
ಲಖನೌ: ಸಾಮಾನ್ಯವಾಗಿ ಕಂಪನಿಗಳ ಮುಖ್ಯಸ್ಥರು ಅಥವಾ ಶ್ರೀಮಂತರೆಂದರೆ ಐಶಾರಾಮಿ ಕಾರುಗಳಲ್ಲೇ ಓಡಾಡುತ್ತಾರೆ ಎಂಬ ಕಲ್ಪನೆ ನಮ್ಮದು, ಅದು ಸತ್ಯವೂ ಹೌದು. ಆದರೆ, ಪ್ರಮುಖ ಅಂತರ್ಜಾಲ ಮಾರಾಟ ಸಂಸ್ಥೆ ‘ಪೇಟಿಎಂ' ಮುಖ್ಯಸ್ಥ ವಿಜಯ್ ಶೇಖರ್ ಅವರು ಉತ್ತರಪ್ರದೇಶ ಸಿಎಂ ಅಖಿಲೇಶ್ ಯಾದವ್‌ರನ್ನು ಭೇಟಿ ಮಾಡಲು ಸೈಕಲ್ ರಿಕ್ಷಾದಲ್ಲಿ ಬಂದಿದ್ದಾರೆ.
‘ಯಶ್ ಭಾರ್ತಿ' ಪ್ರಶಸ್ತಿ ಸ್ವೀಕರಿಸಲು ಲಖನೌಗೆ ಬಂದಿದ್ದ ಶರ್ಮಾ ಅವರು ಅಖಿಲೇಶ್'ರನ್ನು ಭೇಟಿ ಮಾಡಲು ಹೊರಟಿದ್ದರು. ಅರ್ಧದಲ್ಲೇ ಲಖನೌನ ಸಂಚಾರದಟ್ಟಣೆಯಲ್ಲಿ ಅವರ ಕಾರು ಸಿಲುಕಿಕೊಂಡಿತು. ಕೂಡಲೇ ಅವರು ಕಾರಿನಿಂದ ಇಳಿದು, ಅಲ್ಲೇ ಇದ್ದ ಸೈಕಲ್ ರಿಕ್ಷಾವನ್ನು ಏರಿದರು.
ಕಾಳಿದಾಸ ಮಾರ್ಗದಲ್ಲಿರುವ ಅಖಿಲೇಶ್ ಅವರ ನಿವಾಸಕ್ಕೆ ಬಂದೊಡನೆ, ಶರ್ಮಾ ಹಾಗೂ ರಿಕ್ಷಾ ಚಾಲಕನನ್ನು ಸಂಪೂರ್ಣ ಭದ್ರತಾ ಪರೀಕ್ಷೆ ನಡೆಸಿ ಪ್ರವೇಶ ನೀಡಲಾಯಿತು.
ಸೈಕಲ್'ನಲ್ಲಿ ಬಂದ ಶರ್ಮಾರ ಬಗ್ಗೆ ಅಖಿಲೇಶ್ ಸಂತಸ ವ್ಯಕ್ತಪಡಿಸಿದ್ದಾರೆ. ರಿಕ್ಷಾ ಚಾಲಕನಿಗೆ ದೀಪಾವಳಿ ಕೊಡುಗೆಯಾಗಿ 6 ಸಾವಿರ ರೂ. ನೀಡಿದ್ದಾರೆ. ಅಷ್ಟೇ ಅಲ್ಲ, ಚಾಲಕನಿಗೆ ಮನೆ, ಇ-ರಿಕ್ಷಾ ಹಾಗೂ ಆತನ ಪತ್ನಿಗೆ ಸಮಾಜವಾದಿ ಪಿಂಚಣಿ ಯೋಜನೆಯ ಲಾಭವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ಶರ್ಮಾ ಸೈಕಲ್ ರಿಕ್ಷಾದಲ್ಲಿ ಬಂದ ಫೋಟೋವನ್ನು ಅಖಿಲೇಶ್ ಟ್ಟಿಟರ್'ನಲ್ಲಿ ಅಪ್ಲೋಡ್ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.