ಕಾಶ್ಮೀರಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧ: ಪಾಕ್‌ ಸೇನೆ!

By Web DeskFirst Published Aug 7, 2019, 10:03 AM IST
Highlights

ಕಾಶ್ಮೀರಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧ: ಪಾಕ್‌ ಸೇನೆ!| ಕಾಶ್ಮೀರಿಗರ ಹಿತರಕ್ಷಣೆಗೆ ಸೇನೆ ಸದಾ ಸನ್ನದ್ಧ| ಪಾಕಿಸ್ತಾನ ಸೇನಾ ಮುಖ್ಯಸ್ಥ ಬಜ್ವಾ ಅಭಯ

ಇಸ್ಲಾಮಾಬಾದ್‌[ಆ.07]: ಜಮ್ಮು- ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಭಾರತದ ನಿರ್ಧಾರವನ್ನು ಕಾನೂನುಬಾಹಿರ, ಅಸಾಂವಿಧಾನಿಕ ಎಂದಿದ್ದ ಪಾಕಿಸ್ತಾನ, ಇದೀಗ ಕಾಶ್ಮೀರ ಮತ್ತು ಅಲ್ಲಿನ ಜನರಿಗಾಗಿ ನಮ್ಮ ಸೇನೆ ಏನು ಬೇಕಾದರೂ ಮಾಡಲು ಸಿದ್ಧವಾಗಿದೆ ಎಂದು ಗುಡುಗಿದೆ.

ಭಾರತದ ಇತರೆ ರಾಜ್ಯಗಳಂತೆ ಕಾಶ್ಮೀರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ದಶಕಗಳಿಂದಲೂ ಇಲ್ಲಿ ನಡೆಯುತ್ತಿರುವ ಪ್ರತ್ಯೇಕತಾವಾದವನ್ನು ದಮನ ಮಾಡಲು ಭಾರತ ಸರ್ಕಾರ ಈ ತಂತ್ರ ಅನುಸರಿಸಿದೆ.

ಆದರೆ, ಇಲ್ಲಿನ ಕಾಶ್ಮೀರಿಗರಿಗೆ ಸಹಾಯ ಮಾಡಲು ಪಾಕ್‌ ಸೇನೆ ಸದಾ ಸಿದ್ಧವಾಗಿದೆ. ಅಲ್ಲಿನ ಜನರ ಹಿತರಕ್ಷಣೆಗಾಗಿ ಯಾವ ಬೆಲೆ ತೆರಲೂ ಸೇನೆ ಸನ್ನದ್ಧವಾಗಿದೆ ಎಂದು ಪಾಕಿಸ್ತಾನ ಸೇನಾ ಮುಖ್ಯಸ್ಥ ಖಮರ್‌ ಜಾವೇದ್‌ ಬಜ್ವಾ ಇಲ್ಲಿ ಮಂಗಳವಾರ ನಡೆದ ಸೈನಿಕರ ಸಮ್ಮೇಳನದಲ್ಲಿ ಹೇಳಿದ್ದಾರೆ.

click me!