
ಇಸ್ಲಾಮಾಬಾದ್[ಆ.27]: ಕಾಶ್ಮೀರದಲ್ಲಿನ ಸ್ಥಿತಿಗತಿ ಬಗ್ಗೆ ನಕಲಿ ವಿಡಿಯೋ ಟ್ವೀಟ್ ಮಾಡಿದ್ದ ಪಾಕಿಸ್ತಾನದ ಅಧ್ಯಕ್ಷ ಆರಿಫ್ ಅಲ್ವಿಗೆ, ಟ್ವೀಟರ್ ಸಂಸ್ಥೆ ನೋಟಿಸ್ ಜಾರಿ ಮಾಡಿದೆ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನದ ಮರ್ಯಾದೆಯನ್ನು ಮತ್ತೊಮ್ಮೆ ಹರಾಜು ಹಾಕಿದೆ.
ಕಾಶ್ಮೀರ, ಟ್ರಂಪ್ ಮಧ್ಯಸ್ಥಿಕೆ ಇಲ್ಲ: ಮೋದಿಗೆ ಜಯ, ಪಾಕ್‌ಗೆ ಮುಖಭಂಗ!
ಕಾಶ್ಮೀರದಲ್ಲಿ ನಿಷೇಧಾಜ್ಞೆ, ಕಫä್ರ್ಯ ಇದ್ದಾಗ್ಯೂ, ಶ್ರೀನಗರದಲ್ಲಿ ಸಾರ್ವಜನಿಕರು ತಮ್ಮ ಸ್ವಾತಂತ್ರ್ಯಕ್ಕಾಗಿ ಭಾರೀ ಪ್ರತಿಭಟನೆ ನಡೆಸಿದ್ದಾರೆ ಎಂಬಂತಿರುವ ನಕಲಿ ನಕಲಿ ವಿಡಿಯೋವೊಂದನ್ನು ಆರೀಫ್ ಇತ್ತೀಚೆಗೆ ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಭಾರತ ಆಕ್ಷೇಪ ವ್ಯಕ್ತಪಡಿಸಿದೆ ಹಿನ್ನೆಲೆಯಲ್ಲಿ, ಅಲ್ವಿ ವಿರುದ್ಧ ಟ್ವೀಟರ್ ನೋಟಿಸ್ ಜಾರಿ ಮಾಡಿದೆ. ಟ್ವೀಟ್ ಮಾಡುವ ಮುನ್ನ, ತಾವು ಸ್ವೀಕರಿಸಿದ ಯಾವುದೇ ಅಂಶಗಳು ಸರಿಯಾಗಿವೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಿ ಎಂದು ನೋಟಿಸ್‌ನಲ್ಲಿ ಸೂಚಿಸಲಾಗಿದೆ.
ಪಾಪರ್ ಪಾಕಿಸ್ತಾನದಲ್ಲಿ ಹೊಸ ಉದ್ಯೋಗ ಇಲ್ಲ, ಎರಡೂ ಬದಿ ಪ್ರಿಂಟ್!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.