
ಸಾನ್ಯ ಸಿಟಿ(ಚೀನಾ): ಭಾರತದ ಮಾನುಷಿ ಛಿಲ್ಲರ್ 2017 ನೇ ಸಾಲಿನ ಭುವನ ಸುಂದರಿ ಸ್ಪರ್ಧೆಯಲ್ಲಿ ಜಯಗಳಿಸಿದ್ದಾರೆ. 17 ವರ್ಷದ ಬಳಿಕ ಭಾರತದವರೊಬ್ಬರು ಈ ಪಟ್ಟವನ್ನು ಅಲಂಕರಿಸಿದ್ದಾರೆ.
ಚೀನಾದ ಸಾನ್ಯ ಸಿಟಿಯಲ್ಲಿ ನಡೆದ ಸ್ಪರ್ಧೆಯಲ್ಲಿ ವಿಶ್ವದ ವಿವಿಧ ದೇಶಗಳಿಂದ 100ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು. ಅಂತಿಮ 15ರ ಪಟ್ಟಿಗೆ ಚಲ್ಲರ್ ಕೂಡ ಆಯ್ಕೆಯಾಗಿದ್ದರು. 2016ರ ವಿಶ್ವಸುಂದರಿ ವಿಜೇತೆ ಸ್ಪೇನಿನ 'ಸ್ಟೆಫನಿ ಡೆಲ್ ವ್ಯಾಲೆ' 20 ವರ್ಷದ ಛಿಲ್ಲರ್ ಅವರಿಗೆ ಈ ಸಾಲಿನ ಭುವನಸುಂದರಿ ಕಿರೀಟವನ್ನು ತೊಡಿಸಿದರು.
ಹರ್ಯಾಣದವರಾದ ಈಕೆ ವೈದ್ಯಕೀಯ ವಿದ್ಯಾರ್ಥಿನಿಯಾಗಿ ವ್ಯಾಸಂಗ ಮಾಡುತ್ತಿದ್ದಾರೆ. ಛಿಲ್ಲರ್ ಅವರು ಭುವನ ಸುಂದರಿ ಪಟ್ಟ ಅಲಂಕರಿಸಿದ 6ನೇ ಭಾರತೀಯರಾಗಿದ್ದಾರೆ. ಈ ಮೊದಲು ಐಶ್ವರ್ಯಾ ರೈ, ಸುಷ್ಮಿತಾ ಸೇನ್, ಯುಕ್ತಾ ಮುಖಿ,ಡಯಾನಾ ಹೇಡನ್, ಪ್ರಿಯಾಂಕ ಚೋಪ್ರಾ, ರೀಟಾ ಫಾರಿಯಾ ಭುವನ ಸುಂದರಿಯಾಗಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.