ಪಾಕ್ ಕಲಾವಿದರು ದೇಶ ತೊರೆಯಿರಿ ಎಂದ ಎಂಎನ್'ಎಸ್

Published : Sep 23, 2016, 05:40 PM ISTUpdated : Apr 11, 2018, 01:07 PM IST
ಪಾಕ್ ಕಲಾವಿದರು ದೇಶ ತೊರೆಯಿರಿ ಎಂದ  ಎಂಎನ್'ಎಸ್

ಸಾರಾಂಶ

ಮುಂಬೈ(ಸೆ.23): ಕಾಶ್ಮೀರದ ಉರಿ ಸೆಕ್ಟರ್‌ನಲ್ಲಿ ಪಾಕಿಸ್ತಾನ ನಿಯೋಜಿತ ದಾಳಿ ಹಿನ್ನೆಲೆಯಲ್ಲಿ ಭಾರತದಲ್ಲಿರುವ ಪಾಕಿಸ್ತಾನಿ ಕಲಾವಿದರು ಕೂಡಲೇ ದೇಶವನ್ನ ತೊರೆಯಬೇಕು ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ ಹೇಳಿದೆ.  ಎಂಎನ್‍ಎಸ್‌‍ನ ಅಂಗ ಸಂಸ್ಥೆಯಾಗಿರುವ ಚಿತ್ರಪಟ್ ಸೇನಾದ ನಾಯಕ ಅಮೇಯ್ ಖೋಪ್ಕಾರ್, ಭಾರತದಲ್ಲಿರುವ ಪಾಕಿಸ್ತಾನದ ನಟರು ಸಾಧ್ಯವಾದಷ್ಟು ಬೇಗ ಭಾರತವನ್ನು ತೊರೆಯುವಂತೆ ಆಗ್ರಹಿಸಿದ್ದಾರೆ.

ಇನ್ನು ಪಾಕಿಸ್ತಾನದ ನಟರಿಗೆ ದೇಶ ತೊರೆಯಲು 48 ಗಂಟೆಗಳ ಅವಕಾಶ ನೀಡಲಾಗಿದ್ದು, ಒಂದು ವೇಳೆ ಗಡುವು ಮುಕ್ತಾಯಗೊಂಡ ನಂತರವೂ ಭಾರತದಲ್ಲೇ ಉಳಿಯುವ ಪಾಕ್ ಕಲಾವಿದರನ್ನು ಎಂಎನ್‍ಎಸ್ ಭಾರತದಿಂದ ಹೊರದೂಡುವುದಾಗಿ ಎಚ್ಚರಿಕೆ ನೀಡಿದೆ. ಕಾಶ್ಮೀರದಲ್ಲಿ ನಡೆದಿದ್ದ ಭಯೋತ್ಪಾದಕ ದಾಳಿಯಲ್ಲಿ 18 ಯೋಧರು ಮೃತಪಟ್ಟಿದ್ದು, ಈ ದಾಳಿಯನ್ನು ವಿಶ್ವದ ಎಲ್ಲಾ ರಾಷ್ಟ್ರಗಳು ಖಂಡಿಸಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

'ಕೋಳಿಗೆ ಚೀಪ್ ಆಗಿ ಮೊಟ್ಟೆ ಇಡು ಅನ್ನೋಕಾಗುತ್ತಾ?' ಮೊಟ್ಟೆಯ ದರದ ಬಗ್ಗೆ ಬಿಜೆಪಿ ಶಾಸಕನ ಪ್ರಶ್ನೆಗೆ ಶಿಕ್ಷಣ ಸಚಿವರ ಉತ್ತರ
ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್ ಜಾರಕಿಹೊಳಿ: ಕುತೂಹಲ!