
ನವದೆಹಲಿ[ಜೂ.18]: ಈಗಷ್ಟೇ ಸಂಸದೀಯ ವ್ಯವಹಾರಗಳ ಸಚಿವರಾಗಿರುವ ಪ್ರಹ್ಲಾದ ಜೋಶಿ ಶುದ್ಧ ಹಿಂದಿ ಕಲಿಕೆ ಶುರುಮಾಡಿದ್ದಾರೆ. ದಿನವೂ ಹಿಂದಿ ಪತ್ರಿಕೆ ಓದುತ್ತಿರುವ ಜೋಶಿ ಹಿಂದಿ ಮಾತನಾಡುವ ಪ್ರಾಕ್ಟೀಸ್ ಕೂಡ ಮಾಡುತ್ತಿದ್ದಾರಂತೆ. ದಿಲ್ಲಿಯಲ್ಲಿದ್ದು ಪಾರ್ಲಿಮೆಂಟ್ ನಡೆಸಬೇಕೆಂದರೆ ಹಿಂದಿ ಕಲಿಯೋದು ಅನಿವಾರ್ಯ.
ಬೆಂಗಳೂರಿನಲ್ಲಿ ಕುಳಿತು ಹಿಂದಿ ಹೇರಿಕೆ ಎಂದೆಲ್ಲ ಜೋರಾಗಿ ಮಾತನಾಡಿದರೂ ದಿಲ್ಲಿಗೆ ಕೆಲಸಕ್ಕೆ ಬರುವ ರಾಜಕಾರಣಿ, ಅಧಿಕಾರಿ, ಪತ್ರಕರ್ತ, ಸಾಮಾನ್ಯ ಕೆಲಸಗಾರ ಎಲ್ಲರಿಗೂ ಮೊದಲು ಅನ್ನಿಸುವುದೇ ಅಯ್ಯೋ ಸ್ವಲ್ಪ ಹಿಂದಿ ಚೆನ್ನಾಗಿದ್ದಿದ್ದರೆ ಎಂದು. ಸಂಸತ್ ಪ್ರವೇಶಿಸುವ ಸಂಸದರು, ಮಂತ್ರಿಗಳಿಗೆ ಕನ್ನಡ, ಇಂಗ್ಲಿಷ್ ಗೊತ್ತಿದ್ದರೂ ಸ್ವಲ್ಪ ಗಮನ ಸೆಳೆಯಬೇಕಾದರೆ ಶುದ್ಧ ಉರ್ದು ಅಥವಾ ಸಂಸ್ಕೃತ ಮಿಶ್ರಿತ ಹಿಂದಿ ಬರಲೇಬೇಕು. ಇಲ್ಲವಾದರೆ ದಿಲ್ಲಿಯಲ್ಲಿ 20 ವರ್ಷ ಇದ್ದರೂ ಆತ ಬೆಳೆಯುವುದು ಕಷ್ಟ.
ಈಗಷ್ಟೇ ಸಂಸದೀಯ ವ್ಯವಹಾರಗಳ ಸಚಿವರಾಗಿರುವ ಪ್ರಹ್ಲಾದ ಜೋಶಿ ಶುದ್ಧ ಹಿಂದಿ ಕಲಿಕೆ ಶುರುಮಾಡಿದ್ದಾರೆ. ದಿನವೂ ಹಿಂದಿ ಪತ್ರಿಕೆ ಓದುತ್ತಿರುವ ಜೋಶಿ ಹಿಂದಿ ಮಾತನಾಡುವ ಪ್ರಾಕ್ಟೀಸ್ ಕೂಡ ಮಾಡುತ್ತಿದ್ದಾರಂತೆ. ದಿಲ್ಲಿಯಲ್ಲಿದ್ದು ಪಾರ್ಲಿಮೆಂಟ್ ನಡೆಸಬೇಕೆಂದರೆ ಹಿಂದಿ ಕಲಿಯೋದು ಅನಿವಾರ್ಯ.
ಸುವರ್ಣ ನ್ಯೂಸ್ ದಿಲ್ಲಿ ಪ್ರತಿನಿಧಿ ಪ್ರಶಾಂತ್ ನಾತು ಅವರ ಕಾಲಂನಿಂದ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.