ಜಾಧವ್‌ಗೆ ಕ್ಷಮಾದಾನ ಸಾಧ್ಯತೆ ?

By Suvarna Web DeskFirst Published Jul 16, 2017, 11:08 PM IST
Highlights

ಬಜ್ವ ಅವರು ಜಾಧವ್ ಅವರು ಗಲ್ಲು ಶಿಕ್ಷೆ ವಿಧಿಸಲು ಸಲ್ಲಿಸಲಾಗಿದ್ದ ಸಾಕ್ಷ್ಯಗಳು ಹಾಗೂ ಕ್ಷಮಾದಾನ ಕೋರಿದ್ದಕ್ಕೆ ಸಲ್ಲಿಸಿರುವ ಸಾಕ್ಷಗಳನ್ನು ಪರೀಶೀಲನೆ ನಡೆಸುತ್ತಿದ್ದು,ಇದನ್ನು ಆಧರಿಸಿ ಬಜ್ವಾ ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ. ಮಿಲಿಟರಿ ಕೋರ್ಟ್ ಕ್ಷಮಾದಾನ ಅರ್ಜಿ ತಿರಸ್ಕರಿಸಿದ ಬಳಿಕ ಬಜ್ವಾ ಅವರ ಮುಂದೆ ಕಳೆದ ತಿಂಗಳು ಜಾಧವ್ ಕ್ಷಮಾದಾನ ಅರ್ಜಿ ಸಲ್ಲಿಸಿದ್ದಾರೆ.

ಇಸ್ಲಾಮಾಬಾದ್(ಜು.16): ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾ ಪಡೆಯ ನಿವೃತ್ತಿ ಅಧಿಕಾರಿ ಕುಲಭೂಷಣ್ ಜಾಧವ್ ಸಲ್ಲಿಸಿರುವ ಕ್ಷಮಾದಾನ ಅರ್ಜಿಯನ್ನು  ಕುರಿತು ಪಾಕ್  ಸೇನಾ ಮುಖ್ಯಸ್ಥ ಜನರಲ್ ಖ್ವಾಮರ್ ಜಾವೇದ್ ಬಜ್ವಾ ಪರಿಶೀಲನೆ ನಡೆಸಿದ್ದಾರೆ.

ಬಜ್ವ ಅವರು ಜಾಧವ್ ಅವರು ಗಲ್ಲು ಶಿಕ್ಷೆ ವಿಧಿಸಲು ಸಲ್ಲಿಸಲಾಗಿದ್ದ ಸಾಕ್ಷ್ಯಗಳು ಹಾಗೂ ಕ್ಷಮಾದಾನ ಕೋರಿದ್ದಕ್ಕೆ ಸಲ್ಲಿಸಿರುವ ಸಾಕ್ಷಗಳನ್ನು ಪರೀಶೀಲನೆ ನಡೆಸುತ್ತಿದ್ದು,ಇದನ್ನು ಆಧರಿಸಿ ಬಜ್ವಾ ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ. ಮಿಲಿಟರಿ ಕೋರ್ಟ್ ಕ್ಷಮಾದಾನ ಅರ್ಜಿ ತಿರಸ್ಕರಿಸಿದ ಬಳಿಕ ಬಜ್ವಾ ಅವರ ಮುಂದೆ ಕಳೆದ ತಿಂಗಳು ಜಾಧವ್ ಕ್ಷಮಾದಾನ ಅರ್ಜಿ ಸಲ್ಲಿಸಿದ್ದಾರೆ.

ಪಾಕಿಸ್ತಾನ ಮಿಲಿಟರಿ ಕೊರ್ಟ್ ಜಾಧವ್‌ ಅವರಿಗೆ ಏಪ್ರಿಲ್‌ನಲ್ಲಿ ಗಲ್ಲು ಶಿಕ್ಷೆ ವಿಧಿಸಿತ್ತು. ಆದರೆ ಹೇಗ್‌ನ ಅಂತಾರಾಷ್ಟ್ರೀಯ ನ್ಯಾಯಾಲಯ ಗಲ್ಲು ಶಿಕ್ಷೆಗೆ ತಡೆಯಾಜ್ಞೆ ನೀಡಿದ ಕಾರಣ  ಪಾಕಿಸ್ತಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀರ್ವ ಮುಖಭಂಗಕ್ಕೀಡಾಗಿತ್ತು.

click me!