ಕಡೆಗೂ ಮೋಸ ಹೋದವರಿಗೆ ಹಣ ನೀಡಲು ಒಪ್ಪಿಕೊಂಡ ಡೋಂಗಿ ಬಾಬಾ

Published : May 26, 2017, 08:28 AM ISTUpdated : Apr 11, 2018, 12:56 PM IST
ಕಡೆಗೂ ಮೋಸ ಹೋದವರಿಗೆ ಹಣ ನೀಡಲು ಒಪ್ಪಿಕೊಂಡ ಡೋಂಗಿ ಬಾಬಾ

ಸಾರಾಂಶ

ಡೋಂಗಿ ಬಾಬಾನ ಬೆನ್ನತ್ತಿ ಹೋದ ಸುವರ್ಣ ನ್ಯೂಸ್ ಬಾಬಾನ ಅಸಲಿ ಜಾತಕ ತೆರಿದಿಟ್ಟಿದೆ. ಸುವರ್ಣ ನ್ಯೂಸ್ ಸ್ಟುಡಿಯೋದಲ್ಲಿ ಡೊಂಗಿ ಬಾಬಾ ಮೋಸ ಹೋದ ಯುವತಿಯರಿಗೆ ಹಣ ನೀಡುವುದಾಗಿ ಭರವಸೆ ನೀಡಿದ್ದಾನೆ.

ತುಮಕೂರು(ಮೇ.26): ಡೋಂಗಿ ಬಾಬಾನ ಬೆನ್ನತ್ತಿ ಹೋದ ಸುವರ್ಣ ನ್ಯೂಸ್ ಬಾಬಾನ ಅಸಲಿ ಜಾತಕ ತೆರಿದಿಟ್ಟಿದೆ. ಸುವರ್ಣ ನ್ಯೂಸ್ ಸ್ಟುಡಿಯೋದಲ್ಲಿ ಡೊಂಗಿ ಬಾಬಾ ಮೋಸ ಹೋದ ಯುವತಿಯರಿಗೆ ಹಣ ನೀಡುವುದಾಗಿ ಭರವಸೆ ನೀಡಿದ್ದಾನೆ.

ತುಮಕೂರಿನ ಕುಣಿಗಲ್ ಸಮೀಪದ ಬಿದನಗೆರೆಯ ಈತನ ದಿಢೀರ್ ಶ್ರೀಮಂತನ ಅಸಲಿಯತ್ತು ಇದೀಗ ಬಯಲಾಗಿದೆ.. ಈತನ ನಯಮಾತು ನಂಬಿ ಮೋಸ ಹೋದೋರೆಲ್ಲಾ ಇವನ ವಿರುದ್ಧ ತಿರುಗಿ ಬಿದ್ದಿದ್ದಾರೆ. ಸುವರ್ಣ ನ್ಯೂಸ್ ಸ್ಟುಡಿಯೋಗೆ ಬಂದು ಕಣ್ಣೀರು ಹಾಕಿ ನಾನವನಲ್ಲ. ನಂದೇನು ತಪ್ಪಿಲ್ಲ. ನಾನು ಯಾರ ಬಳಿಯೂ ಹಣ ಪಡೆದಿಲ್ಲ ಅಂತ ಅವಲತ್ತುಕೊಂಡಿದ್ದಾನೆ. 

ಇನ್ನು ನನ್ನ  ಕಪಟತನ ಕಾವಿಯೊಳಗಿನ ರೋಲ್​ಕಾಲ್​ ಬುದ್ಧಿ ಕುಣಿಗಲ್ ಜನಕ್ಕೆ ಗೊತ್ತಾಗಬಾರ್ದು ಅಂತ ಸುವರ್ಣ ನ್ಯೂಸ್​ ಚಾನಲ್ ವೀಕ್ಷಿಸದಂತೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದ ಈ ಕಿಲಾಡಿ. ಮೋಸ ಹೋದ ಯುವತಿಯರು ಕೂಡ ನಮ್ಮ  ಸ್ಟುಡಿಯೋಗೆ ಬಂದು ಈತನ ಮೋಸ ಪ್ರಶ್ನೆ ಮಾಡಿದ್ದರು. ಮೊದ್ಲಿಗೆ ಇವರ್ಯಾರು ಅಂತಾನೇ ಗೊತ್ತಿಲ್ಲ. ದುಡ್ಡು ಪಡೆದಿಲ್ಲ ಅಂತತೆಲ್ಲಾ ಸಮರ್ಥನೆ ಮಾಡಿಕೊಂಡ. ಕೆಲವರು ಪೋನ್ ಮಾಡಿ ಈತನ ಮೋಸದ ಗಂಟನ್ನ ಎಳೆ ಎಳೆಯಾಗಿ ಬಿಚ್ಚಿಟ್ಟರೂ ಈತ ಸುಲಭವಾಗಿ ಒಪ್ಪಿಕೊಳ್ಳಲಿಲ್ಲ.

ಈಗ ಮೋಸ ಹೋದವರ ವಾಗ್ದಾಳಿ ಹೆಚ್ಚಾದವೋ ಸ್ಟುಡಿಯೋದಿಂದಲೇ ಡೋಂಗಿ ಕಾಲ್ಕಿತ್ತ. ಕೊನೆಗೆ ಮೋಸ ಹೋದ ಯುವತಿಯರಿಗೆ ಇಂದು ಬೆಳಗ್ಗೆ 10 ಗಂಟೆಗೆ ಒಂದೂವರೆ ಲಕ್ಷ ರೂಪಾಯಿ ವಾಪಸ್ ಕೊಡುತ್ತೇನೆ ಅಂತಲೂ ಒಪ್ಪಿಕೊಂಡಿದ್ದಾನೆ. ಒಟ್ಟಿನಲ್ಲಿ ನೂರಾರು ಜನರಿಗೆ ಲಕ್ಷ ಲಕ್ಷ ಹಣ ಪೀಕಿ ಉಂಡೆನಾಮ ಬಳಿಯುತ್ತಿದ್ದ ಈ ಖತರ್ನಾಕ್​ ಆಸಾಮಿಯ ಅಸಲಿಯತ್ತನ್ನು ಬಯಲಿಗೆಳೆದ ಸುವರ್ಣ ನ್ಯೂಸ್'ಗೆ ಮೋಸ ಹೋದವರು ಕರೆ ಮಾಡಿ ಅಭಿನಂದನೆ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾತ್ರಿ ಕಣ್ಣೇ ಕಾಣೊಲ್ಲವೆಂದು ಹಗಲಿನಲ್ಲಿಯೇ ಕಿರುತೆರೆ ನಟ ಪ್ರವೀಣ್ ಮನೆಗೆ ಕನ್ನ ಹಾಕಿದ ಇರುಳು ಕುರುಡ!
ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ