ವಿಶ್ವಸಂಸ್ಥೆ ಪಾಕ್ ಕಾಯಂ ಪ್ರತಿನಿಧಿ ಮಲೀಹಾ ಲೋಧಿಗೆ ಗೇಟ್‌ಪಾಸ್| ಮುನೀರ್ ಎಂಬುವರಿಗೆ ಮಣೆ| 2002ರಿಂದ 2008ರವರೆಗೂ ಅಕ್ರಂ ಅವರು ಇದೇ ಹೊಣೆ ನಿಭಾಯಿಸುತ್ತಿದ್ದರು
ಇಸ್ಲಾಮಾಬಾದ್[ಅ.01]: ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಕಾಶ್ಮೀರ ತಗಾದೆ ತೆಗೆದು ಭಾರತದಿಂದ ಮಹಾ ಮಂಗಳಾರತಿ ಮಾಡಿಸಿಕೊಂಡ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ತಮ್ಮ ತಾಯ್ನಾಡಿಗೆ ವಾಪಸ್ಸಾದ ಬೆನ್ನಲ್ಲೇ, ವಿಶ್ವಸಂಸ್ಥೆಗೆ ಪಾಕಿಸ್ತಾನದ ಕಾಯಂ ಪ್ರತಿನಿಧಿಯಾಗಿದ್ದ ಡಾ.ಮಲೀಹಾ ಲೋಧಿ ಅವರಿಗೆ ಗೇಟ್‌ಪಾಸ್ ನೀಡಿದ್ದಾರೆ.
ಕರ್ತಾರ್‌ಪುರ ಕಾರಿಡಾರ್ ಉದ್ಘಾಟನೆ: ಪಾಕ್ ಆಹ್ವಾನ ತಿರಸ್ಕರಿಸಿದ ಸಿಂಗ್!
undefined
ಲೋಧಿ ಸ್ಥಾನಕ್ಕೆ ಇದೀಗ ಮುನೀರ್ ಅಕ್ರಂ ಎಂಬುವರನ್ನು ಆಯ್ಕೆ ಮಾಡಲಾಗಿದೆ ಎಂದು ಪಾಕಿಸ್ತಾನ ವಿದೇಶಾಂಗ ಸಚಿವಾಲಯ ಆದೇಶ ಹೊರಡಿಸಿದೆ.
ಮಿಸ್ಟರ್ ಇಮ್ರಾನ್ ಖಾನ್ ನಿಯಾಜಿ: ವಿದಿಶಾ ಕೂಗಿಗೆ ಕುರ್ಚಿ ಬಿಟ್ಟೆದ್ದರು ಪಾಕ್ ಪ್ರಧಾನಿ!
ಆದಾಗ್ಯೂ, ಈ ಹುದ್ದೆಯಿಂದ ಲೋಧಿ ಅವರನ್ನು ತೆಗೆದು ಹಾಕಿದ ಬಗ್ಗೆ ಪಾಕಿಸ್ತಾನ ಸ್ಪಷ್ಟನೆ ನೀಡಿಲ್ಲ. ಈ ಹಿಂದೆ 2002ರಿಂದ 2008ರವರೆಗೂ ಅಕ್ರಂ ಅವರು ಇದೇ ಹೊಣೆ ನಿಭಾಯಿಸುತ್ತಿದ್ದರು.
ಕಣಿವೆಯಲ್ಲಿ ನಡೆಯುತ್ತಿರುವುದು ಧರ್ಮಯುದ್ಧ: ಇಮ್ರಾನ್ ಇವಾಗ ತೆಪ್ಪಗಿದ್ದರೆ ಚೆಂದ!
ಮೂರು ದಿನಗಳ ಹಿಂದಷ್ಟೇ ಶುಕ್ರವಾರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಮಹಾಧಿವೇಶನದ ವೇಳೆ ದಿ ಭಾಷಣದ ಬಳಿಕ ಮಾತನಾಡಿದ್ದ ಇಮ್ರಾನ್, ಭಾರತದ ವಿರುದ್ಧ ಹಲವು ಆರೋಪ ಮಾಡಿದ್ದರು. ಬಳಿಕ ಪಾಕ್ ಆರೋಪಗಳಿಗೆ ಪ್ರತ್ಯುತ್ತರ ನೀಡುವ ಭಾರತದ ಅಧಿಕಾರದ ಭಾಗವಾಗಿ ಮಾತನಾಡಿದ ಭಾರತದ ವಿದೇಶಾಂಗ ಇಲಾಖೆಯ ಮಹಿಳಾ ಅಧಿಕಾರಿ ವಿದಿಶಾ ಮೈತ್ರಾ ಅವರು ಪಾಕಿಸ್ತಾನ ಭಯೋತ್ಪಾದನೆಯ ಉಗಮ ಸ್ಥಾನ ಎಂಬುದನ್ನು ಎಳೆ ಎಳೆಯಾಗಿ ಬಿಚ್ಚಿಡುವ ಮೂಲಕ ಆ ದೇಶದ ಮಾನ ಹರಾಜು ಹಾಕಿದ್ದಾರೆ
ಪಾಕಿಸ್ತಾನದ ಮರ್ಯಾದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹರಾಜು: ಹೀಗಿತ್ತು ವಿದಿಶಾ ಚಾಟಿಯೇಟು!