
ಮೇಷ
ಎಲ್ಲರನ್ನೂ ನಂಬದಿರಿ. ಕೆಲವು ವಿಚಾರಗಳನ್ನು
ಹಂಚಿಕೊಳ್ಳದಿರಿ. ವರ್ಗಾವಣೆಯಾಗಲಿದೆ.
ಖಾಸಗಿ ಸಂಸ್ಥೆಗಳವರಿಗೆ ಭಡ್ತಿ ಸಿಗಲಿದೆ.
ವೃಷಭ
ಆರೋಗ್ಯ ಉತ್ತಮ. ಮುಂಬರುವ ದಿನಗಳಲ್ಲಿ
ಆತ್ಮಿಯರ ಭೇಟಿಯಾಗುವ ಸಾಧ್ಯತೆ. ಸಂತಸ
ನೀಡುವ ಸುದ್ದಿಗಳ ಮಹಾಪೂರವೇ ಬರಲಿದೆ.
ಮಿಥುನ
ನಿರುದ್ಯೋಗಿಗಳಿಗೆ ಉದ್ಯೋಗದ ಸಾಧ್ಯತೆ.
ಕೆಲವು ವಿಚಾರಗಳಲ್ಲಿ ಸ್ನೇಹಿತರಿಂದ ಸಲಹೆ
ಸಿಗಲಿದೆ. ಸ್ವಂತವಾಗಿಯೂ ಚಿಂತಿಸಲಿದ್ದೀರಿ.
ಕಟಕ
ಶುಭ ಸುದ್ದಿಗಳಿಂದ ಸಂತೋಷ. ನೆರೆಹೊರೆ
ಯವರೊಂದಿಗೆ ಉತ್ತಮ ಬಾಂಧವ್ಯ. ದೀರ್ಘ
ಕಾಲದ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ.
ಸಿಂಹ
ಸಾಮಾಜಿಕ ಕ್ಷೇತ್ರದಲ್ಲಿ ದುಡಿಯುವವರಿಗೆ
ಇದು ಒಳ್ಳೆಯ ಸಮಯ. ಧಾರ್ಮಿಕ
ಕಾರ್ಯಕ್ರಮಗಳಲ್ಲಿ ಹೆಚ್ಚು ತೊಡಗುವಿರಿ.
ಕನ್ಯಾ
ನಿಮ್ಮ ಬಾಳಿಗೆ ಸಂತೋಷ ತುಂಬುವ ಒಳ್ಳೆಯ
ಸುದ್ದಿಗಳನ್ನು ಕೇಳಲಿದ್ದೀರಿ. ಉನ್ನತಾಧಿಕಾರಿ
ನಿಮ್ಮ ಕೆಲಸಗಳನ್ನು ಗುರುತಿಸಲಿದ್ದಾರೆ.
ತುಲಾ
ವಾಣಿಜ್ಯ ಕ್ಷೇತ್ರದವರಿಗೆ ಲಾಭ. ಗೆಳೆಯರಿಂದ
ಸಹಾಯ ಸಾಧ್ಯತೆ. ನಿಮ್ಮ ಅನಿಸಿಕೆಗಳನ್ನು
ತುಲಾ ಇತರರೊಂದಿಗೆ ಹಂಚಿಕೊಳ್ಳಿ. ಚಿಂತಿಸದಿರಿ.
ವೃಶ್ಚಿಕ
ಮಿತ್ರರು ನಿಮ್ಮ ಕಷ್ಟ ಕಾಲಕ್ಕೆ ಆಗಲಿದ್ದಾರೆ.
ನಿಮ್ಮಿಂದ ಹೊಸದೊಂದು ಮಹತ್ವದ ಕೆಲಸವು
ಶುರುವಾಗಲಿದೆ. ಖುಷಿ ಹಂಚಿಕೊಳ್ಳಿ.
ಧನಸ್ಸು
ಮನೆಯ ಮುಂಬಾಗಿಲಿನ ಎದುರೇ ಒಂದು
ಉತ್ತಮ ಪೇಂಟಿಂಗ್ ಅನ್ನು ಹಾಕಿ. ಕೇಸರಿ,
ಚಿನ್ನದ ಹಳದಿಯ ಬಣ್ಣದ್ದು ಒಳಿತಾಗಲಿದೆ.
ಮಕರ
ವರಮಾನ ಸ್ವಲ್ಪ ಕಡಿಮೆಯಾಗಿದೆ. ಅದಕ್ಕಾಗಿ
ಹೆಚ್ಚು ಚಿಂತಿಸಬೇಡಿ. ನಿಮ್ಮ ಎಲ್ಲಾ ಕಷ್ಟಗಳು
ಒಮ್ಮೆಲೆ ಕಡಿಮೆಯಾಗದು. ಕಾಯಬೇಕು.
ಕುಂಭ
ಹೊಸ ಥರದ ಆಲೋಚನೆಗಳು ನಿಮ್ಮನ್ನು
ಹುರಿದುಂಬಿಸಲಿವೆ. ಹಾಗಾಗಿ ಮಾನಸಿಕ
ನೆಮ್ಮದಿಯನ್ನು ಹೊಂದುವ ದಿನವಾಗಿದೆ.
ಮೀನ
ಹಿರಿಯರು, ಹೆತ್ತವರೊಂದಿಗೆ ವಾಗ್ವಾದಕ್ಕಿಳಿಯ
ಬೇಡಿ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಪಡೆಯ
ಮೀನ ಲಿದ್ದೀರಿ. ಆಹಾರ ವಿಷಯಗಳಲ್ಲಿ ಜಾಗ್ರತೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.