ನೆಚ್ಚಿನ ದೈವಕ್ಕೆ ಬೈಗುಳದ ಮೂಲಕ ಪೂಜೆ: ದೇವರಿಗೆ ವಿಚಿತ್ರವಾಗಿ ಹರಕೆ ತೀರುಸ್ತಾರೆ ಕೊಡಗು ಜನ

Published : May 26, 2017, 09:37 AM ISTUpdated : Apr 11, 2018, 12:35 PM IST
ನೆಚ್ಚಿನ ದೈವಕ್ಕೆ  ಬೈಗುಳದ ಮೂಲಕ ಪೂಜೆ: ದೇವರಿಗೆ ವಿಚಿತ್ರವಾಗಿ ಹರಕೆ ತೀರುಸ್ತಾರೆ ಕೊಡಗು ಜನ

ಸಾರಾಂಶ

ದೇವರಿಗೆ ಆಭರಣ, ನಗದು, ಕುರಿ, ಕೋಳಿ, ಹೀಗೆ ನಾನಾ ರೀತಿಯ ಹರಕೆ ನೀಡುವುದನ್ನು ನೋಡಿದ್ದೇವೆ, ಆದರೆ ಕಾಫಿನಾಡು ಕೊಡಗಿನಲ್ಲಿ  ಜನರು ವಿಚಿತ್ರವಾಗಿ ತಮ್ಮ ಹರಿಕೆ ತೀರಿಸುತ್ತಾರೆ.

ಮಡಿಕೇರಿ(ಮೇ.26): ದೇವರಿಗೆ ಆಭರಣ, ನಗದು, ಕುರಿ, ಕೋಳಿ, ಹೀಗೆ ನಾನಾ ರೀತಿಯ ಹರಕೆ ನೀಡುವುದನ್ನು ನೋಡಿದ್ದೇವೆ, ಆದರೆ ಕಾಫಿನಾಡು ಕೊಡಗಿನಲ್ಲಿ  ಜನರು ವಿಚಿತ್ರವಾಗಿ ತಮ್ಮ ಹರಿಕೆ ತೀರಿಸುತ್ತಾರೆ.

ತಮ್ಮ ನೆಚ್ಚಿನ ದೈವಕ್ಕೆ ಬೈಗುಳದ ಮೂಲಕ ಪೂಜಿಸುತ್ತಾರೆ. ವಿವಿಧ ರೀತಿಯ ಪೋಷಾಕು ತೊಟ್ಟ ಆದಿವಾಸಿಗರು ತಾವಿರುವ ಗ್ರಾಮದ ಸುತ್ತಮುತ್ತಲ, ಪಟ್ಟಣದ ಬೀದಿಗಳಲ್ಲಿ ಹಾಡಿ ಕುಣಿಯುತ್ತಾ ಹಣ ಬೇಡುತ್ತಾರೆ. ಮಹಿಳೆಯರ ಹಳೆಯ ಬಟ್ಟೆಗಳನ್ನೆ ವಿಭಿನ್ನವಾಗಿ ಡಿಸೈನ್ ಮಾಡಿಕೊಂಡು ಧರಿಸಿ ಬರುವ ಆದಿವಾಸಿ ಹುಡುಗರು ಹಬ್ಬವನ್ನು ವಿಚಿತ್ರವಾಗಿ ಆಚರಿಸುತ್ತಾರೆ.

ಇನ್ನು ಕೆಲವರು ದೇವರುಗಳಂತೆ ಅಲಂಕಾರಮಾಡಿಕೊಂಡು ನೃತ್ಯಮಾಡಿ ಸಂಭ್ರಮಿಸುತ್ತಾರೆ. ಎರಡು ದಿನಗಳು ನಡೆಯುವ ಹಬ್ಬದಲ್ಲಿ ನಾಗರ ಹೊಳೆಯಲ್ಲಿರುವ ಗಿರಿಜನರು ಸೇರಿದಂತೆ ಹಲವಡೆಯಿಂದ ಹಬ್ಬದಲ್ಲಿ ಭಾಗಿಯಾಗುತ್ತಾರೆ. ಎಲ್ಲಾ ನೋವನ್ನು ಮರೆತು ತಮ್ಮ ದೈವಕ್ಕೆ ಶರಣಾಗುತ್ತಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

₹40 ಲಕ್ಷ ಖರ್ಚು ಮಾಡಿ ಮದುವೆ ಮಾಡಿದ ಮಗಳು 1 ತಿಂಗಳು ಸಂಸಾರ ಮಾಡಲಿಲ್ಲ; ಹನಿಮೂನ್ ಪೂರ್ಣಗೊಳಿಸದೇ ಪ್ರಾಣಬಿಟ್ಟಳು!
Indian Railways: ಗುಟ್ಕಾ ಪ್ರಿಯರಿಗಾಗಿ ವರ್ಷಕ್ಕೆ 1,200 ಕೋಟಿ ರೂ. ಖರ್ಚು ಮಾಡ್ತಿರೋ ರೈಲ್ವೆ ಇಲಾಖೆ!