ಪಾಕ್ ಗೋವು ಕೃಷಿ ಮೇಳದ ಆಕರ್ಷಣೆ : ‘ಸಾಹಿವಾಲ್’ ತಳಿಯ ಗೋವಿನ ಬೆಲೆ 1.20 ಲಕ್ಷ ರು.

Published : Nov 18, 2017, 10:50 PM ISTUpdated : Apr 11, 2018, 12:59 PM IST
ಪಾಕ್ ಗೋವು ಕೃಷಿ ಮೇಳದ ಆಕರ್ಷಣೆ : ‘ಸಾಹಿವಾಲ್’ ತಳಿಯ ಗೋವಿನ ಬೆಲೆ 1.20 ಲಕ್ಷ ರು.

ಸಾರಾಂಶ

. ಭಾರತೀಯ ಗೋ ಪರಂಪರೆಯಲ್ಲಿ ಹೆಚ್ಚು ಹಾಲು ನೀಡುವ ತಳಿಗಳ ಪೈಕಿ ಸಾಹಿವಾಲ್ ಕೂಡ ಒಂದು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಜಿಕೆವಿಕೆ ಆವರಣದಲ್ಲಿ ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ಕೃಷಿ ಮೇಳದ ವಸ್ತು ಪ್ರದರ್ಶನದ ಪಶುಸಂಗೋಪನೆ ವಿಭಾಗದಲ್ಲಿ ಪಾಕಿಸ್ತಾನ ಮೂಲದ ‘ಸಾಹಿವಾಲ್’ ತಳಿಯ ಗೋವುಗಳು ಆಕರ್ಷಣೆಯ ಕೇಂದ್ರ ಬಿಂದುಗಳಾಗಿವೆ.

ಕನಕಪುರ ರಸ್ತೆಯ ಗೋವರ್ಧನ ಗೋ ಶಾಲೆಯವರು ಈ ಗೋವುಗಳನ್ನು ಪ್ರದರ್ಶನಕ್ಕೆ ಇರಿಸಿದ್ದಾರೆ. ಭಾರತೀಯ ಗೋ ಪರಂಪರೆಯಲ್ಲಿ ಹೆಚ್ಚು ಹಾಲು ನೀಡುವ ತಳಿಗಳ ಪೈಕಿ ಸಾಹಿವಾಲ್ ಕೂಡ ಒಂದು. ಈ ತಳಿಯ ಮೂಲ ಈಗಿನ ಪಾಕಿಸ್ತಾನದ ಸಾಹಿವಾಲ್ ನಗರ.  ಭಾರತದಲ್ಲಿ ರಾಜಸ್ಥಾನ ಮತ್ತು ಪಂಜಾಬ್‌ಗಳಲ್ಲಿ ಈ ಗೋವುಗಳನ್ನು

ಹೆಚ್ಚಿನ ಸಂಖ್ಯೆಯಲ್ಲಿ ಸಾಕುತ್ತಾರೆ. ಈ ಗೋವುಗಳು ಮಳೆ, ಚಳಿ, ಬಿಸಿಲಿಗೆ ಜಗ್ಗುವುದಿಲ್ಲ. ಯಾವುದೇ ವಾತಾವರಣಕ್ಕೂ ಶೀಘ್ರ ಹೊಂದಿಕೊಳ್ಳುತ್ತವೆ. ಮತ್ತೊಂದು ವಿಶೇಷವೆಂದರೆ ಈ ಗೋವುಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿನ ಮಟ್ಟದಲ್ಲಿದೆ. ಈ ಕಾರಣಕ್ಕೆ ಸಾಹಿವಾಲ್ ತಳಿಗೆ ಹೆಚ್ಚಿನ ಬೇಡಿಕೆ ಇದೆ ಎಂದು ಗೋ ಶಾಲೆಯ ಸಿಬ್ಬಂದಿ ಪ್ರಕಾಶ್ ತಿಳಿಸಿದರು.

- ಮೋಹನ್ ಹಂಡ್ರಂಗಿ, ಕನ್ನಡಪ್ರಭ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮನೆಗೆ ಮರಳುತ್ತಿದ್ದ ವೈದ್ಯೆ ಹಿಂಬಾಲಿಸಿ ಕಿರುಕುಳ, ಬೆಂಗಳೂರಲ್ಲಿ ತಡರಾತ್ರಿ ಬೆಚ್ಚಿ ಬೀಳಿಸಿದ ಘಟನೆ
ಔಷಧಿ ಖರೀದಿ ಟೆಂಡರ್‌ ತನಿಖೆಗೆ ತಜ್ಞರ ಸಮಿತಿ: ಸಚಿವ ಶರಣ ಪ್ರಕಾಶ್‌ ಪಾಟೀಲ್‌