ಲಷ್ಕರ್ ಇ ತೊಯ್ಬಾ ಮುಖ್ಯಸ್ಥ ಹಫೀಜ್ ಸಯ್ಯದ್ ಗೃಹ ಬಂಧನ

By Suvarna Web DeskFirst Published Jan 30, 2017, 6:18 PM IST
Highlights

ಹಫೀಜ್'ನನ್ನು ಫೈಸಲ್ ನಗರದಿಂದ ಲಾಹೋರ್'ನ ಚೌಬ್ರಿಜಿ ಪ್ರದೇಶದಲ್ಲಿ ಗೃಹ ಬಂಧನದಲ್ಲಿಡಲಾಗಿದೆ. ಈತ ಜಮಾತ್ ಉಲ್ ದವಾ ಸಂಘಟನೆಯ ಮುಖ್ಯಸ್ಥ ಕೂಡ ಆಗಿದ್ದು ಈ ಸಂಘಟನೆಯನ್ನು  ಅಮೆರಿಕಾ ಸರ್ಕಾರ 2014ರಲ್ಲಿ  ಭಯೋತ್ಪಾದನಾ ಸಂಘಟನೆ ಎಂದು ಘೋಷಿಸಿತ್ತು.

ಲಾಹೋರ್(ಜ.30): ಲಷ್ಕರ್ ಇ ತೊಯ್ಬಾ ಮುಖ್ಯಸ್ಥ ಹಫೀಜ್ ಸಯ್ಯದ್'ನನ್ನು ಪಾಕ್ ಸರ್ಕಾರ 6 ತಿಂಗಳುಗಳ ಅವಧಿಗೆ ಗೃಹ ಬಂಧನದಲ್ಲಿಟ್ಟಿದೆ. ನೂತನ ಅಮೆರಿಕಾ ಸರ್ಕಾರ ಭಯೋತ್ಪಾದಕರ ವಿರುದ್ದ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಪಾಕ್'ಗೆ ಎಚ್ಚರಿಕೆ ನೀಡಿರುವ ಹಿನ್ನಲೆಯಲ್ಲಿ ಹಪೀಜ್'ನನ್ನು  ಗೃಹ ಬಂಧನಲ್ಲಿಡಲಾಗಿದೆ ಎಂಬ ಸುದ್ದಿ  ಹರಡಿದೆ.

ಹಫೀಜ್'ನನ್ನು ಫೈಸಲ್ ನಗರದಿಂದ ಲಾಹೋರ್'ನ ಚೌಬ್ರಿಜಿ ಪ್ರದೇಶದಲ್ಲಿ ಗೃಹ ಬಂಧನದಲ್ಲಿಡಲಾಗಿದೆ. ಈತ ಜಮಾತ್ ಉಲ್ ದವಾ ಸಂಘಟನೆಯ ಮುಖ್ಯಸ್ಥ ಕೂಡ ಆಗಿದ್ದು ಈ ಸಂಘಟನೆಯನ್ನು  ಅಮೆರಿಕಾ ಸರ್ಕಾರ 2014ರಲ್ಲಿ  ಭಯೋತ್ಪಾದನಾ ಸಂಘಟನೆ ಎಂದು ಘೋಷಿಸಿತ್ತು.2011ರ ಮುಂಬೈ ದಾಳಿಯ ಪ್ರಮುಖ ರುವಾರಿಯಾದ ಹಫೀಜ್  ಕೆಲವು ವರ್ಷಗಳಿಂದ ಮುಂಬೈನಲ್ಲಿ ಸ್ವತಂತ್ರವಾಗಿ ಓಡಾಡಿಕೊಂಡಿರಲು ಅಲ್ಲಿನ ಸರ್ಕಾರವೆ ಅನುವು ಮಾಡಿಕೊಟ್ಟಿತ್ತು

click me!