ಅಕ್ಟೋಬರ್-ನವೆಂಬರ್‌ನಲ್ಲಿ ಭಾರತ-ಪಾಕ್ ಯುದ್ಧ ಫಿಕ್ಸ್: ಭವಿಷ್ಯ ನುಡಿದ ಸಚಿವ

By Web DeskFirst Published Aug 28, 2019, 10:53 PM IST
Highlights

ಗಡಿಯಲ್ಲಿ ವಾತಾವರಣ ಬಿಗಡಾಯಿಸುತ್ತಿದೆ ಎಂಬ ಮಾಧ್ಯಮಗಳ ವರದಿಗಳ ಬೆನ್ನಲ್ಲೇ ಪಾಕಿಸ್ತಾನದ ಸಚಿವರೊಬ್ಬರು ನೀಡಿರುವ ಹೇಳಿಕೆ ಹಲವಾರು ಪ್ರಶ್ನೆಗಳನ್ನು ಎತ್ತಿದೆ.

ನವದೆಹಲಿ[ಆ. 28]  ಭಾರತದ ಜೊತೆ ದ್ವಿಪಕ್ಷೀಯ ಮಾತುಕತೆ ಸಾಧ್ಯತೆಯ ಬಗ್ಗೆ ಮಾತನಾಡಬೇಕು.. ಇನ್ನು ಒಂದು ಅವಕಾಶ ಇದೆ ಎಂದು ಹೇಳುವವರು ಮೂರ್ಖರು ಎಂದು ಪಾಕಿಸ್ತಾನದ ಸಚಿವರೊಬನ್ಬರು ಹೇಳಿದ್ದಾರೆ.

ಅಕ್ಟೋಬರ್-ನವೆಂಬರ್ ವೇಳೆಗೆ ಭಾರತ ಮತ್ತು ಪಾಕಿಸ್ತಾನದ ನಡುವೆ ಪೂರ್ಣ ಪ್ರಮಾಣದ ಯುದ್ಧವೇ ನಡೆಯಲಿದೆ ಎಂದು ಸಚಿವ ಶೇಖ್ ರಶೀದ್ ಅಹ್ಮದ್ ಹೇಳಿದ್ದಾರೆ.

ಇನ್ನು ಪಿಒಕೆ ನಮ್ಮ ಬಳಿ ಉಳಿಯೋದು ಕಷ್ಟ: ಬಿಲಾವಲ್‌ ಭುಟ್ಟೋ

ರಾವಲ್ಪಿಂಡಿಯಲ್ಲಿ ಕಾಶ್ಮೀರಕ್ಕೆ ಸಂಬಂಧಿಸಿದಂತೆ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ,  ಕಾಶ್ಮೀರ ವಿವಾದವನ್ನು ಬಗೆಹರಿಸಬೇಕೆಂಬ ಉದ್ದೇಶ ವಿಶ್ವಸಂಸ್ಥೆಗೆ ಇದ್ದಿದ್ದರೆ ಕಾಶ್ಮೀರದಲ್ಲಿ ಜನಾಭಿಪ್ರಾಯ ಸಂಗ್ರಹಣೆಗೆ ಮುಂದಾಗುತ್ತಿತ್ತು  ಎಂದು ಪರೋಕ್ಷವಾಗಿ ವಿಶ್ವಸಂಸ್ಥೆಯನ್ನು ದೂರಿದ್ದಾರೆ.

ಕಾಶ್ಮೀರ ವಿಷಯದಲ್ಲಿ ಚೀನಾ ಎಂದಿಗೂ ಪಾಕಿಸ್ತಾನದ ಪರವಾಗಿಯೇ ಇರುತ್ತದೆ ಎಂದು ಇನ್ನೊಂದು ಕಡೆ ವಿಶ್ವಾಸ ವ್ಯಕ್ತಪಡಿಸಿರುವ ಸಚಿವ ಕಾಶ್ಮೀರ ವಿಚಾರ ಇದೀಗ ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆ ಎಂದಿದ್ದಾರೆ. 

 

click me!