
ಚಿಕ್ಕಬಳ್ಳಾಪುರ(ನ.27): ಆ ಗ್ರಾಮ ಪಂಚಾಯ್ತಿಯಲ್ಲಿ ಅನೇಕ ಕಾಮಗಾರಿಗಳು ನಡೆದಿವೆ. ಅವು ಕೇವಲ ದಾಖಲೆಗಳಲ್ಲಿ ಮಾತ್ರ. ಸ್ಥಳಕ್ಕೆ ಹೋಗಿ ನೋಡಿದರೆ ಅಲ್ಲಿ ಯಾವ ಕಾಮಗಾರಿಯೂ ಆಗಿಲ್ಲ. ಸರ್ಕಾರಿ ಕೆಲಸ ದೇವರ ಕೆಲಸ ಎನ್ನುತ್ತಾರೆ. ಅದರೆ ಗ್ರಾಮಗಳ ಅಭಿವೃದ್ಧಿಗೆ ಕೊಡುವ ಸರ್ಕಾರದ ಹಣವನ್ನು ಈತ ತನ್ನ ಹಣ ಎಂಬಂತೆ ದುರ್ಬಳಕೆ ಆ ಗ್ರಾಮದ ಪಿಡಿಓ ನರಸಿಂಹಯ್ಯ.
ಬಾಗೇಪಲ್ಲಿ ತಾಲ್ಲೂಕು ದೇವರಗುಡಿಪಲ್ಲಿಗ್ರಾ.ಪಂ.ನಲ್ಲಿ 2011 ರಿಂದ 2015 ರ ವರೆಗೆ ನರಸಿಂಹಯ್ಯ ಪಿಡಿಓ ಆಗಿದ್ದರು. ಈ ವೇಳೆ ಗ್ರಾಮದ ಅಭಿವೃದ್ಧಿಗೆ ಬಂದ ಹಣವನ್ನು ಆ ಕೆಲಸ ಮಾಡಿದ್ದೇವೆ. ಈ ಕೆಲಸ ಮಾಡಿದ್ದೀವೆ ಅಂತ ನಕಲಿ ದಾಖಲೆ ಸೃಷ್ಟಿಸಿ ಬಂದ ಕೋಟಿ ಕೋಟಿ ಹಣವನ್ನ ನುಂಗಿ ನೀರು ಕುಡಿದಿದ್ದಾನೆ. ಈತನ ಈ ಲೂಟಿಗೆ ಕೆಲ ಜನಪ್ರತಿನಿಧಿಗಳು, ಅಧಿಕಾರಿಗಳು ಕೂಡ ಸಾಥ್ ನೀಡಿದ್ದಾರೆ.
ಇನ್ನೂ ಇದಷ್ಟೆ ಅಲ್ಲ ಕೋಂಡಂವಾರಿಪಲ್ಲಿ ಗ್ರಾಮದಲ್ಲಿ ಸ್ಮಶಾನಕ್ಕೆ ಕಾಂಪೌಂಡ್, ರಸ್ತೆ, ಚರಂಡಿ, ಗಿಡ ನೆಡುವುದು ಹೀಗೆ ನರೇಗಾ ಕಾಮಗಾರಿ ಸೇರಿ ಯಾವುದೇ ಕಾಮಗಾರಿಗಳನ್ನ ಮಾಡದೇ ಕೋಟ್ಯಾಂತರ ರೂಪಾಯಿ ಗುಳುಂ ಮಾಡಿರುವುದು ತನಿಖೆ ವೇಳೆ ಬಯಲಾಗಿದೆ.
ಇದುವರೆಗೆ ಮೂರು ಭಾರಿ ಸಸ್ಪೆಂಡ್ ಆಗಿದ್ದು, ಇದೀಗ ಅಧಿಕಾರಿಗಳು ನರಸಿಂಹಯ್ಯನನ್ನು ಡಿಸ್ಮಿಸ್ ಮಾಡಲು ಮುಂದಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.