ಜನರ ಮನೆ ಬಾಗಿಲಿಗೆ ಸಾರ್ವಜನಿಕ ಸೇವೆಗಳು

Published : Nov 17, 2017, 12:49 PM ISTUpdated : Apr 11, 2018, 12:43 PM IST
ಜನರ ಮನೆ ಬಾಗಿಲಿಗೆ ಸಾರ್ವಜನಿಕ ಸೇವೆಗಳು

ಸಾರಾಂಶ

40 ಸಾರ್ವಜನಿಕ ಸೇವೆಗಳನ್ನು ನಾಗರಿಕರ ಮನೆ ಬಾಗಿಲಿಗೇ ಒದಗಿಸುವ ನೂತನ ಯೋಜನೆಯೊಂದನ್ನು ದೆಹಲಿ ಸರ್ಕಾರ ಜಾರಿಗೆ ತರಲಿದೆ. ಮೊದಲ ಹಂತದಲ್ಲಿ ಈ ಯೋಜನೆಗೆ 8 ಸಾರ್ವಜನಿಕ ಸೇವಾ ಇಲಾಖೆಗಳನ್ನು ಆಯ್ಕೆ ಮಾಡಲಾಗಿದೆ.

ನವದೆಹಲಿ(ನ.17) ಜಾತಿ ಪ್ರಮಾಣಪತ್ರ, ಚಾಲನಾ ಪರವಾನಗಿ, ನೀರಿನ ಸಂಪರ್ಕ ಸೇರಿದಂತೆ 40 ಸಾರ್ವಜನಿಕ ಸೇವೆಗಳನ್ನು ಪಡೆಯಲು ಜನರು ಸರ್ಕಾರಿ ಕಚೇರಿಯ ಮುಂದೆ ಸಾಲಿನಲ್ಲಿ ನಿಲ್ಲಬೇಕಾಗಿಲ್ಲ. ಅವುಗಳನ್ನು ನಾಗರಿಕರ ಮನೆ ಬಾಗಿಲಿಗೇ ಒದಗಿಸುವ ನೂತನ ಯೋಜನೆಯೊಂದನ್ನು ದೆಹಲಿ ಸರ್ಕಾರ ಜಾರಿಗೆ ತರಲಿದೆ. ಮೊದಲ ಹಂತದಲ್ಲಿ ಈ ಯೋಜನೆಗೆ 8 ಸಾರ್ವಜನಿಕ ಸೇವಾ ಇಲಾಖೆಗಳನ್ನು ಆಯ್ಕೆ ಮಾಡಲಾಗಿದೆ.

ಮನೆ ಬಾಗಿಲಿಗೇ ಸೇವೆ ಹೇಗೆ?

ಖಾಸಗಿ ಸಂಸ್ಥೆ ಕಾಲ್ ಸೆಂಟರ್'ಗಳನ್ನು ತೆರೆಯಲಿದ್ದು, ಸಹಾಯಕರನ್ನು ನೇಮಿಸಲಿದೆ. ಒಂದು ವೇಳೆ ವ್ಯಕ್ತಿಯೊಬ್ಬ ಚಾಲನಾ ಪರವಾನಗಿ ಮಾಡಿಸಿಕೊಳ್ಳಬೇಕಾಗಿದ್ದರೆ ಕಾಲ್ ಸೆಂಟರ್‌'ಗೆ ಫೋನ್ ಮಾಡಿ ಮಾಹಿತಿ ನೀಡಿದರೆ ಸಾಕು. ಬಳಿಕ ಸಂಚಾರಿ ಸಹಾಯಕರು ಅರ್ಜಿದಾರರ ಮನೆಗೆ ತೆರಳಿ ಅಗತ್ಯವಿರುವ ದಾಖಲೆ ಪಡೆದುಕೊಳ್ಳಲಿದ್ದಾರೆ.

ಆದರೆ, ವಾಹನ ಚಾಲನೆಯ ಪರೀಕ್ಷೆಗಾಗಿ ಅರ್ಜಿದಾರರು ಒಮ್ಮೆ ಎಂಎಲ್‌'ಒ ಕಚೇರಿಗೆ ಭೇಟಿ ನೀಡಬೇಕಾಗುತ್ತದೆ. ಸಹಾಯಕರಿಗೆ ಬಯೋಮೆಟ್ರಿಕ್ ಉಪಕರಣ, ಕ್ಯಾಮೆರಾ ನೀಡಲಾಗುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಶಾಕಿಂಗ್: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಧಗಧಗನೆ ಹೊತ್ತಿ ಉರಿದ 40 ಎಕರೆ ಕಬ್ಬಿನ ಗದ್ದೆ!
ನಟ ರಿಷಬ್ ಶೆಟ್ಟಿ ಹರಕೆ ಕೋಲ ವಿವಾದ, ದೈವದ ಕಟ್ಟುಕಟ್ಟಳೆಯಲ್ಲಿ ಲೋಪವಾಗಿಲ್ಲ: ವಾರಾಹಿ ದೈವಸ್ಥಾನ ಸಮಿತಿ ಸ್ಪಷ್ಟನೆ