
ನವದೆಹಲಿ(ನ.27): ಇಂದಿನ ಪ್ರಧಾನಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ರೆಡಿಯೋ ಕಾರ್ಯಕ್ರಮ ಬಹಳಷ್ಟು ವಿಚಾರಗಳಿಂದ ಮಹತ್ವದಾಗಿತ್ತು. 26 ನೇ ಆವೃತ್ತಿಯ ಇಂದಿನ ಮನ್ ಕೀ ಬಾತ್ ನೋಟ್ ಬ್ಯಾನ್ ಬಳಿಕದ ಮೊದಲನೇ ರೆಡಿಯೋ ಕಾರ್ಯಕ್ರಮವಾಗಿತ್ತು. ಈ ನಿಟ್ಟಿನಲ್ಲಿ ಇಂದಿನ ಮನ್ ಕೀ ಬಾತ್ ಹಲವರಲ್ಲಿ ಕುತೂಹಲ ಮೂಡಿಸಿತ್ತು.
ಇಂದಿನ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಪ್ರಮುಖವಾಗಿ ಯೋಧರೊಂದಿಗಿನ ದೀಪಾವಳಿ ಆಚರಣೆ, ನೋಟ್ ಬ್ಯಾನ್ ವಿಚಾರ ಹಾಗೂ ಡಿಜಿಟಲೀಕರಣದ ಕುರಿತಾಗಿ ಮಾತನಾಡಿದರು. ಇಷ್ಟೇ ಅಲ್ಲದೆ ತಮ್ಮ ಮಾತಿನ ಮಧ್ಯೆ ಕರ್ನಾಟಕದ ಕೊಪ್ಪಳ ಜಿಲ್ಲೆಯ ಹಿಟ್ನಾಳ್ ಗ್ರಾಮದ ಯಪ್ಪಲ್ಲ ಬೆಳಂಕರ್'ರವರಿಗೆ ಅಭಿನಂದನೆಯನ್ನೂ ಸಲ್ಲಿಸಿದರು.
ಮನ್ ಕೀ ಬಾತ್'ನಲ್ಲಿ ಮನದಾಳದ ಮಾತನ್ನು ಬಿಚ್ಚಿಟ್ಟ ಮೋದಿ ಈ ಬಾರಿಯ ದಿಪಾವಳಿಯನ್ನು ಯೋಧರೊಂದಿಗೆ ಆಚರಿಸಿದ ಕ್ಷಣಗಳನ್ನು ನೆನೆದರು. ಜನರು ಈ ಬಾರಿಯ ಯೋಧರಿಗಾಘಿ ಸಮರ್ಪಿಸಿದ್ದು, ಇದರ ಪ್ರಭಾವ ವೀರ ಜವಾನನ ಮುಖದಲ್ಲಿ ಪ್ರತಿಫಲಿಸುತ್ತಿತ್ತು. ಮುಂದೆಯೂ ಸಂಭ್ರಮಾಚರಣೆಯಲ್ಲಿ ನಮ್ಮ ದೇಶವನ್ನು ಕಾಯುವ ಸೈನಿಕರನ್ನು ನೆನಪಿಸಿಕೊಳ್ಳುವ ಅಭ್ಯಾಸ ರೂಢಿಸಿಕೊಳ್ಳಲು ಮನವಿ ಮಾಡಿಕೊಂಡರು.
ಜನರ ಅಪೇಕ್ಷೆಯಂತೆ 'ನೋಟ್ ಬ್ಯಾನ್' ಕುರಿತಾಗಿ ಮಾತನಾಡಿದ ಮೋದಿ ನ.8ರಂದು 500, 1000 ನೋಟ್ ರದ್ದು ಮಾಡಿದ್ದು, ದೇಶದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಮಹಾನ್ ಅಭಿಯಾನ ಆರಂಭಿಸಿದೆ. ಈ ನಿರ್ಣಯ ಅತ್ಯಂತ ಕಠಿಣವಾದದ್ದು ಎಂಬುದು ನನಗೆ ಅರಿವಿತ್ತು. ನೋಟ್ ಬ್ಯಾನ್ನಿಂದ ಜನಸಾಮಾನ್ಯರ ಮೇಲೆ ಪರಿಣಾಮ ಬೀರಿದ್ದು, ಇದರಿಂದ, ಸಾಮಾನ್ಯರಿಗೆ ಸಂಕಷ್ಟ ಎದುರಾಗುತ್ತದೆ ಎಂಬುದರ ಅರಿವಿತ್ತು. ಈಗ ಪರಿಸ್ಥಿತಿ ತಿಳಿಯಾಗುತ್ತಿದೆ, ಸಮಸ್ಯೆ ನಿವಾರಣೆಯಾಗುತ್ತಿದೆ. ಈ ಸಂಕಷ್ಟದಿಂದ ಹೊರಬರಲು 50 ದಿನ ಬೇಕೇ ಬೇಕು. ನೋಟ್ ಬ್ಯಾನ್ ನಿರ್ಧಾರವನ್ನು ಇಡೀ ವಿಶ್ವವೇ ಅಚ್ಚರಿಯಿಂದ ನೋಡುತ್ತಿದೆ.
ನೋಟ್ ಬ್ಯಾನ್ ರದ್ದುಪಡಿಸುವ ನಿರ್ಧಾರವನ್ನು ಜನ ಬೆಂಬಲಿಸಿದ್ದಾರೆ. ನೋಟ್ ಬ್ಯಾನ್ ನಂತರ ಆದ ಅವ್ಯವಸ್ಥೆ ಬಗ್ಗೆ ನನಗೆ ಅರಿವಿದೆ. ಈ ಸಮಸ್ಯೆ ಪರಿಹರಿಸಲು ಬ್ಯಾಂಕ್, ಅಂಚೆ ಕಚೇರಿಯ ಸಾವಿರಾರು ಮಂದಿ ಕೆಲಸ ನಿರ್ವಹಿಸಿದ್ದಾರೆ. ಇದು ಪರಿವರ್ತನೆಯ ಆರಂಭ ಎಂದು ತಿಳಿದು ದಿನಗಟ್ಟಲೆ ದುಡಿದಿದ್ದಾರೆ. ದೇಶದ ಸುಧಾರಣೆಯತ್ತ ಮೊದಲ ಹೆಜ್ಜೆ ಎಂದು ತಿಳಿದು ಕೆಲಸ ಮಾಡಿದ್ದಾರೆ. ಅವರೆಲ್ಲರ ನಿರಂತರ ಶ್ರಮದಿಂದಾಗಿ ಈಗ ಪರಿಸ್ಥಿತಿ ತಿಳಿಯಾಗುತ್ತಿದೆ.
ದೇಶದಲ್ಲಿರುವ ಕಪ್ಪು ಹಣ ನಿಗ್ರಹಿಸಲು ಸರ್ಕಾರ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದ್ದರೂ ಕೆಲವರೂ ಇನ್ನೂ ಕಪ್ಪುಹಣವನ್ನು ಬೆಂಬಲಿಸುತ್ತಿರುವುದು ದುರಂತ. ಯಾವುದೇ ಕಾರಣಕ್ಕೂ ಬೇರೆಯವರ ಬ್ಯಾಂಕ್ ಖಾತೆ ರುಪಯೋಗಪಡಿಸಿಕೊಳ್ಳಬೇಡಿ, ಖಾತೆ ದುರುಪಯೋಗಪಡಿಸಿಕೊಳ್ಳುವುದು ಅಕ್ಷಮ್ಯ, ಇದಕ್ಕೆ ತಕ್ಕ ಶಿಕ್ಷೆ ಸಿಗುತ್ತದೆ.
‘ಏನಾದರೂ ಮಾಡಿ, ಆದರೆ ಬಡ ಜನರೊಂದಿಗೆ ಚೆಲ್ಲಾಟವಾಡಬೇಡಿ’ ಕಪ್ಪುಹಣ ನಿರ್ಮೂಲನೆಗೆ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕಾಳಧನಿಕರಿಗೆ ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ನೀಡಿದರು.
ಇದೇ ವೇಳೆ ಕರ್ನಾಟಕದ ಯಲ್ಲಪ್ಪನನ್ನು ನೆನಪಿಸಿಕೊಂಡ ಮೋದಿ, ಕರ್ನಾಟಕದ ಕೊಪ್ಪಳ ಜಿಲ್ಲೆ ಹಿಟ್ನಾಳ್ ಗ್ರಾಮದ ಯಪ್ಪಲ್ಲ ಬೆಳಂಕರ್ ಅಭಿನಂದನೆ ಸಲ್ಲಿಸಿದರು. ಜೊತೆಗೆ ಯಲ್ಲಪ್ಪರೊಂದಿಗಿನ ತನ್ನ ಸಂಭಾಷಣೆಯನ್ನೂ ಮನ್ ಕೀ ಬಾತ್'ನಲ್ಲಿ ಜನರಿಗೆ ಕೇಳಿಸಿದರು. ನೋಟ್ ಬ್ಯಾನ್ ಕ್ರಮ ಪ್ರಶಂಸನಿಯ ಎಂದ ಯಲ್ಲಪ್ಪ, ಈ ನಿರ್ಧಾರವನ್ನು ಮನಃಪೂರ್ತಿಯಾಗಿ ನಾವು ಒಪ್ಪಿಕೊಂಡಿದ್ದೇವೆ. ಭಾರತೀಯರಿಗೆ ಇದೆಲ್ಲಕ್ಕಿಂತ ‘ಅಚ್ಚೇ ದಿನ್’ ಬೇರಾವುದೂ ಇಲ್ಲ ಎಂದಿದ್ದಾರೆ.
ಇನ್ನು ಡಿಜಿಟಲ್ ಜಗತ್ತಿಗೆ ಪ್ರವೇಶಿಸಿ ಎಂದು ಕರೆ ನೀಡಿದ ಮೋದಿ ನೋಟ್ ಇಲ್ಲದೇ ವ್ಯಾಪಾರ ನಡೆಸುವುದನ್ನು ಕಲಿತುಕೊಳ್ಳಿ.
ಮೊಬೈಲ್ನಲ್ಲಿ ನಗದು ರಹಿತ ವಹಿವಾಟು ನಡೆಸುವುದನ್ನು ಕಲಿಯಿರಿ ಯಾಕೆಂದರೆ ಆಧುನಿಕ ತಂತ್ರಜ್ಞಾನ ಸುರಕ್ಷಿತ ಮತ್ತು ಸುಲಭವಾದದು. ಇದಕ್ಕೆ ಸ್ಮಾರ್ಟ್ ಫೋನ್ ಅಗತ್ಯವಿಲ್ಲ, ಕಡಿಮೆ ದರದ ಮೊಬೈಲ್ ಸಾಕು, ಬಡವರು, ಕೃಷಿಕರು, ಅನಕ್ಷರಸ್ಥರೂ ಕೂಡಾ ಮೊಬೈಲ್ ತಂತ್ರಜ್ಞಾನ ಕಲಿಯಬಹುದು. ದೇಶವನ್ನು ಆರ್ಥಿಕ ಉನ್ನತಿಗೆ ಕೊಂಡೊಯ್ಯುವ ಸಮಯ ಬಂದಿದೆ. ಭಾರತದ ಆಧುನಿಕ ಯುವಕ- ಯುವತಿಯರು ಇದಕ್ಕೆ ಕೈಜೋಡಿಸಬೇಕು ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.