ಪರೇಶ ಮೇಸ್ತ ಪ್ರಕರಣ: ಸಿಬಿಐ ತನಿಖೆ ಆರಂಭ

First Published Apr 26, 2018, 7:22 AM IST
Highlights

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರವನ್ನು ಸೂಕ್ಷ್ಮಪರಿಸ್ಥಿತಿಗೆ ತಳ್ಳಿದ್ದ ಪರೇಶ್‌ ಮೇಸ್ತ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ಆರಂಭಿಸಿದ್ದು, ಸಿಬಿಐ ಇನ್ಸ್‌ಪೆಕ್ಟರ್‌ ಸುಬ್ರಹ್ಮಣಿಯನ್‌ ಬುಧವಾರ ಹೊನ್ನಾವರಕ್ಕೆ ಆಗಮಿಸಿ ತನಿಖೆ ಕೈಗೊಂಡಿದ್ದಾರೆ.

ಹೊನ್ನಾವರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರವನ್ನು ಸೂಕ್ಷ್ಮಪರಿಸ್ಥಿತಿಗೆ ತಳ್ಳಿದ್ದ ಪರೇಶ್‌ ಮೇಸ್ತ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ಆರಂಭಿಸಿದ್ದು, ಸಿಬಿಐ ಇನ್ಸ್‌ಪೆಕ್ಟರ್‌ ಸುಬ್ರಹ್ಮಣಿಯನ್‌ ಬುಧವಾರ ಹೊನ್ನಾವರಕ್ಕೆ ಆಗಮಿಸಿ ತನಿಖೆ ಕೈಗೊಂಡಿದ್ದಾರೆ.

ಹೊನ್ನಾವರದಲ್ಲಿ ನಡೆದ ಕೋಮುಗಲಭೆ ಸಂದರ್ಭದಲ್ಲಿ ಪರೇಶ ಮೇಸ್ತ ಮೃತಪಟ್ಟಘಟನೆ ನಡೆದು ನಾಲ್ಕು ತಿಂಗಳ ನಂತರ ಸಿಬಿಐ ತನಿಖೆಗೆ ಆರಂಭಿಸಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡು, ಬುಧವಾರ ಪ್ರಾಥಮಿಕ ತನಿಖಾ ವರದಿಯನ್ನು ಹೊನ್ನಾವರ ನ್ಯಾಯಾಲಯಕ್ಕೆ ದಾಖಲಿಸಿದೆ.

2017ರ ಡಿಸೆಂಬರ್‌ 6ರಂದು ನಡೆದ ಹೊನ್ನಾವರ ಗಲಭೆ ಹಾಗೂ ಪರೇಶ್‌ ನಿಗೂಢ ಸಾವಿನ ಕುರಿತಂತೆ ಪರೇಶ್‌ ಮೇಸ್ತ ಪಾಲಕರು ಹಾಗೂ ಸಂಬಂಧಿತರು ಸಿಬಿಐ ತನಿಖೆಗೆ ಆಗ್ರಹಿಸಿದ್ದರು. ಈ ಬಗ್ಗೆ ಕುಮಟಾ ಹಾಗೂ ಶಿರಸಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಘರ್ಷಣೆ, ಗದ್ದಲ ನಡೆದಿತ್ತು. ಗಾಳಿಯಲ್ಲಿ ಗುಂಡು ಹಾರಿಸಿದ್ದಲ್ಲದೆ, ಲಾಠಿ ಚಾಜ್‌ರ್‍ ಸಹ ನಡೆಸಲಾಗಿತ್ತು.

ಆತನ ಪಾಲಕರು ಹಾಗೂ ಸಾರ್ವಜನಿಕರ ಆಗ್ರಹಕ್ಕೆ ಮಣಿದ ರಾಜ್ಯ ಸರ್ಕಾರ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿತ್ತು. ಸಿಬಿಐಗೆ ಒಪ್ಪಿಸಿ ಎರಡು ತಿಂಗಳು ಕಳೆದರೂ ಸಿಬಿಐ ತನಿಖೆ ಆರಂಭಿಸದಿರುವ ಕುರಿತು ಪರೇಶ್‌ ಪಾಲಕರು, ಸಾರ್ವಜನಿಕರು, ಮಹಿಳಾ ಸಂಘಟನೆಗಳು ಹಲವು ಸಾರಿ ಪ್ರತಿಭಟನೆ ನಡೆಸಿ ಶೀಘ್ರವಾಗಿ ಸಿಬಿಐ ತನಿಖೆ ಆರಂಭಿಸುವಂತೆ ಆಗ್ರಹಿಸಿದ್ದರು.

click me!