
ವಾಷಿಂಗ್ಟನ್(ನ.28): ವಿಶ್ವದಾದ್ಯಂತ ಹಲವು ಅಚ್ಚರಿ ಹಾಗೂ ವಿವಾದಗಳನ್ನು ಮೂಡಿಸಿ ಅಮೆರಿಕಾದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್ ಭಾರತೀಯ ಉದ್ಯೋಗಿಗಳ ಮೇಲೆ ಕಣ್ಣಿಟ್ಟಿದ್ದು ಅವರಿಗೆ ಗಂಭೀರವಾದ ಶಾಕ್ ನೀಡಲು ಹೊರಟಿದ್ದಾರೆ.
ಅಮೆರಿಕಾ ಸಂಯುಕ್ತ ಸಂಸ್ಥಾನದ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಲ್ಲಿ ವಿಶ್ವದ ವಿವಿಧ ರಾಷ್ಟ್ರಗಳಿಗಿಂತ ಭಾರತೀಯ ಮೂಲದವರ ಪಾಲು ಹೆಚ್ಚಾಗಿದೆ. ಅಮೆರಿಕಾ ಜಾಗತಿಕವಾಗಿ ಎತ್ತರಕ್ಕೆ ಏರಲು ಭಾರತೀಯರ ಕೊಡುಗೆ ಕೂಡ ಸಾಕಷ್ಟಿದೆ.
ಚುನಾವಣಾ ಪೂರ್ವದಲ್ಲಿಯೇ ನೂತನ ಯೋಜನೆಗಳನ್ನು ಹಮ್ಮಿಕೊಂಡು ಅಮೆರಿಕಾವನ್ನು ಮತ್ತಷ್ಟು ಪ್ರಬಲ ರಾಷ್ಟ್ರವನ್ನಾಗಿ ಮಾಡುವುದಾಗಿ ಆಶ್ವಾಸನೆ ನೀಡಿದ್ದ ಟ್ರಂಪ್ ಈ ಯೋಜನೆಗಳಲ್ಲಿ ಉದ್ಯೋಗ ನೀತಿಯು ಪ್ರಮುಖವಾಗಿದೆ.
ಟ್ರಂಪ್ ಜಾರಿಗೊಳಿಸಲಿರುವ ನೂತನ ಉದ್ಯೋಗ ನೀತಿಯಲ್ಲಿ ಮೂಲ ಅಮೆರಿಕಾದವರಿಗೆ ಬಿಟ್ಟರೆ ಉಳಿದವರಿಗೆ ಎರಡನೇ ಆದ್ಯತೆ. ವೇತನ ನೀಡುವಿಕೆ, ಉದ್ಯೋಗ ನೀಡುವಿಕೆ, ಬಡ್ತಿ ಮುಂತಾದವುಗಳಲ್ಲಿ ಮೊದಲ ಪ್ರಾಶಸ್ತ್ಯ ಅಮೆರಿಕಾದವರಿಗೆ ನೀಡಬೇಕು. ಉಳಿದ ದೇಶದವರೇನಿದ್ದರೂ ನಂತರದ ಪಾಲು.
ಅಲ್ಲದೆ ಭಾರತೀಯರಂತೂ ಅಮೆರಿಕಾದ ಹಲವು ಉನ್ನತ ಕಂಪನಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗಗಳನ್ನು ಪಡೆದಿದ್ದಾರೆ. ಪಡೆಯುತ್ತಿರುವವರ ಸಂಖ್ಯೆಯೇನು ಕಡಿಮೆಯಿಲ್ಲ. ತಮ್ಮ ಕೌಶಲ್ಯ, ಪರಿಶ್ರಮದ ಮೇಲೆ ಕಣ್ಣಿಟ್ಟಿರುವ ನಿಯೋಜಿತ ರಾಷ್ಟ್ರಾಧ್ಯಕ್ಷ ಟ್ರಂಪ್ ಭಾರತೀಯರ ಉದ್ಯೋಗಕ್ಕೆ ಕಡಿವಾಣ ಹಾಕಲು ಹೊರಟಿದ್ದಾರೆ.
ತಾವು ರೂಪಿಸಲಿರುವ ನೂತನ ನೀತಿಯ ಪ್ರಕಾರ ಅಮೆರಿಕಾದಲ್ಲಿ ಕಾರ್ಯ ನಿರ್ವಹಿಸುವ ಯಾವುದೇ ದೇಶದ ಕಂಪನಿಯು ಮೊದಲು ಹಾಗೂ ಹೆಚ್ಚಿನ ಪ್ರಮಾಣದ ಉದ್ಯೋಗಗಳನ್ನು ಅಮೆರಿಕಾದವರಿಗೇ ನೀಡಬೇಕು. ಭಾರತೀಯರಿಗೆ ನೀಡಲಾಗುವ ಉದ್ಯೋಗದ ಪ್ರಮಾಣವನ್ನು ಕಡಿಮೆ ಮಾಡಬೇಕು. ಉದ್ಯೋಗ ಆರಸಿ ಬರುವವರಿಗೂ ಕಡಿವಾಣ ಹಾಕಬೇಕು. ಈ ಯೋಜನೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಟ್ರಂಪ್ ಯೋಜಿಸಿದ್ದಾರೆ.
ಮುಂದಿನ ವರ್ಷದಲ್ಲಿ ಈ ಯೋಜನೆ ಜಾರಿಗೊಂಡರೆ ಅಮೆರಿಕಾದಲ್ಲಿ ಭಾರತೀಯರಿಗೆ ಉದ್ಯೋಗ ಗಗನಶಿಖರವಾಗುವುದಂತೂ ಖಂಡಿತಾ. ಯುವಪೀಳಿಗೆ ಸಹ ಹೊರದೇಶದ ಕನಸನ್ನು ಬಿಟ್ಟು ಇಲ್ಲಿಯೇ ಕೆಲಸ ಆರಂಭಿಸಿ ದೇಶದ ಅಭಿವೃದ್ಧಿಗೆ ಶ್ರಮಿಸುವುದು ಒಳಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.