ಯಾವುದೇ ಷರತ್ತಿಲ್ಲದೆ ಮಾತುಕತೆಗೆ ಸಿದ್ಧ ಎಂದ ಪಾಕ್

By Internet DeskFirst Published Sep 23, 2016, 5:53 PM IST
Highlights

ಇಸ್ಲಾಮಾಬಾದ್(ಸೆ.23): ವಿಶ್ವಸಂಸ್ಥೆಯಲ್ಲಿ ಭಾರತದ ರಾಜತಾಂತ್ರಿಕ ಗೆಲುವಿನ ನಂತರ, ಯಾವುದೇ ಷರತ್ತಿಲ್ಲದೇ ಕಾಶ್ಮೀರ ಸೇರಿದಂತೆ ಎರಡು ದೇಶಗಳ ನಡುವೆ ಇರುವ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಮಾತುಕತೆಗೆ ಸಿದ್ಧವಾಗಿರುವುದಾಗಿ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರ ವಿದೇಶಾಂಗ ವ್ಯವಹಾರಗಳ ಸಲಹಾಗಾರ ಸತ್ರಾಜ್ ಅಜೀಜ್ ತಿಳಿಸಿದ್ದಾರೆ.

ಜಮ್ಮು ಕಾಶ್ಮೀರದ ಉರಿಯಲ್ಲಿ ನಡೆದ ಉಗ್ರರ ದಾಳಿಯಲ್ಲಿ 10 ಭಾರತೀಯ ಯೋಧರು ಹುತಾತ್ಮರಾದ ನಂತರ, ಇಸ್ಲಾಮಾಬಾದ್, ನವದೆಹಲಿಯೊಂದಿಗೆ ದ್ವಿಪಕ್ಷೀಯ ಮಾತುಕತೆಗೆ ಸಿದ್ಧವಿದೆ, ಅದೂ ಕೂಡ ಯಾವುದೇ ಷರತ್ತಿಲ್ಲದೇ, ಎಂದು ಸತ್ರಾಜ್ ಅಜೀಜ್ ಸುದ್ದಿ ಚಾನೆಲ್ ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ ಎಂದು ಪಾಕಿಸ್ತಾನ ರೇಡಿಯೋ ವರದಿ ಮಾಡಿದೆ. ವಿಶ್ವಸಂಸ್ಥೆಯಲ್ಲಿ ಪ್ರಧಾನಿ ನವಾಜ್ ಷರೀಫ್ ಒತ್ತಾಯ ಪೂರ್ವಕವಾಗಿ ಕಾಶ್ಮೀರ ವಿಷಯ ಪ್ರಸ್ತಾಪಿಸಿದು ಎಂದು ಹೇಳಿದ್ದಾರೆ. ಕಾಶ್ಮೀರವನ್ನು ವಿವಾದಿತ ಪ್ರದೇಶವೆಂದು ಅಂತಾರಾಷ್ಟ್ರೀಯ ಸಮುದಾಯ ಒಪ್ಪಿರುವುದು ಆಶ್ಚರ್ಯ ತಂದಿದೆ ಎಂದು ಹೇಳಿದ್ದಾರೆ.

Latest Videos

click me!