ಸರ್ಕಾರ v/s ವೈದ್ಯರು: ಮುಂದುವರೆದಿದೆ ರೋಗಿಗಳ ಪರದಾಟ

Published : Nov 17, 2017, 01:21 PM ISTUpdated : Apr 11, 2018, 12:52 PM IST
ಸರ್ಕಾರ v/s ವೈದ್ಯರು: ಮುಂದುವರೆದಿದೆ ರೋಗಿಗಳ ಪರದಾಟ

ಸಾರಾಂಶ

ಖಾಸಗಿ ಆಸ್ಪತ್ರೆಗಳ ನಿಯಂತ್ರಣ ವಿಧೇಯಕಕ್ಕೆ ವೈದ್ಯರಿಂದ ವಿರೋಧ ಮುಂದುವರೆದಿದೆ. ರಮೇಶ್ ಕುಮಾರ್ ತರಲು ಹೊರಟಿರುವ ಕಾಯ್ದೆಯನ್ನು ನಾವು ಒಪ್ಪಲ್ಲ, ಸುವರ್ಣ ನ್ಯೂಸ್​​ಗೆ ಫನಾ ರಾಜ್ಯ ಉಪಾಧ್ಯಕ್ಷ ಡಾ. ಪ್ರಶಾಂತ್​ ಕಡಪಟ್ಟಿ ತಿಳಿಸಿದ್ದಾರೆ.

ಬೆಂಗಳೂರು: ಖಾಸಗಿ ಆಸ್ಪತ್ರೆಗಳ ನಿಯಂತ್ರಣ ವಿಧೇಯಕಕ್ಕೆ ವೈದ್ಯರಿಂದ ವಿರೋಧ ಮುಂದುವರೆದಿದೆ. ರಮೇಶ್ ಕುಮಾರ್ ತರಲು ಹೊರಟಿರುವ ಕಾಯ್ದೆಯನ್ನು ನಾವು ಒಪ್ಪಲ್ಲ, ಸುವರ್ಣ ನ್ಯೂಸ್​​ಗೆ ಫನಾ ರಾಜ್ಯ ಉಪಾಧ್ಯಕ್ಷ ಡಾ. ಪ್ರಶಾಂತ್​ ಕಡಪಟ್ಟಿ ತಿಳಿಸಿದ್ದಾರೆ.

ವಿಧೇಯಕದಲ್ಲಿ ಚಿಕಿತ್ಸೆ ದರ ನಿಗದಿಪಡಿಸುವ ಅಂಶವನ್ನು ತೆಗೆದು ಹಾಕಬೇಕು, ಜಿಲ್ಲಾಧಿಕಾರಿ ಮತ್ತು ಸಿಇಒ ವಿಚಾರಣೆ ಸಮಿತಿಯಿಂದ ದೂರ ಇರಬೇಕು, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗೆ ಒಂದೇ ಕಾನೂನು ಇರಬೇಕು, ವೈದ್ಯರಿಗೆ ಜೈಲು ಶಿಕ್ಷೆಯಿಂದ ವಿಮುಕ್ತಿ ಇರಬೇಕು ಎಂಬುವುದು ನಮ್ಮ ಆಗ್ರಹ, ಇವುಗಳನ್ನು ಬಿಟ್ಟು ಉಳಿದ ಕಾನೂನುಗಳನ್ನು ನಾವು ಒಪ್ಪುತ್ತೇವೆ, ಎಂದು ಅವರು ಹೇಳಿದ್ದಾರೆ.

ಮುಂದುವರಿದ ರೋಗಗಳ ಪರದಾಟ:

ವೈದ್ಯರ ಮುಷ್ಕರದ ಬಿಸಿ ರಾಜ್ಯಾದ್ಯಂತ ಜೋರಾಗಿದೆ. ಇದರಿಂದಾಗಿ ರೋಗಿಗಳು ಇನ್ನಿಲ್ಲದ ಪರದಾಟ ನಡೆಸುವಂತಾಗಿದೆ.

ಇವತ್ತು ರಾಯಚೂರಿನಲ್ಲೂ ಚಿಕಿತ್ಸೆಗಾಗಿ ರೋಗಿಗಳು ಪರದಾಡಿದ ಪ್ರಸಂಗಗಳು ಕಂಡು ಬಂದ್ವು. ಇಲ್ಲಿನ YTPS ಮುಂದೆ ಟ್ರಾಕ್ಟರ್ ನಲ್ಲಿ ಹೋಗುತ್ತಿದ್ದಾಗ ಅಪಾಘಾತ ಸಂಭವಿಸಿ ಸ್ಥಳೀಯರಿಬ್ಬರು ಗಾಯಗೊಂಡಿದ್ದರು. ಇವರನ್ನು ಎರಡು ಮೂರು ಖಾಸಗಿ ಆಸ್ಪತ್ರೆಗಳಿಗೆ ಕರೆದುಕೊಂಡು ಹೋದ್ರೂ ಚಿಕಿತ್ಸೆ ದೊರೆತಿಲ್ಲ. ಕೊನೆಗೆ 108 ಆಂಬುಲೆನ್ಸ್’ನಲ್ಲಿ ನಗರದ ಸರ್ಕಾರಿ ರಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಲಾಯ್ತು. ಇವತ್ತು ಜಿಲ್ಲೆಯ 90 ಖಾಸಗಿ ವೈದ್ಯರು ಬೆಳಗಾವಿಯಲ್ಲಿ ನಡೆಯುತ್ತಿರುವ ವೈದ್ಯರ ಮುಷ್ಕರ ದಲ್ಲಿ ಭಾಗವಹಿಸಲು ಹೊರಟಿದ್ದು,  ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಲಭ್ಯವಿಲ್ಲ. ಹಾಗಾಗಿ ರೋಗಿಗಳು ಚಿಕಿತ್ಸೆ ಸಿಗದೇ ಪರದಾಡುತ್ತಿದ್ದಾರೆ.

ಗದಗದಲ್ಲಿ ವೈದ್ಯರ ಮುಷ್ಕರದಿಂದಾಗಿ ಸೂಕ್ತ ಚಿಕಿತ್ಸೆ ಸಿಗದೆ ನವವಿವಾಹಿತ ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ. ರೋಣ ತಾಲೂಕಿನ ಗಜೇಂದ್ರಗಡ ಜನತಾ ಫ್ಲಾಟ್​ ನಿವಾಸಿಯಾಗಿರುವ ರವಿ ವೀರಪ್ಪ ಭಜಂತ್ರಿ ಕಳೆದ 5 ದಿನಗಳ ಹಿಂದಷ್ಟೇ ಮದುವೆಯಾಗಿದ್ದರು. ಡೆಂಘಿ ಜ್ವರದಿಂದ ಬಳಲುತ್ತಿದ್ದ ರವಿ, ಚಿಕಿತ್ಸೆಗಾಗಿ ಎರಡು ದಿನಗಳಿಂದ ಖಾಸಗಿ ಆಸ್ಪತ್ರೆಗಳಿಗೆ ಅಲೆದಿದ್ದರು. ಯಾವ ಖಾಸಗಿ ಆಸ್ಪತ್ರೆಯಲ್ಲೂ ಸೂಕ್ತ ಚಿಕಿತ್ಸೆ ಸಿಕ್ಕಿರಲಿಲ್ಲ. ಹೀಗಾಗಿ ಇಂದು ಗಜೇಂದ್ರಗಡ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ರವಿ ಭಜಂತ್ರಿ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನವವಿವಾಹಿತ ರವಿ ಭಜಂತ್ರಿ ಸಾವನ್ನಪ್ಪಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರಿನ 2ನೇ ಏರ್‌ಪೋರ್ಟ್‌, ಗುರುತಿಸಿರೋ ಈ 3 ಸ್ಥಳಗಳಲ್ಲಿ ಯಾವುದು ಬೆಸ್ಟ್? ಅಧ್ಯಯನಕ್ಕೆ ಟೆಂಡರ್ ಕರೆದ ಸರ್ಕಾರ!
ನವೋದಯ ಪರೀಕ್ಷೆಯಲ್ಲಿ ಅಕ್ರಮ ಆರೋಪ; ಬೀದರ್‌ನಲ್ಲಿ ಬಿಇಓಗೆ ವಿದ್ಯಾರ್ಥಿ ಪೋಷಕರಿಂದ ತರಾಟೆ