ಡಿ.ಕೆ.ಶಿವಕುಮಾರ್ ಹೆಸರು ಬಳಸಿಕೊಂಡು ಲಕ್ಷಾಂತರ ರೂ. ನುಂಗಿದ ಖದೀಮ!

Published : Jun 17, 2017, 02:03 PM ISTUpdated : Apr 11, 2018, 12:37 PM IST
ಡಿ.ಕೆ.ಶಿವಕುಮಾರ್ ಹೆಸರು ಬಳಸಿಕೊಂಡು ಲಕ್ಷಾಂತರ ರೂ. ನುಂಗಿದ ಖದೀಮ!

ಸಾರಾಂಶ

ಇಂಧನ ಸಚಿವ ಡಿ ಕೆ ಶಿವಕುಮಾರ್​​ ಹೆಸರು ದುರ್ಬಳಕೆ ಮಾಡಿಕೊಂಡು ನೂರಾರು ಜನರಿಗೆ ಪಂಗನಾಮ ಹಾಕಿದ್ದ ಅನ್ವರ್​ ಜಮಾದಾರ ಎಂಬಾತನ್ನ ಬೆಳಗಾವಿಯ ರಾಮದುರ್ಗ ಪೊಲೀಸರು ಬಂದಿಸಿದ್ದಾರೆ.

ಬೆಳಗಾವಿ(ಜೂ.17): ಇಂಧನ ಸಚಿವ ಡಿ ಕೆ ಶಿವಕುಮಾರ್​​ ಹೆಸರು ದುರ್ಬಳಕೆ ಮಾಡಿಕೊಂಡು ನೂರಾರು ಜನರಿಗೆ ಪಂಗನಾಮ ಹಾಕಿದ್ದ ಅನ್ವರ್​ ಜಮಾದಾರ ಎಂಬಾತನ್ನ ಬೆಳಗಾವಿಯ ರಾಮದುರ್ಗ ಪೊಲೀಸರು ಬಂದಿಸಿದ್ದಾರೆ.

ಬೆಳಗಾವಿ ಮೂಲದ ಈತ ಡಿ ಕೆ ಶಿವಕುಮಾರ್ ಅಭಿಮಾನಿ  ಸಂಘದ ಅಧ್ಯಕ್ಷನಾಗಿದ್ದ. ಡಿಕೆಶಿ ಜೊತೆ ಪೊಟೊ ತೆಗೆದುಕೊಂಡು ಹೆಸ್ಕಾಂ ನಲ್ಲಿ   ನೌಕರಿ ಕೊಡಿಸುವುದಾಗಿ 30ಕ್ಕೂ ಹೆಚ್ಚು ಜನರಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ನಾಪತ್ತೆಯಾಗಿದ್ದ. ಈ ಕುರಿತು ವಂಚನೆವಗೊಳಗಾದವರು, ಖುದ್ದು ಡಿ.ಕೆ.ಶಿವಕುಮಾರ್​​ಗೆ ಭೇಟಿಯಾಗಿ ತಮ್ಮ ಅಳಲು ತೋಡಿಕೊಂಡಿದ್ದರು. ಆಗ ಸಚಿವ ಡಿಕೆಶಿ ಪೊಲೀಸರಿಗೆ ದೂರು ನೀಡುವಂತೆ ತಿಳಿಸಿ ತಾವೂ ಖುದ್ದಾಗಿ ಪೊಲೀಸರಿಗೆ ಕ್ರಮ ಕೈಗೊಳ್ಳಲು ಸೂಚಿಸಿದ್ದರು.

ತಲೆ ಮರೆಸಿಕೊಂಡಿದ್ದ ವಂಚಕ ಅನ್ವರ್ ಜಮಾದರನನ್ನು ಪೊಲೀಸರು ಬಂದಿಸಿದ್ದಾರೆ. ಇನ್ನು ವಂಚಕನಿಗೆ ಯುವಕರು ಹಣ ನೀಡುತ್ತಿರುವ ವಿಡಿಯೋವನ್ನ ಚಿತ್ರಿಸಿಕೊಂಡಿದ್ದು, ತಾವು ಕೊಟ್ಟ ಹಣವನ್ನ ಮರಳಿ ಕೊಡಿಸುವಂತೆ ಪೊಲಿಸರಿಗೆ ದುಂದಾಲು ಬಿದ್ದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮುಕೇಶ್ ಅಂಬಾನಿ 68ರಲ್ಲೂ ಫಿಟ್ & ಎನರ್ಜಿಟಿಕ್‌ ಆಗಿರಲು ಬೆಳಗ್ಗಿನ ಈ ಅಭ್ಯಾಸ ಕಾರಣ!
ಬೆಳಗಾವಿ ಅಧಿವೇಶನ ಕೊನೆ ದಿನವೂ ಗದ್ದಲ: ವಿಪಕ್ಷ, ಸಂಘಟನೆಗಳಿಂದ ಪ್ರತಿಭಟನೆ!