
ನವದೆಹಲಿ(ಸೆ.22): ಗಡಿಯಲ್ಲಿ ನುಸುಳಿ ಯೋಧರ ಶಿರಚ್ಛೇದ ಮತ್ತೆ ಮತ್ತೆ ಕದನ ವಿರಾಮ ಉಲ್ಲಂಘಿಸಿ ತಾಳ್ಮೆ ಕೆಣಕುತ್ತಿದ್ದ ಪಾಕಿಸ್ತಾನಕ್ಕೆ ಭಾರತ ಖಡಕ್ ಎಚ್ಚರಿಕೆ ಕೊಟ್ಟಿದೆ.
ಪಾಕಿಸ್ತಾನ ಉಗ್ರ ದೇಶ ಅಂತ ವಿಶ್ವಸಂಸ್ಥೆಯಲ್ಲಿ ಭಾರತದ ಹೇಳಿಕೆಯಿಂದ, ಜಾಗತಿಕ ಮಟ್ಟದಲ್ಲಿ ಪಾಕ್ ಮಾನ ಹರಾಜಾದಂತಾಗಿದೆ. ಭಾರತದ ಮೇಲೆ ಸವಾರಿ ಮಾಡುತ್ತಿದ್ದ ಪಾಕಿಸ್ತಾನಕ್ಕೆ ಒಳಗೊಳಗೆ ನಡುಕ ಶುರುವಾಗಿದೆ.
ಪದೇ ಪದೇ ದಾಳಿ ಮಾಡಿದ್ದಷ್ಟೇ ಅಲ್ಲ. ಯೋಧರ ಶಿರಚ್ಚೇಧ ಮೂಲಕ ಉಗ್ರರೂಪ ತೋರುತ್ತಿದ್ದ ಪಾಕಿಸ್ತಾನಕ್ಕೆ ಭಾರತ ತಕ್ಕ ಉತ್ತರ ಕೊಟ್ಟಿದೆ. ಮೊನ್ನೆಯಷ್ಟೆ ವಿಶ್ವಸಂಸ್ಥೆಯಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್, ಪಾಕಿಸ್ತಾನ ಉಗ್ರ ದೇಶ ಅಂತ ಕಟುವಾಗಿ ಟೀಕಿಸಿ ಪಾಕ್ ಮಾನ ಕಳೆದಿದ್ದರು. ಇದರ ಬೆನ್ನಲ್ಲೇ ಭಾರತ ಕೂಡಾ ಪಾಕಿಸ್ತಾನದ ಮಾನ ಹರಾಜು ಹಾಕಿದೆ.
ಪಾಕಿಸ್ತಾನ ಉಗ್ರ ದೇಶ. ತನ್ನ ನೆಲದಲ್ಲಿ ಉಗ್ರರನ್ನು ಉತ್ಪಾದನೆ ಮಾಡಿ ಇಡೀ ಜಗತ್ತಿಗೆ ರಫ್ತು ಮಾಡುತ್ತಿದೆ. ಹೀಗಂತ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನವನ್ನು ಕಟುವಾಗಿ ಜರಿದಿದೆ. ಪಾಕಿಸ್ತಾನದ ಉಗ್ರ ಚಟುವಟಿಕೆಗಳ ವಿರುದ್ಧ ಮಾತನಾಡಿದ ಭಾರತದ ವಿಶ್ವಸಂಸ್ಥೆಯ ಮೊದಲ ಕಾರ್ಯದರ್ಶಿ ಯೆನಾಮ್ ಗಂಭೀರ್, ಪಾಕಿಸ್ತಾನ ಈಗ ಟೆರೆರಿಸ್ತಾನವಾಗಿದೆ ಎಂತ ಟೀಕಿಸಿದ್ದಾರೆ. ಭಾರತದ ಈ ದಿಟ್ಟ ಉತ್ತರದಿಂದ ಮತ್ತೊಮ್ಮೆ ವಿಶ್ವಮಟ್ಟದಲ್ಲಿ ಪಾಕಿಸ್ತಾನದ ಮಾನ ಹರಾಜಾಗಿದೆ.
ಭಾರತ ಪಾಕಿಸ್ತಾನ ವಿರುದ್ಧ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿದೆ. ಗಡಿ ದಾಟಿ ಬಂದರೆ ಭಾರತಕ್ಕೆ ಪಾಕ್ ತಕ್ಕ ಉತ್ತರ ನೀಡಲಿದೆ ಅಂತ ನಿನ್ನೆಯಷ್ಟೇ ಪಾಕ್ ಪ್ರಧಾನಿ ನಾಲಗೆ ಹರಿಬಿಟ್ಟಿದ್ದರು. ಪಾಕಿಸ್ತಾನದ ಈ ಹೇಳಿಕೆಗೆ ಕಠಿಣವಾಗಿ ಉತ್ತರಿಸಿರುವ ಭಾರತ, ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಅನ್ನೋದು ಪಾಕಿಸ್ತಾನಕ್ಕೆ ನೆನಪಿರಲಿ. ಉಗ್ರರು ರಾಜಾರೋಷವಾಗಿ ತಿರುಗಾಡುತ್ತಿರುವ ದೇಶದಿಂದ ಭಾರತಕ್ಕೆ ಮಾನವ ಹಕ್ಕು ಉಲ್ಲಂಘನೆಯ ಪಾಠ ಬೇಕಿಲ್ಲ ಅಂತ ದಿಟ್ಟ ಉತ್ತರ ನೀಡಿದೆ. ಸಾಧ್ಯವಾದರೆ ಟೆರರಿಸ್ತಾನ ಅಲ್ಲ ಅನ್ನೋದನ್ನ ಪಾಕಿಸ್ತಾನ ವಿಶ್ವಕ್ಕೆ ಸಾಬೀತು ಮಾಡಲಿ ಅಂತ ಸವಾಲು ಹಾಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.