ನಾಳೆ ಕುಲಭೂಷಣ್ ಜಾಧವ್ ಭೇಟಿ ಮಾಡಲಿರುವ ಭಾರತೀಯ ಅಧಿಕಾರಿಗಳು!

By Web DeskFirst Published Aug 1, 2019, 5:18 PM IST
Highlights

ಪಾಕಿಸ್ತಾನದಲ್ಲಿ ಬಂಧಿತನಾಗಿರುವ ಭಾರತದ ಕುಲಭೂಷಣ್ ಜಾಧವ್| ಜಾಧವ್ ಭೇಟಿಯಾಗಲು ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳಿಗೆ ಪಾಕ್ ಅನುಮತಿ| ಕುಲಭೂಷಣ್ ಜಾಧವ್ ಕುರಿತ ಐಸಿಜೆ ತೀರ್ಪಿನ ಹಿನ್ನೆಲೆ| ಜಾಧವ್ ಭೇಟಿಗೆ ಭಾರತೀಯ ದೂತಾವಾಸ ಕಚೇರಿಗೆ ಅವಕಾಶ ಕಲ್ಪಿಸಿದ ಪಾಕಿಸ್ತಾನ| ನಾಳೆ ಕುಲಭೂಷಣ್ ಜಾಧವ್ ಭೇಟಿ ಮಾಡಲಿರುವ ಭಾರತೀಯ ಅಧಿಕಾರಿಗಳು|

ಇಸ್ಲಾಮಾಬಾದ್(ಆ.01): ಪಾಕಿಸ್ತಾನದಲ್ಲಿ ಬಂಧಿತನಾಗಿರುವ ಭಾರತೀಯ ಮಾಜಿ ನೌಕಾಪಡೆ ಅಧಿಕಾರಿ ಕುಲಭೂಷಣ್ ಜಾಧವ್ ಅವರನ್ನು ಭೇಟಿಯಾಗಲು ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳಿಗೆ ಪಾಕ್ ಸರ್ಕಾರ ಅನುಮತಿ ನೀಡಿದೆ.

Pakistani media: Pakistan offers consular access to Kulbhushan Jadhav tomorrow. (file pic) pic.twitter.com/M76cmyicYA

— ANI (@ANI)

ಜಾಧವ್’ಗೆ ಗೆ ಅಗತ್ಯ ರಾಜತಾಂತ್ರಿಕ ನೆರವು ನಿಡಲು ಸಮ್ಮತಿಸಿರುವ ಪಾಕ್, ಅದರ ಭಾಗವಾಗಿ ಭಾರತೀಯ ದೂತಾವಾಸ ಕಚೇರಿಯ ಅಧಿಕಾರಿಗಳ ಭೇಟಿಗೆ ಅನುವು ಮಾಡಿಕೊಟ್ಟಿದೆ.

ಕುಲಭೂಷಣ್ ಜಾಧವ್ ಕುರಿತ ಅಂತಾರಾಷ್ಟ್ರೀಯ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ, ಪಾಕಿಸ್ತಾನ ಜಾಧವ್ ಭೇಟಿಗೆ ಭಾರತೀಯ ದೂತಾವಾಸ ಕಚೇರಿಗೆ ಅವಕಾಶ ನೀಡಿದ್ದು, ನಾಳೆ ಭಾರತೀಯ ಅಧಿಕಾರಿಗಳು ಜಾಧವ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.

Raveesh Kumar, MEA on Pakistan offering India consular Kulbhushan Jadhav: We have received a proposal from Pakistan. We are evaluating the proposal in the light of ICJ judgement. We will maintain communication with Pakistan in this matter through diplomatic channels. pic.twitter.com/t4re9R5LUE

— ANI (@ANI)

ಈ ಮಧ್ಯೆ ಕುಲಭೂಷಣ್ ಜಾಧವ್’ಗೆ ರಾಜತಾಂತ್ರಿಕ ನೆರವು ನೀಡುತ್ತಿರುವುದರ ಕುರಿತು ಪಾಕ್ ಸರ್ಕಾರ ಇದುವರೆಗೂ ಯಾವುದೇ ಹೇಳಿಕೆ ನೀಡಿಲ್ಲವಾದ್ದರಿಂದ, ನಾವು ಈ ಕುರಿತು ಭಾರತೀಯ ದೂತಾವಾಸ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

 
 

click me!