ವಂಚಕ ‘ನಮೋ ಮಂಚ್’ನಲ್ಲಿ ಕನ್ನಡಿಗರು!: ಮೋದಿ ಹೆಸರಲ್ಲಿ ವಂಚನೆ, ಸಿಬಿಐನಿಂದ ಎಫ್'ಐಆರ್

Published : Aug 13, 2017, 02:19 PM ISTUpdated : Apr 11, 2018, 12:41 PM IST
ವಂಚಕ ‘ನಮೋ ಮಂಚ್’ನಲ್ಲಿ ಕನ್ನಡಿಗರು!: ಮೋದಿ ಹೆಸರಲ್ಲಿ ವಂಚನೆ, ಸಿಬಿಐನಿಂದ ಎಫ್'ಐಆರ್

ಸಾರಾಂಶ

ಕರ್ನಾಟಕದಲ್ಲೂ ಘಟಕ ಹೊಂದಿದೆ ಎನ್ನಲಾದ ಹೌಸಿಂಗ್ ಸೊಸೈಟಿಯೊಂದು ಪ್ರಧಾನಿ ನರೇಂದ್ರ ಮೋದಿಯವರ ಹೆಸರಲ್ಲಿ ಕಾನೂನು ಬಾಹಿರವಾಗಿ ಹಣ ಸಂಗ್ರಹಿಸುತ್ತಿದ್ದ ಪ್ರಕರಣ ಬಹಿರಂಗವಾಗಿದೆ. ವಿಷಯಕ್ಕೆ ಸಂಬಂಧಿಸಿ ರೀದಾಬಾದ್ ಮೂಲದ ನೋಂದಾಯಿತ ಹೌಸಿಂಗ್ ಸೊಸೈಟಿ ‘ನರೇಂದ್ರ ಮೋದಿ ವಿಚಾರ್ ಮಂಚ್’ ವಿರುದ್ಧ ಸಿಬಿಐ ಎಫ್'ಐಆರ್ ದಾಖಲಿಸಿದೆ.

ನವದೆಹಲಿ(ಆ.13): ಕರ್ನಾಟಕದಲ್ಲೂ ಘಟಕ ಹೊಂದಿದೆ ಎನ್ನಲಾದ ಹೌಸಿಂಗ್ ಸೊಸೈಟಿಯೊಂದು ಪ್ರಧಾನಿ ನರೇಂದ್ರ ಮೋದಿಯವರ ಹೆಸರಲ್ಲಿ ಕಾನೂನು ಬಾಹಿರವಾಗಿ ಹಣ ಸಂಗ್ರಹಿಸುತ್ತಿದ್ದ ಪ್ರಕರಣ ಬಹಿರಂಗವಾಗಿದೆ. ವಿಷಯಕ್ಕೆ ಸಂಬಂಧಿಸಿ ರೀದಾಬಾದ್ ಮೂಲದ ನೋಂದಾಯಿತ ಹೌಸಿಂಗ್ ಸೊಸೈಟಿ ‘ನರೇಂದ್ರ ಮೋದಿ ವಿಚಾರ್ ಮಂಚ್’ ವಿರುದ್ಧ ಸಿಬಿಐ ಎಫ್'ಐಆರ್ ದಾಖಲಿಸಿದೆ.

ಈ ಹೌಸಿಂಗ್ ಸೊಸೈಟಿಗೂ, ಮೋದಿಯವರಿಗೂ ಯಾವುದೇ ಸಂಪರ್ಕವಿಲ್ಲ. ಆದರೆ ಅವರ ಹೆಸರಲ್ಲಿ ದೇಣಿಗೆ ಸಂಗ್ರಹಿಸಲಾಗುತ್ತಿತ್ತು ಎಂದು ಆಪಾದಿಸಲಾಗಿದೆ. ಸೊಸೈಟಿಯ ಐಟಿ ವಿಭಾಗದ ರಾಷ್ಟ್ರೀಯ ಉಪಾಧ್ಯಕ್ಷ ಅರವಿಂದ್ ಕುಮಾರ್ ಕದಂ ಕರ್ನಾಟಕದವರೆನ್ನಲಾಗಿದೆ.

www.nmvmindia.org ಎಂಬ ವೆಬ್‌ಸೈಟ್ ಅನ್ನು ಸಂಸ್ಥೆ ನಿರ್ವಹಿಸುತ್ತಿದೆ. ಕರ್ನಾಟಕ ಘಟಕದಲ್ಲಿ ಬಿ.ಎಲ್. ಮಂಜುನಾಥ ಎಂಬವರು ಅಧ್ಯಕ್ಷ, ಪುಷ್ಪಾವತಿ ಉಪಾಧ್ಯಕ್ಷೆ, ಕಿರಣ್ ಕಾರ್ಯದರ್ಶಿ, ಎಸ್. ರಮೇಶ್ ರಾಜ್ಯ ಖಜಾಂಚಿ ಎಂದು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೊಲ್ಲೂರು ದೇವಳ ಹೆಸರಲ್ಲಿ ನಕಲಿ ವೆಬ್‌ಸೈಟ್: ಭಕ್ತರಿಗೆ ವಂಚಿಸುತ್ತಿದ್ದ ಆರೋಪಿ ನಾಸೀರ್ ಹುಸೇನ್ ಬಂಧನ
ಬಂಗಾಳದಲ್ಲಿ ಶೀಘ್ರ ಜಂಗಲ್‌ ರಾಜ್ಯ ಅಂತ್ಯ : ಮೋದಿ ಪಣ