
ಪುಣೆ: ವಿಳಾಸ ದೃಢೀಕರಣಕ್ಕೆ ಪಾಸ್‌ಪೋರ್ಟ್ ಇನ್ನು ಕೆಲವು ದಿನಗಳ ಬಳಿಕ ಮಾನದಂಡವಾಗದೇ ಹೋಗಬಹುದು. ಹೌದು. ಪಾಸ್‌ಪೋರ್ಟಿನ ಕೊನೆಯ ಪುಟದಲ್ಲಿ ಈಗ ಪಾಸ್‌ಪೋರ್ಟುದಾರನ ವಿಳಾಸ ಇರುತ್ತಿದ್ದು, ಅದನನ್ನು ತೆಗೆದು ಹಾಕುವ ಪ್ರಸ್ತಾಪ ವಿದೇಶಾಂಗ ಸಚಿವಾಲಯದ ಮುಂದಿದೆ.
ಮುಂದಿನ ಸರಣಿಗಳ ಪಾಸ್‌ಪೋರ್ಟ್ ವಿತರಣೆ ವೇಳೆ ಈ ಬದಲಾವಣೆ ಆಗುವ ಸಾಧ್ಯತೆ ಇದೆ. ಕೊನೆಯ ಪುಟವನ್ನು ಖಾಲಿ ಬಿಡುವ ಪ್ರಸ್ತಾಪ ಇದೆ. ವಿಷಯಗಳ ಗೌಪ್ಯತೆ ಕಾಪಾಡಿ ಕೊಳ್ಳಲು ಈ ಕ್ರಮ ಜರುಗಿಸಲಾಗುತ್ತಿದೆ ಎಂದು ಮೂಲ ಗಳು ಹೇಳಿವೆ.
ಪಾಸ್‌ಪೋರ್ಟ್‌ನಲ್ಲಿ ವಿಳಾಸದ ವಿವರ ಇಲ್ಲದೇ ಹೋದರೂ ಸ್ಕ್ಯಾನಿಂಗ್ ವೇಳೆ ವಲಸೆ ವಿಭಾಗದ ಕಂಪ್ಯೂಟರ್‌ನಲ್ಲಿ ವ್ಯಕ್ತಿಯ ವಿಳಾಸ ಪತ್ತೆ ಮಾಡಲಾಗುತ್ತದೆ. ಹೀಗಾಗಿ ವಿದೇಶ ಯಾತ್ರೆಗಳಿಗೆ ಇದರಿಂದ ಯಾವುದೇ ಸಮಸ್ಯೆಯಾಗದು. ಆದರೆ ಅನ್ಯ ಕಾರ್ಯಗಳಿಗೆ ವಿಳಾಸ ದೃಢೀಕರಣಕ್ಕೆ ಪಾಸ್‌ಪೋರ್ಟ್ ನೀಡಲಾಗದು. ಪಾಸ್‌ಪೋರ್ಟ್‌ನಲ್ಲಿ ಮೊದಲ ಪುಟದಲ್ಲಿ ವ್ಯಕ್ತಿಯ ಹೆಸರು ಮತ್ತು ಫೋಟೋ ಇರುತ್ತದೆ. ಕೊನೆಯ ಪುಟದಲ್ಲಿ ಅವರ ವಿಳಾಸ ಇರುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.