ಇಮ್ರಾನ್ ಖಾನ್ ಗೆ ಕುರ್ಚಿ ಸಿಕ್ಕಿದ್ದೇ ತಡ : ಪಾಕ್ ಅಧಿಕಾರಿಗಳು ಗಡಗಡ

By Web DeskFirst Published Aug 25, 2018, 3:38 PM IST
Highlights

ಪಾಕಿಸ್ತಾನ ನೂತನ ಪ್ರಧಾನಿ ಇಮ್ರಾನ್ ಖಾನ್ ಅಧಿಕಾರ ಸ್ವೀಕಾರ ಮಾಡುತ್ತಿದ್ದಂತೆ ಹೊಸ ಹೊಸ ಬದಲಾವಣೆಗಳನ್ನು ಕೈಗೊಳ್ಳುತ್ತಿದ್ದಾರೆ. ಅಧಿಕಾರ ವಹಿಸಿಕೊಳ್ಳುತ್ತಲೇ ಆಡಳಿತ ಯಂತ್ರದಲ್ಲಿ ಮೇಜರ್ ಸರ್ಜರಿ ಕೈಗೊಂಡಿದ್ದಾರೆ. 
 

ಇಸ್ಲಮಬಾದ್ :  ಪಾಕಿಸ್ತಾನ ನೂತನ ಪ್ರಧಾನಿ ಇಮ್ರಾನ್ ಖಾನ್ ಅಧಿಕಾರ ಸ್ವೀಕಾರ ಮಾಡುತ್ತಿದ್ದಂತೆ ಹೊಸ ಹೊಸ ಬದಲಾವಣೆಗಳನ್ನು ಕೈಗೊಳ್ಳುತ್ತಿದ್ದಾರೆ. 

 ಮೊದಲ ಹಂತದಲ್ಲಿ ವಿಮಾನದಲ್ಲಿ ಪ್ರಯಾಣ ಮಾಡುವ ಅವಕಾಶವನ್ನು ಇಮ್ರಾನ್ ಖಾನ್ ಅವರು ಚೀಫ್ ಜಸ್ಟೀಸ್, ಸೆನಟ್ ಚೇರ್ ಮನ್, ಸ್ಪೀಕರ್, ಅಧ್ಯಕ್ಷರಿಗೆ  ಬ್ಯಾನ್ ಮಾಡಿ ಆದೇಶ ನೀಡಿದ್ದಾರೆ. 

ಅಲ್ಲದೇ ಸದ್ಯ ಸರ್ಕಾರಿ ಕಚೇರಿಗಳಲ್ಲಿ ಕೆಲಸದ ಸಮಯದಲ್ಲಿಯೂ ಕೂಡ ಬದಲಾವಣೆ ಮಾಡಿದ್ದಾರೆ. ಪ್ರಧಾನಿ ಇಮ್ರಾನ್ ಖಾನ್ ಅವರು ತಮ್ಮ 2ನೇ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಇಂತಹ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದ್ದಾರೆ. 

ಇದೀಗ ಪಾಕಿಸ್ತಾನದಲ್ಲಿ ಸರ್ಕಾರಿ ಕಚೇರಿಗಳ ಕೆಲಸದ ಅವಧಿಯನ್ನು ಬೆಳಗ್ಗೆ 9 ರಿಂದ ಸಂಜೆ 5ಗಂಟೆಗಳವರೆಗೆ ಮಾಡಲಾಗಿದೆ. ಅಲ್ಲದೇ ಸರ್ಕಾರಿ ವಿಮಾನದಲ್ಲಿ ದೇಶದ ಒಳಗೆ ಮಾತ್ರವೇ ಪ್ರಯಾಣ ಮಾಡಬಹುದಾಗಿದ್ದು ವಿದೇಶ ಪ್ರಯಾಣಕ್ಕೆ ಅವಕಾಶವಿಲ್ಲ ಎಂದು ಹೇಳಿದ್ದಾರೆ. 

click me!