ಟಿಪ್ಪು ಹಾಡಿ ಹೊಗಳಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್!

By Web DeskFirst Published May 5, 2019, 1:44 PM IST
Highlights

ಮೈಸೂರು ಹುಲಿ ಟಿಪ್ಪು ಸುಲ್ತಾನ್ ಪುಣ್ಯತಿಥಿ| ಮೈಸೂರು ಹುಲಿಯನ್ನು ಹಾಡಿ ಹೊಗಳಿದ ಪಾಕ್ ಪ್ರಧಾನಿ| ಟ್ವಿಟ್ ಮೂಲಕ ಟಿಪ್ಪು ಹಾಡಿ ಹೊಗಳಿದ ಇಮ್ರಾನ್ ಖಾನ್| 

ಇಸ್ಲಾಮಾಬಾದ್(ಮೇ.05): ಮೈಸೂರು ಹುಲಿ ಟಿಪ್ಪು ಸುಲ್ತಾನ್ ಪುಣ್ಯತಿಥಿ(ಮೇ.04) ಅಂಗವಾಗಿ, ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಟಿಪ್ಪುವನ್ನು ಹಾಡಿ ಹೊಗಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಇಮ್ರಾನ್ ಖಾನ್, ‘ಟಿಪ್ಪು ಓರ್ವ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಸ್ವಾತಂತ್ರ್ಯಕ್ಕಾಗಿಯೇ ಪ್ರಾಣ ಬಿಟ್ಟ ವೀರ ಯೋಧ. ಗುಲಾಮಗಿರಿಯಲ್ಲಿ ಬದುಕುವುದಕ್ಕಿಂತ ಸ್ವತಂತ್ರವಾಗಿ ತಲೆ ಎತ್ತಿ ಬದುಕಬೇಕು ಎಂಬ ಮಹತ್ ಸಂದೇಶ ಸಾರಿದಾತ..’ ಹೊಗಳಿದ್ದಾರೆ.

Today 4th May is the death anniversary of Tipu Sultan - a man I admire because he preferred freedom and died fighting for it rather than live a life of enslavement.

— Imran Khan (@ImranKhanPTI)

ಟಿಪ್ಪು ಕುರಿತಂತೆ ಇಮ್ರಾನ್ ಹೇಳಿಕೆ ಇದೇ ಮೊದಲೇನಲ್ಲ. ಈ ಹಿಂದೆಯೂ ಕೂಡ ಇಮ್ರಾನ್ ಖಾನ್ ಪಾಕಿಸ್ತಾನ ಸಂಸತ್ ನಲ್ಲಿ ಟಿಪ್ಪು ಕುರಿತು ಉಲ್ಲೇಖ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

Imran Khan praises Tipu Sultan's unprecedented valour and courage

Read story | https://t.co/8uUZuWY5KZ pic.twitter.com/ljL3RAxkzL

— ANI Digital (@ani_digital)

 

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

click me!