ಅಬ್ದುಲ್ ನಾಸೀರ್ ಮದನಿ ಬಿಡುಗಡೆಗೆ ಆಗ್ರಹ: PDP ಕಾರ್ಯಕರ್ತರಿಂದ ಬೆಂಗಳೂರಿಗೆ ಪಾದಯಾತ್ರೆ

Published : Dec 10, 2016, 08:54 PM ISTUpdated : Apr 11, 2018, 12:52 PM IST
ಅಬ್ದುಲ್ ನಾಸೀರ್ ಮದನಿ ಬಿಡುಗಡೆಗೆ ಆಗ್ರಹ: PDP ಕಾರ್ಯಕರ್ತರಿಂದ ಬೆಂಗಳೂರಿಗೆ ಪಾದಯಾತ್ರೆ

ಸಾರಾಂಶ

ಬೆಂಗಳೂರು ಸರಣಿ ಸ್ಫೋಟದ ಪ್ರಮುಖ ಆರೋಪಿ ಅಬ್ದುಲ್ ನಾಸೀರ್ ಮದನಿ ಸದ್ಯ ಜೈಲಿನಲ್ಲಿದ್ದಾರೆ. ಇವರ ಬಿಡುಗಡೆಗೆ ಆಗ್ರಹ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಕೇರಳದಲ್ಲಿ ಱಲಿ ಆರಂಭಿಸಿದೆ. ಸದ್ಯ ಪಿಡಿಪಿ ಱಲಿ ಕರ್ನಾಟಕದ ಗಡಿಯಲ್ಲಿದ್ದು  ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಮಾರ್ಗದ ರಸ್ತೆಯನ್ನ ಬಂದ್​ ಮಾಡಲಾಗಿದೆ.

ಬೆಂಗಳೂರು(ಡಿ.12): ಬೆಂಗಳೂರು ಸರಣಿ ಸ್ಫೋಟದ ಪ್ರಮುಖ ಆರೋಪಿ ಅಬ್ದುಲ್ ನಾಸೀರ್ ಮದನಿ ಸದ್ಯ ಜೈಲಿನಲ್ಲಿದ್ದಾರೆ. ಇವರ ಬಿಡುಗಡೆಗೆ ಆಗ್ರಹ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಕೇರಳದಲ್ಲಿ ಱಲಿ ಆರಂಭಿಸಿದೆ. ಸದ್ಯ ಪಿಡಿಪಿ ಱಲಿ ಕರ್ನಾಟಕದ ಗಡಿಯಲ್ಲಿದ್ದು  ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಮಾರ್ಗದ ರಸ್ತೆಯನ್ನ ಬಂದ್​ ಮಾಡಲಾಗಿದೆ.

ಅಬ್ದುಲ್​ ನಾಸೀರ್ ಮದನಿ ಬಿಡುಗಡೆಗೆ ಆಗ್ರಹ: PDP ಕಾರ್ಯಕರ್ತರಿಂದ ಬೆಂಗಳೂರಿಗೆ ಪಾದಯಾತ್ರೆ

ಅಬ್ದುಲ್ ನಾಸೀರ್ ಮದನಿ, ಬೆಂಗಳೂರು ಬಾಂಬ್​ ಬ್ಲಾಸ್ಟ್​​​  ಪ್ರಕರಣದ ಆರೋಪಿ ಪ್ರಮುಖ ಆರೋಪಿ. ಈತನ ಬಿಡುಗಡೆಗೆ ಆಗ್ರಹಿಸಿ ಕೇರಳದಲ್ಲಿ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಕಾರ್ಯಕರ್ತರು ಱಲಿ ನಡೆಸುತ್ತಿದ್ದಾರೆ. ರಾಜ್ಯಕ್ಕೆ ರ್ಯಾಲಿ ಆಗಮನ ಹಿನ್ನೆಲೆಯಲ್ಲಿ ಸಾವಿರಾರು ಕಾರ್ಯಕರ್ತರನ್ನು ಚಾಮರಾಜನಗರ ಗಡಿಯಲ್ಲೇ ಪೊಲೀಸರು ತಡೆದಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಕರ್ನಾಟಕ-ಕೇರಳ ಮಾರ್ಗದ ಸಂಚಾರ ಬಂದ್ ಮಾಡಲಾಗಿದ್ದು ಪೊಲೀಸ್ ಬಿಗಿ ಭದ್ರತೆ ಏರ್ಪಡಿಸಲಾಗಿದೆ.

ಯಾರು ಈ ಮದನಿ?

ಕೇರಳದ ಮುಸ್ಲಿಮರ ಮತ್ತು ಕೆಲ ರಾಜಕಿಯ ಪಕ್ಷಗಳ ಪಾಲಿನ ಹೀರೋ ಆಗಿರುವ ಅಬ್ದುಲ್ ನಾಸೀರ್ ಮದನಿ ಕರ್ನಾಟಕದ ಪಾಲಿನ ವಿಲನ್.. ಈತ 1998ರಲ್ಲಿ ಕೊಯಂಬತ್ತೂರು ಪ್ರಕರಣದಲ್ಲಿ ಸಿಲುಕಿ 8 ವರ್ಷ ಕಂಬಿ ಎಣಿಸಿದ್ದ.. ಜೈಲಿನಿಂದ ಬಿಡುಗಡೆಯಾಗಿ ‘ಜಾತ್ಯತೀತ’ವೆಂದು ಹೇಳಿಕೊಂಡಿದ್ದ. ನಂತ್ರ ಬೆಂಗಳೂರಿನಲ್ಲಿ 2008ರ ಜುಲೈ 25ರಂದು ಬೆಚ್ಚಿಬೀಳಿಸಿದ್ದ ಸರಣಿ ಸ್ಫೋಟದಲ್ಲಿ  ಆರೋಪಿ. ಸದ್ಯ ಈತ ಪರಪ್ಪನ ಅಗ್ರಹಾರದಲ್ಲಿ ಸೆರೆವಾಸ ಅನುಭವಿಸುತ್ತಿದ್ದಾನೆ.

ಮದನಿ ಬಾಲ್ಯ-ಬೆಳವಣಿಗೆ  

1965ರಲ್ಲಿ ಕೇರಳ ಸಸ್ತಮಕೊಟ್ಟದಲ್ಲಿ ಜನಿಸಿದ ನಾಸಿರ್ ಮದನಿ, ಮದರಸಾಗಳಲ್ಲಿ  ಶಿಕ್ಷಣ ಮುಗಿಸಿದ್ದಾನೆ. ಮುಸ್ಲಿಂ ಸಂಘಟನೆಗಳೊಂದಿಗೆ ಗುರ್ತಿಸಿ ಪ್ರಚೋದನಕಾರಿ ಭಾಷಣ ಮಾಡಿ ಭಯೋತ್ಪಾದನೆಗೆ ಯುವಕರನ್ನ ಪ್ರೇರೇಪಿಸುತ್ತಿದ್ದ.  1992ರಲ್ಲಿ ನಿಷೇಧಿಸಲಾದ ಇಸ್ಲಾಮಿಕ್ ಸೇವಕ ಸಂಘದ ಸ್ಥಾಪನೆ ಮಾಡಿ RSS​ ಕಾರ್ಯಕರ್ತರಿಂದ ಮಾರಣಾಂತಿಕವಾಗಿ ಹಲ್ಲೆಗೆ ಒಳಗಾಗಿದ್ದ. 1993ರಲ್ಲಿ ಪೀಪಲ್ಸ್ ಡೆಮಾಕ್ರೆಟಿಕ್ ಪಾರ್ಟಿ ಸ್ಥಾಪಿಸಿ ರಾಜಕೀಯ ಪಕ್ಷಗಳ ಸ್ನೇಹ ಗಳಿಸಿದ್ದ.

ಇಷ್ಟೇ ಅಲ್ಲ, ಬಿಜೆಪಿ ನಾಯಕ ಎಲ್​.ಕೆ.ಅಡ್ವಾಣಿ ಹತ್ಯೆಗೆ ಯತ್ನಿಸಿದ್ದ. 1998ರಲ್ಲಿ  ಕೊಯಿಮತ್ತೂರಿನಲ್ಲಿ ಬಾಂಬ್ ಸ್ಫೋಟದಲ್ಲಿ ಭಾಗಿಯಾಗಿ 58 ಮಂದಿ ಸಾವಿಗೆ ಕಾರಣನಾಗಿದ್ದ.

ಕೇರಳದಲ್ಲಿ ಮದನಿಗೇಕೆ ಮಹತ್ವ?

ಕೇರಳದಲ್ಲಿ ಮದನಿಗೆ ರಾಜಕೀಯ ಪ್ರಬಾವ ಬಹಳಷ್ಟಿದೆ. ಅಲ್ಲಿನ ರಾಜಕೀಯ ಪಕ್ಷಗಳು ಮನದಿ ಪರ ವಕಾಲತ್ತು ವಹಿಸಿವೆ. ಈತನನ್ನು ಸಂತುಷ್ಟಗೊಳಿಸಿದ್ರೆ ಮುಸ್ಲಿಂರ ವೋಟ್ ಸಿಗುತ್ತೆ, ಅಧಿಕಾರ ಹಿಡಿಯೋದು ಸುಲಭ ಅಂತಾ ರಾಜಕೀಯ ಪಕ್ಷಗಳು ಮದನಿ ಬೆನ್ನ ಹಿಂದೆ ಬಿದ್ದಿವೆ.

ಈ ಮಧ್ಯೆ ಮದನಿ ಉಳಿವಿಗಾಗಿ ರಾಜಕೀಯ ಪಕ್ಷಗಳು ಮುಗಿಬಿದ್ದಿವೆ. 2006ರ ಮಾರ್ಚ್ 16ರಂದು ಕೇರಳ ಅಸೆಂಬ್ಲಿಯಲ್ಲಿ ಮದನಿ ಅಮಾಯಕ, ಮಾನವೀಯ ನೆಲೆ­ಯಲ್ಲಿ  ಬಿಡುಗಡೆಗೆ ಕೇರಳ ವಿಧಾನಸಭೆ ನಿರ್ಣಯ ಅಂಗೀಕರಿಸಿದೆ. ಒಟ್ನಲ್ಲಿ ಮದನಿ ಬೆಂಬಲಕ್ಕೆ ಪಿಡಿಪಿ ಬಲವಾಗಿ ನಿಂತಿದ್ದು ಬಿಡುಗಡೆಗೆ ಆಗ್ರಹಿಸಿ ಱಲಿ ನಡೆಸುತ್ತಿದೆ. ಮುಂದೇನಾಗುತ್ತೋ ಎಂಬುವುದನ್ನು ಕಾದು ನೋಡಬೇಕು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅನೇಕಲ್‌ನಲ್ಲಿ ಭೀಕರ ಅಪಘಾತ; 20 ವಾಹನಕ್ಕೆ ಕಂಟೈನರ್ ಡಿಕ್ಕಿ, 2ಕ್ಕೂ ಹೆಚ್ಚು ಸಾವು, ಹಲವರು ಗಂಭೀರ
ಅಪ್ರಾಪ್ತರಿಂದ 8ನೇ ಕ್ಲಾಸ್ ಬಾಲಕಿಗೆ ಕಿರುಕುಳ: ನಾಲ್ವರು ಬಾಲಕರ ತಾಯಂದಿರನ್ನು ಬಂಧಿಸಿದ ಪೊಲೀಸರು