ಬಾರಾಮುಲ್ಲಾದಲ್ಲಿ ಉಗ್ರವಾದಕ್ಕೆ ಪ್ರೇರೆಪಿಸುತ್ತಿದ್ದ ಪಾಕ್ ಉಗ್ರ ಸೆರೆ!

By Web DeskFirst Published Apr 24, 2019, 8:02 PM IST
Highlights

ಉಗ್ರವಾದಕ್ಕೆ ಪ್ರೇರೆಪಿಸುತ್ತಿದ್ದ ಪಾಕ್ ಉಗ್ರ ಸೆರೆ| ಕಣಿವೆ ರಾಜ್ಯದ ಬಾರಾಮುಲ್ಲಾ ಜಿಲ್ಲೆಯಲ್ಲಿ ಸೆರೆಯಾದ ಪಾಕ್ ಉಗ್ರ| ಪಾಕ್ ಮೂಲಕ ಮೊಹ್ಮದ್ ವಾಕರ್ ಬಂಧಿತ ಉಗ್ರ|

ಬಾರಾಮುಲ್ಲಾ(ಏ.24): ಕಣಿವೆ ರಾಜ್ಯದ ಬಾರಾಮುಲ್ಲಾ ಜಿಲ್ಲೆಯಲ್ಲಿ ಉಗ್ರವಾದಕ್ಕೆ ಪ್ರೇರಣೆ ನೀಡುತ್ತಿದ್ದ ಪಾಕ್ ಮೂಲದ ಎಲ್ ಇಟಿ ಉಗ್ರನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಪಾಕ್ ಮೂಲಕ ಮೊಹ್ಮದ್ ವಾಕರ್ ಎಂಬ ಉಗ್ರ, ಜಿಲ್ಲೆಯ ಯುವಕರನ್ನು ಸಂಘಟನೆಗೆ ಸೆಳೆಯಲು ಪ್ರಯತ್ನಿಸುತ್ತಿದ್ದ. ಆದರೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ಮಾಡಿ ವಾಕರ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

SSP Baramulla, Abdul Qayoom: His name is Mohammad Waqar, a resident of Mohalla Miana, Mianwali, Punjab, Pakistan. He came here in July 2017 by crossing the border, he was operating in Srinagar for over a year. His plan was to resurrect militancy in Baramulla. pic.twitter.com/BWUEkdQj50

— ANI (@ANI)

ಕಾಶ್ಮೀರದಲ್ಲಿ ಮುಸ್ಲಿಮರ ಸ್ಥಿತಿ ಶೋಚನೀಯವಾಗಿದ್ದು ಅವರಿಗೆ ನಮಾಜ್ ಮಾಡಲೂ ಅವಕಾಶ ನೀಡಲಾಗುತ್ತಿಲ್ಲ ಎಂದು ಸುಳ್ಳು ಹೇಳಿ ವಾಕರ್ ನನ್ನು ಎಲ್ ಇಟಿ ಸಂಘಟನೆಗೆ ಸೇರಿಸಿಕೊಂಡಿತ್ತು ಎನ್ನಲಾಗಿದೆ.

ಕಳೆದ ಜನೆವರಿಯಲ್ಲಿ ಬಾರಾಮುಲ್ಲಾ ಜಿಲ್ಲೆ ಕಣಿವೆ ರಾಜ್ಯದ ಮೊದಲ ಭಯೋತ್ಪಾದನೆ ಮುಕ್ತ ಜಿಲ್ಲೆ ಎಂಬ ಹೆಗ್ಗಳಿಕೆ ಗೆ ಪಾತ್ರವಾಗಿತ್ತು.

click me!