
ಕೋಲ್ಕತ್ತಾ(ಏ.24): ಹೆಣ್ಣುಮಗು ಆಯ್ತು ಅಂದ್ರೆ ಮೂಗು ಮುರಿಯುವ ನಮ್ಮ ಸಮಾಜದಲ್ಲಿ, ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ತಂದೆಗೆ ತನ್ನ ಶೇ.65ರಷ್ಟು ಲಿವರ್ ದಾನ ಮಾಡಿ ಮಗಳೋರ್ವಳು ಹೆಣ್ಣುಮಗಳ ಮಹತ್ವ ಸಾರಿಸಿದ್ದಾಳೆ.
ಪ.ಬಂಗಾಳದ ಕೋಲ್ಕತ್ತಾದ 19 ವರ್ಷದ ರಾಖಿ ದತ್ತಾ, ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ತಂದೆಗೆ ತನ್ನ ಶೇ.65ರಷ್ಟು ಲಿವರ್ ದಾನ ಮಾಡಿದ್ದಾಳೆ. ಬೆಳೆದು ನಿಂತ ಮಗಳೋರ್ವಳು ತನ್ನ ಭವಿಷ್ಯದ ಕುರಿತು ಕಿಂಚಿತ್ತೂ ಚಿಂತಿಸದೇ ತಂದೆಗೆ ಲಿವರ್ ದಾನ ಮಾಡಿದ್ದು ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.
ರಾಖಿ ದತ್ತಾ ಅವರು ತಮ್ಮ ತಂದೆಯವರೊಂದಿಗೆ ಇರುವ ಫೋಟೋವನ್ನು ಪ್ರಸಿದ್ಧ ಉದ್ಯಮಿ ಹರ್ಷ ಗೋಯಂಕಾ ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದು, ತಂದೆಗಾಗಿ ಲಿವರ್ ದಾನ ಮಾಡಿದ ರಾಖಿ ಕುರಿತು ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.