ಗರ್ಭಗುಡಿ ಬಂದ್ ಮಾಡುತ್ತೇವೆ : ಪ್ರಧಾನ ತಂತ್ರಿ ಎಚ್ಚರಿಕೆ

Published : Oct 19, 2018, 11:50 AM ISTUpdated : Oct 19, 2018, 12:10 PM IST
ಗರ್ಭಗುಡಿ ಬಂದ್ ಮಾಡುತ್ತೇವೆ : ಪ್ರಧಾನ ತಂತ್ರಿ ಎಚ್ಚರಿಕೆ

ಸಾರಾಂಶ

ಶಬರಿಮಲೆ ದೇಗುಲಕ್ಕೆ ಪ್ರವೇಶಿಸಲು ಇಬ್ಬರು ಮಹಿಳೆಯರು ಯತ್ನಿಸುತ್ತಿದ್ದು, ಈ ಇಬ್ಬರು ದೇಗುಲ ಪ್ರವೇಶಿಸಿದಲ್ಲಿ ಗರ್ಭಗುಡಿಯನ್ನು ಮುಚ್ಚಲಾಗುವುದು ಎಂದು ದೇಗುಲದ ಪ್ರಧಾನ ತಂತ್ರಿ ಹೇಳಿದ್ದಾರೆ. 

ಶಬರಿಮಲೆ :  ಶಬರಿಮಲೆ ದೇಗುಲಕ್ಕೆ ಪ್ರವೇಶ ಬಯಸಿ ಇಬ್ಬರು ಮಹಿಳೆಯರು 300ಕ್ಕೂ ಅಧಿಕ ಮಂದಿ ಸೇನಾ ಪಡೆ ಸಿಬ್ಬಂದಿ ಭದ್ರತೆಯೊಂದಿಗೆ ತೆರಳುತ್ತಿದ್ದಾರೆ. 

ರೆಹನಾ ಫಾತಿಮಾ ಎಂಬ ಮುಸ್ಲಿಂ ಮಹಿಳೆ ಹಾಗೂ ಆಂಧ್ರ ಪ್ರದೇಶದ ಪತ್ರಕರ್ತೆ ಕವಿತಾ ಭದ್ರತೆಯೊಂದಿಗೆ ದೇಗುಲ ಪ್ರವೇಶಕ್ಕಾಗಿ ತೆರಳುತ್ತಿದ್ದಾರೆ.   

ಆದರೆ ಒಂದು ವೇಳೆ ಅವರು ದೇವಾಲಯವನ್ನು ಪ್ರವೇಶ ಮಾಡಿದಲ್ಲಿ ದೇಗುಲದ ಗರ್ಭಗುಡಿಯನ್ನು ಮುಚ್ಚಲಾಗುವುದು ಎಂದು ಪ್ರಧಾನ ತಂತ್ರಿ ಹೇಳಿದ್ದಾರೆ.

ದೇವಾಲಯದಲ್ಲಿ ಅನೇಕ ವರ್ಷಗಳಿಂದಲೂ ಕೂಡ ಆಚಾರ ವಿಚಾರಗಳು ನಡೆದುಕೊಂಡು ಬಂದಿದ್ದು, ಇವುಗಳಿಗೆ ಅಪಚಾರವಾಗಿ ಮಹಿಳೆ ಪ್ರವೇಶ ನಡೆದಲ್ಲಿ, ಅಥವಾ ಯಾವುದೇ ರೀತಿಯ ಗಲಾಟೆಗಳು ನಡೆದಲ್ಲಿ ದೇಗುಲವನ್ನು ಮುಚ್ಚಲಾಗುವುದು ಎಂದು ದೇಗುಲದ ಪ್ರಧಾನ ತಂತ್ರಿ ಕಂಡಿರ್ ರಾಜೀವರ್ ಹೇಳಿದ್ದಾರೆ. 

ದೇಗುಲದ ಆಚಾರ ವಿಚಾರಗಳಿಗೆ ವಿರುದ್ಧವಾಗಿ ಯಾರೇ ನಡೆದುಕೊಂಡರೂ ಸರಿ ಗರ್ಭಗುಡಿಗೆ ಅಪಚಾರವಾಗುತ್ತದೆ ಎಂದು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Bhabana Menon: 'ಮಲಯಾಳಂ ಚಿತ್ರರಂಗದ ಹೆಮ್ಮೆ' ಎಂದ ಸಚಿವರು; ನಟಿ ಭಾವನಾಗೆ ಪ್ರಶಂಸೆ ಸುರಿಮಳೆ!'
ಆದಾಯ ಕಡಿಮೆ ಆಗಿದ್ದೋ, ಖರ್ಚು ಜಾಸ್ತಿಯಾಗಿದ್ದೋ! ಯೋಚಿಸಬೇಕಾದ ಕೆಲವು ಆರ್ಥಿಕ ಸಂಗತಿಗಳು