
ಮುಂಬೈ[ಆ. 28] ಮುಂಬೈನ ಕಿಂಗ್ ಸರ್ಕಲ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ [ಜಿಎಸ್‌ಬಿ] ಗಣಪತಿಯನ್ನು ಅತಿ ಶ್ರೀಮಂತ ಗಣಪತಿ ಎಂದು ಕರೆಯಬಹುದಾಗಿದೆ.
ಈ ಸಾರಿ ಗಣೇಶನಿಗೆ ಬರೋಬ್ಬರಿ 266.65 ಕೋಟಿ ರೂ. ವಿಮೆ ಮಾಡಿಸಲಾಗಿದೆ. 2017 ಮತ್ತು 2018ರಲ್ಲಿ ಕ್ರಮವಾಗಿ 264.25 ಮತ್ತು 265 ಕೋಟಿ ರೂ. ವಿಮೆ ಮಾಡಿಸಲಾಗಿತ್ತು.
ಆಗಮಿಸುವ ಪ್ರತಿಯೊಬ್ಬ ಭಕ್ತ ಸಹ 20 ಕೋಟಿಯ ವಿಮೆಗೆ ಒಳಪಡುತ್ತಾರೆ. ಪೆಂಡಾಲ್, ಮೂರ್ತಿ, ಸಲಕರೆಣೆಗಳು, ಕೆಲಸಗಾರರು ಸಹ ಿಇನ್ಸೂರೆನ್ಸ್ ಗೆ ಒಳಪಡುತ್ತಾರೆ.
ಹಣ್ಣುಗಳು, ತರಕಾರಿ, ಕಿರಾಣಿ ಸಾಮಗ್ರಿ ಸೇರಿದಂತೆ 2200 ಕೆಲಸಗಾರರಿಗೂ ವಿಮಾ ಸೌಲಭ್ಯವಿದೆ. ಸ್ವಯಂಸೇವಕರಿಗೆ ಮೀಸಲಿರುವ ವಿಮೆಯ ಮೊತ್ತ 224 ಕೋಟಿ ರೂ. ಇದೇ ಅತಿ ದೊಡ್ಡ ಪಾಲು.
5 ದಿನ ಕಾಲ ಸಮಿತಿ ಗಣೇಶ ಹಬ್ಬ ಆಚರಿಸುತ್ತದೆ. ದಿನವೊಂದಕ್ಕೆ 53.33 ಕೋಟಿ ವಿಮಾ ಮೊತ್ತದ ನಿಗದಿ ಮಾಡಿಕೊಳ್ಳಲಾಗಿದೆ. ಬೆಂಕಿ ಅವಘಡ, ಕಳ್ಳತನ, ದಾಳಿ, ಅಪಘಾತ, ಡ್ಯಾಮೇಜ್ ಗಳನ್ನು ಇದು ಒಳಗೊಂಡಿರುತ್ತದೆ.
ಸಿಸಿಟಿವಿ ಕ್ಯಾಮರಾ, ಫರ್ನಿಚರ್ ಗಳು, ಕಂಪ್ಯೂಟರ್ ಗಳಿಗೂ ವಿಮಾ ಸುರಕ್ಷತೆ ಇದ್ದು ಅಪಘಾತ, ಕೋಮು ಸಂಘರ್ಷದಿಂದ ಹಾನಿಯಾದರೆ ಹಣ ದೊರೆಯಲಿದೆ. ಪಾರದರ್ಶಕವಾಗಿಯೇ ಎಲ್ಲ ವ್ಯವಸ್ಥೆಗಳನ್ನು, ಹಣಕಾಸು ವಿಚಾರಗಳನ್ನು ಮುಂದೆ ಇಡಲಾಗುತ್ತದೆ ಎಂದು ಸಮಿತಿಯ ಟ್ರಸ್ಟಿ ಆರ್. ಜಿ. ಭಟ್ ಮಾಹಿತಿ ನೀಡುತ್ತಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.