ದೀಪಾವಳಿಗೆ ಸರ್ಕಾರದಿಂದ ಬಂಪರ್ ಕೊಡುಗೆ

By Web DeskFirst Published Oct 31, 2018, 1:01 PM IST
Highlights

ದೀಪಾವಳಿಯ ಈ ಸಂದರ್ಭದಲ್ಲಿ ಸರ್ಕಾರ ಭರ್ಜರಿ ಗುಡ್ ನ್ಯೂಸ್ ಒಂದನ್ನು ನೀಡಿದೆ. ಹಬ್ಬಕ್ಕೂ ಮುನ್ನವೇ ದಿಲ್ಲಿ ಸರ್ಕಾರ ಶಿಕ್ಷಣ ಇಲಾಖೆ ನೌಕರರಿಗೆ ವೇತನ ಏರಿಕೆಯ ಕೊಡುಗೆಯನ್ನು ನೀಡಿದೆ. 

ನವದೆಹಲಿ :  ದಿಲ್ಲಿ ಸರ್ಕಾರ ತನ್ನ ನೌಕರರಿಗೆ ಭರ್ಜರಿ ದೀಪಾವಳಿ  ಗಿಫ್ಟ್ ನೀಡುತ್ತಿದೆ. 7ನೇ ವೇತನ ಆಯೋಗದ ಅನ್ವಯ ಸರ್ಕಾರಿ ನೌಕರರ ವೇತನದಲ್ಲಿ ಏರಿಕೆ ಮಾಡಲಾಗುತ್ತಿದೆ. 

ಶಿಕ್ಷಣ ಇಲಾಖೆಯ ಸಿಬ್ಬಂದಿಗೆ 7ನೇ ವೇತನ ಆಯೋಗದ ಅನ್ವಯ ವೇತನದಲ್ಲಿ ಏರಿಕೆ ಮಾಡಲಾಗುತ್ತಿದೆ ಎಂದು ಆಮ್ ಆದ್ಮಿ ನೇತೃತ್ವದ ದಿಲ್ಲಿ ಸರ್ಕಾರ ಹೇಳಿದೆ. ಶಿಕ್ಷಕರು, ವಿಶ್ವವಿದ್ಯಾಲಯದ ಸಿಬ್ಬಂದಿ, ಆಡಳಿತ ಸಿಬ್ಬಂದಿಗೂ ಕೂಡ ವೇತನದಲ್ಲಿ ಏರಿಕೆ ಮಾಡಲಾಗುತ್ತದೆ ಎಂದು ಹೇಳಿದೆ. 

7ನೇ ವೇತನ ಆಯೋಗದಂತೆ ಜಾರಿಯಾಗುವ ಹೆಚ್ಚಳವು 2016ರ ಜನವರಿ 1ರಿಂದಲೇ ಅನ್ವಯ ಮಾಡಲಾಗುತ್ತದೆ. ಒಟ್ಟು 34 ತಿಂಗಳ ಅರಿಯರ್ಸ್ ಕೂಡ ಅವರು ಪಡೆದುಕೊಳ್ಳಲಿದ್ದಾರೆ. 

ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿಯೇ ಶಿಕ್ಷಣ ಇಲಾಖೆಯ ವೇತನ ಏರಿಕೆಗೆ ದಿಲ್ಲಿ ಸರ್ಕಾರ ಅಂಕಿತ ನೀಡಿತ್ತು.

click me!