ಶಬರಿಮಲೆ ಅಯ್ಯಪ್ಪ ಸನ್ನಿಧಿ ಪ್ರಸಾದಕ್ಕಿನ್ನು ಪೇಟೆಂಟ್‌!

By Kannadaprabha News  |  First Published Sep 24, 2019, 9:52 AM IST

ಶಬರಿಮಲೆಯ ಅಯ್ಯಪ್ಪ ಸನ್ನಿಧಿಯ ಪ್ರಸಾದಕ್ಕೆ ತಿರುವಾಂಕೂರ್‌ ದೇವಸ್ಥಾನ ಮಂಡಳಿ ಪ್ರಸಾದಗಳ ಪೇಟೆಂಟ್‌ ಪಡೆಯಲು ಮುಂದಾಗಿದೆ.  ‘ಶಬರಿಮಲ ಅರವಣ’ ಸೇರಿದಂತೆ ಅಂಬಲಪುಳ ಪಾಲ್‌ಪಾಯಸಂ, ಕೊಟ್ಟರಕ್ಕರ ಉನ್ನಿಯಪ್ಪಂ ಹಾಗೂ ಇನ್ನಿತರ ಪ್ರಸಾದಗಳ ನಕಲು ತಡೆಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.


ತಿರುವನಂತಪುರ(ಸೆ. 24): ದಕ್ಷಿಣದ ಪ್ರಸಿದ್ಧ ದೇವಾಲಯ ಶಬರಿಮಲೆಯ ಅಯ್ಯಪ್ಪ ಸ್ವಾಮಿ ಸನ್ನಿಧಿಯ ‘ಶಬರಿಮಲ ಅರವಣ’ ಸೇರಿದಂತೆ ಇನ್ನಿತರ ಪ್ರಸಾದಗಳ ನಕಲು ತಡೆಗಾಗಿ ತಿರುವಾಂಕೂರ್‌ ದೇವಸ್ಥಾನ ಮಂಡಳಿ ಪ್ರಸಾದಗಳ ಪೇಟೆಂಟ್‌ ಪಡೆಯಲು ಮುಂದಾಗಿದೆ.

ಶಬರಿಮಲೆಯ ಅರವಣ, ಪಾಲ್‌ಪಾಯಸಂ, ಉನ್ನಿಯಪ್ಪಂ ಸೇರಿ ಇತರ ಪ್ರಸಾದ ಅತ್ಯಂತ ಸ್ವಾದವುಳ್ಳ ಪ್ರಸಾದವಾಗಿದ್ದು, ಇದರ ನಕಲನ್ನು ತಡೆಯಲು ದೇವಸ್ಥಾನ ಮಂಡಳಿ ಇಂತಹದೊಂದು ನಿರ್ಧಾರಕ್ಕೆ ಬಂದಿದೆ.

Latest Videos

ದರ್ಪಣ ತೀರ್ಥದಲ್ಲಿ ಪ್ರವಾಹ: ಕುಕ್ಕೆ ಸುಬ್ರಮಣ್ಯ ದೇವಳದೊಳಗೆ ನೀರು

ದೇವಸ್ಥಾನದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸನ್ನಿಧಿಯಲ್ಲಿ ವಿತರಿಸಲಾಗುವ ಅಂಬಲಪುಳ ಪಾಲ್‌ಪಾಯಸಂ, ಕೊಟ್ಟರಕ್ಕರ ಉನ್ನಿಯಪ್ಪಂ ಹಾಗೂ ಅರವಣದಂತಹ ಪ್ರಸಾದಗಳಿಗೆ ಮೊದಲ ಬಾರಿಗೆ ಪೇಟೆಂಟ್‌ ಪಡೆಯಲು ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನ ನಿರ್ವಹಿಸುವ ತಿರುವಾಂಕೂರ್‌ ದೇವಸ್ಥಾನ ಮಂಡಳಿ ನಿರ್ಧರಿಸಿದೆ. ಇದರಿಂದ ಇತರರು ಇದೇ ಹೆಸರಿನಲ್ಲಿ ಇತರೆ ಪ್ರಸಾದಗಳನ್ನು ಮಾರಾಟ ಮಾಡುವ ಕ್ರಮಕ್ಕೆ ನಿಷೇಧ ಬೀಳಲಿದೆ.

ಸೆ.26, 27 ಕ್ಕೆ ಬ್ಯಾಂಕ್ ನೌಕರರ ಮುಷ್ಕರವಿಲ್ಲ

click me!