ಇಲ್ಲಿ ಜನಿಸೋದು ಕೇವಲ ಹೆಣ್ಣು ಕರು : ಯಾಕೆ ..?

By Web DeskFirst Published Aug 25, 2018, 1:36 PM IST
Highlights

ಮಧ್ಯ ಪ್ರದೇಶದಲ್ಲಿ ಇನ್ನು ಮುಂದೆ ಗಂಡು ಕರುಗಳೇ ಹುಟ್ಟೋದಿಲ್ಲ. ಯಾಕೆ ಗೊತ್ತಾ ಇಲ್ಲಿ ಸರ್ಕಾರ ವೀರ್ಯ ವಿಂಗಡಣಾ ತಂತ್ರವನ್ನು ಅನುಸರಿಸಲು ಸಜ್ಜಾಗಿದೆ.  ಇದರಿಂದ ಹಸುಗಳಿಗೆ ಕೇವಲ ಹೆಣ್ಣು ಕರುಗಳಿಗೆ ಮಾತ್ರವೇ ಜನ್ಮ ನೀಡುತ್ತವೆ. 

ಭೋಪಾಲ್ :  ಮಧ್ಯ ಪ್ರದೇಶದಲ್ಲಿ ಇನ್ನುಮುಂದೆ ಕೇವಲ ಹೆಣ್ಣು  ಕರುಗಳು ಮಾತ್ರವೇ ಜನಿಸುತ್ತವೆ. ಇದಕ್ಕೆ ಇಲ್ಲಿನ ಸರ್ಕಾರವು ವೀರ್ಯ ವಿಂಗಡಣಾ ತಂತ್ರದ ಮೂಲಕ ಹೆಣ್ಣು ಕರುಗಳು ಜನಿಸುವಂತ ಇಂಜೆಕ್ಷನ್ ಗಳನ್ನು ಹಸುಗಳಿಗೆ ನೀಡಲು ನಿರ್ಧರಿಸಿದೆ. 

ಇಲ್ಲಿನ ಮಾರುಕಟ್ಟೆಯಲ್ಲಿ ಶೇ.90ರಷ್ಟು ಹೆಣ್ಣು ಕರುಗಳಿಗೆ ಬೇಡಿಕೆ ಇರುವ ಕಾರಣದಿಂದ ಇಂತಹ ಕ್ರಮ  ಕೈಗೊಳ್ಳುತ್ತಿದೆ. ಗಂಡುಕರುಗಳಿಗೆ ಬೇಡಿಕೆ ಅತ್ಯಂತ ಕಡಿಮೆ ಪ್ರಮಾಣದಲ್ಲಿರುವುದರಿಂದ ಇಂತಹ ಕ್ರಮ ಕೈಗೊಳ್ಳಲಾಗುತ್ತಿದೆ. 

ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಪ್ರಯೋಗ ಶಾಲೆಯೊಂದನ್ನು ತೆರೆಯಲಿದ್ದು ಇದರಲ್ಲಿ ಅಮೆರಿಕ ಸಹಭಾಗಿತ್ವದಲ್ಲಿ ಗಂಡು ಕರುಗಳ ಜನನದ ಸಾಮರ್ಥ್ಯವನ್ನು ಕಳೆದುಕೊಳ್ಳುವಂತಹ ವೀರ್ಯ ವಿಂಗಡನಾ ತಂತ್ರ ಅನುಸರಿಸಿ ಕೇವಲ ಹೆಣ್ಣು ಕರುಗಳು ಜನಿಸುವಂತಹ ಇಂಜೆಕ್ಷನ್ ಹಸುಗಳಿಗೆ ನೀಡಲಾಗುತ್ತದೆ. ಇನ್ನು 8 ತಿಂಗಳಲ್ಲಿ  ರಾಜ್ಯದಲ್ಲಿ ಈ ಕಾರ್ಯವು ಜಾರಿಯಾಗಲಿದೆ.  

ಇದರಿಂದ ಮಧ್ಯ ಪ್ರದೇಶದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಇರುವ ಬಿಡಾಡಿ ಹಸುಗಳ ಸಂಖ್ಯೆಯನ್ನೂ ಕೂಡ ಕಡಿಮೆ ಮಾಡಬಹುದಾಗಿದೆ. ಹೆಣ್ಣು ಹಸುಗಳ ಜನನದಿಂದ ಹೆಚ್ಚಿನ ಹೈನುಗಾರಿಕೆ ಕೈಗೊಳ್ಳಲು ಅನುಕೂಲವಾಗಲಿದೆ.  

click me!