
ಕೋಲಾರ[ಏ.02]: ಕಾಡಾನೆಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಯುವಕನೋರ್ವ ಕಣ್ಣು ಕಳೆದುಕೊಂಡ ಘಟನೆ ಮಾಲೂರು ತಾಲೂಕಿನ ಕಾಟೇರಿ ಗ್ರಾಮದ ಸಮೀಪ ಬುಧವಾರ ನಡೆದಿದೆ.
ರಾಜಪ್ಪ (24) ಕಣ್ಣು ಕಳೆದುಕೊಂಡ ಯುವಕ. ಮಾಲೂರು ತಾಲೂಕಿನ ಅರಳೇರಿ ಗ್ರಾಮದ ಹೊರವಲಯದದಲ್ಲಿದ್ದ ಬಾಳೆ, ಹಲಸು, ಟೊಮೆಟೊ, ಸೌತೆಕಾಯಿ ತೋಟಗಳ ಮೇಲೆ ದಾಳಿ ನಡೆಸಿದ ಆನೆಗಳ ಹಿಂಡು ಕಾಟೇರಿ ಗ್ರಾಮದ ಕೆರೆಯ ಬಳಿ ಬೀಡು ಬಿಟ್ಟಿದ್ದವು. ಈ ವೇಳೆ ಹತ್ತಿರದಿಂದ ಸೆಲ್ಫಿ ತೆಗೆದುಕೊಳ್ಳಲು ರಾಜಪ್ಪ ಆನೆಗಳ ಸಮೀಪ ಹೋಗಿದ್ದು, ಆನೆಗಳು ಆತನನ್ನು ಅಟ್ಟಿಸಿಕೊಂಡು ಬಂದಿವೆ.
ಈ ವೇಳೆ ಆನೆಗಳಿಂದ ತಪ್ಪಿಸಿಕೊಂಡು ಓಡುವಾಗ ರಾಜಪ್ಪ ಎಡವಿ ಬಿದ್ದಿದ್ದು, ಆಗ ನೀಲಗಿರಿ ಕಡ್ಡಿಯೊಂದು ನೇರವಾಗಿ ಆತನ ಎಡಗಣ್ಣಿಗೆ ಚುಚ್ಚಿದ್ದು, ಕಣ್ಣು ಕಳೆದುಕೊಂಡಿ ದ್ದಾನೆ. ಗಾಯಾಳುವನ್ನು ಕೋಲಾರದ ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮದ ಸುತ್ತ ೬ ಕಾಡಾನೆಗಳು ಬೀಡು ಬಿಟ್ಟಿದ್ದು, ಅವುಗಳನ್ನು ಕಾಡಿಗಟ್ಟಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.