿರಿಯ ಅಧಿಕಾರಿಗಳಿಗೆ 17 ವರ್ಷ ಜೈಲುಶಿಕ್ಷೆ  ಹಾಗೂ ತಲಾ 5 ಲಕ್ಷ ದಂಡವನ್ನು ವಿಧಿಸಿದೆ.

ಪರ್ವೇಜ್ ಮುಷ್ರಫ್ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ನ್ಯಾಯಾಲಯ ಆದೇಶಿಸಿದ್ದು, ಐವರನ್ನು ಖುಲಾಸೆಗೊಳಿಸಿದೆ.

ಚುನಾವಣಾ ರ್ಯಾಲಿಯನ್ನು ಮುಗಿಸಿ ಬರುವಾಗ, 2007, ಡಿ 27 ರಂದು ರಾವಲ್ಪಿಂಡಿಯಲ್ಲಿ ಬೆನಜೀರ್ ಭುಟ್ಟೋ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಲಾಗುತ್ತದೆ. ಜೊತೆಗೆ ಬಾಂಬ್ ದಾಳಿಯನ್ನೂ ಮಾಡಲಾಗುತ್ತದೆ.

ನ್ಯಾ.ಅಸ್ಘರ್ ಖಾನ್ ಏಕಸದಸ್ಯಪೀಠವು ಈ ತೀರ್ಪು ನೀಡಿದೆ.

click me!