
ಇಸ್ಲಾಮಾಬಾದ್[ಏ.11]: ಅಲ್ಪಸಂಖ್ಯಾತ ಹಿಂದೂಗಳ ಬಹುದಿನದ ಬೇಡಿಕೆಯಾಗಿದ್ದ ಪಾಕ್‌ನ 400 ಹಿಂದೂ ದೇವಾಲಯಗಳನ್ನು ಪುನಃ ತೆರೆದು ಪೂಜೆಗೆ ಅವಕಾಶ ಮಾಡಿಕೊಡಲು ಪಾಕಿಸ್ತಾನ ಸರ್ಕಾರ ನಿರ್ಧರಿಸಿದೆ. ಭಾರತ-ಪಾಕ್ ಬೇರ್ಪಟ್ಟಾಗ ಬಹುತೇಕ ಹಿಂದುಗಳು ಪಾಕ್ ತೊರೆದಿದ್ದರು. ಈ ವೇಳೆ ಪಾಕ್‌ನಲ್ಲಿದ್ದ ಬಹುತೇಕ ದೇವಾಲಯಗಳು ಅತಿಕ್ರಮಣ ತೆರವಿನ ವೇಳೆ ಮುಚ್ಚಿಹೋಗಿದ್ದರೆ, ಮತ್ತೆ ಕೆಲವು ದೇವಸ್ಥಾನಗಳ ಜಾಗ ಖಾಸಗಿವರ ಪಾಲಾಗಿತ್ತು. ಜತೆಗೆ ಕೆಲ ದೇವಸ್ಥಾನಗಳು ಮದರಸಾ ಆಗಿ ಪರಿವರ್ತನೆ ಆಗಿದ್ದವು.
ಇದೀಗ ಪಾಕ್ ಸರ್ಕಾರ ಇಂಥ ದೇವಸ್ಥಾನಗಳನ್ನು ಪುನಃ ತೆರೆಯಲು ಮತ್ತು ಪೂಜೆಗೆ ಅವಕಾಶ ಮಾಡಿಕೊಟ್ಟು, ಅವುಗಳನ್ನು ಹಿಂದೂ ಸಮುದಾಯಕ್ಕೆ ಹಸ್ತಾಂತರಿಸಲು ಮುಂದಾಗಿದೆ. ಈ ಪ್ರಕ್ರಿಯೆ ಐತಿಹಾಸಿಕವಾದ ಸಿಯಾಲ್‌ಕೋಟ್ ಮತ್ತು ಪೇಶಾವರ ದೇವಸ್ಥಾನಗಳ ಹಸ್ತಾಂತರ ಮೂಲಕ ಆರಂಭಗೊಂಡಿದ್ದು, ಸಿಯಾಲ್‌ಕೋಟ್‌ನ ಜಗನ್ನಾಥ ದೇವಾಲಯ ಹಾಗೂ 1000 ವರ್ಷಗಳಷ್ಟುಹಳೆಯ ತೇಜ್‌ಸಿಂಗ್ ಶಿವಾಲಯ ಪುನರುಜ್ಜೀವನಗೊಳ್ಳುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.