ಮದ್ಯಪ್ರಿಯರಿಗೆ ಗೋವಾದಿಂದ ಶುಭ ಸುದ್ದಿ... ಹೆಚ್ಚಿಗೆ ತರಬಹುದು

By Web DeskFirst Published Aug 1, 2019, 4:12 PM IST
Highlights

ಮದ್ಯಪ್ರಿಯರಿಗೆ, ಗೋವಾ ಪ್ರವಾಸಿಗರಿಗೆ ಒಂದು ಶುಭ ಸುದ್ದಿ ಇದೆ. ಗೋವಾ ಪ್ರವಾಸಕ್ಕೆ ಹೋದವರು ಮನೆಗೆ ಬರುವಾಗ  ಒಂದೆರಡು ಬಾಟಲ್ ಹೆಚ್ಚಿಗೆ ತರಬಹುದು.

ಪಣಜಿ (ಆಗಸ್ಟ್. 01) ಮದ್ಯ  ಗೋವಾ ಸರ್ಕಾರ ತನ್ನಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಸಿಹಿ ಸುದ್ದಿಯನ್ನು ನೀಡಿದೆ. ರಾಜ್ಯದಿಂದ 2 ಬಾಟಲ್‌ಗಿಂತ ಹೆಚ್ಚಿನ ಮದ್ಯವನ್ನು ತೆಗೆದುಕೊಂಡು ಹೋಗಲು ಅನುಮತಿ ನೀಡಲು ಸರ್ಕಾರ ಚಿಂತನೆ ನಡೆಸಿದೆ.

ಗೋವಾ ವಿಧಾನಸಭೆಯಲ್ಲೇ ಈ ಬಗ್ಗೆ ಚರ್ಚೆ ನಡೆದಿದೆ.  ರಾಜ್ಯಕ್ಕೆ ಮತ್ತಷ್ಟು ಪ್ರವಾಸಿಗರನ್ನು ಆಕರ್ಷಣೆ ಮಾಡಲು ಮದ್ಯದ ಮೇಲೆ ಹೇರಿರುವ ಮಿತಿ ಸಡಿಲ ಮಾಡಲು ಚಿಂತನೆ ನಡೆಸಲಾಗಿದೆ.

ದಾವಣಗೆರೆ ಯುವತಿ ಫುಲ್ ಟೈಟ್, ಬಿಡಿಸಲು ಮುಂದಾದವರ ಜತೆ ಬೀದಿ ಫೈಟ್!

ವಿಧಾನಸಭೆಯಲ್ಲಿ ಮಾತನಾಡಿದ ಗೋವಾ ಸಿಎಂ ಪ್ರಮೋದ್ ಸಾವಂತ್. "ಎರಡು ಬಾಟಲ್‌ಗಿಂತ ಹೆಚ್ಚಿನ ಮದ್ಯವನ್ನು ತೆಗೆದುಕೊಂಡು ಹೋಗಲು ಅನುಮತಿ ನೀಡಲಾಗುತ್ತದೆ. ಪ್ರಸ್ತುತ ಒಂದು ಬಾಟಲ್ ಐಎಂಎಫ್‌ಎಲ್, ಒಂದು ಬಾಟಲ್ ಲಿಕ್ಕರ್ ತೆಗೆದುಕೊಂಡು ಹೋಗಲು ಅನುಮತಿ ಇದೆ. ಹೆಚ್ಚಿನ ಬಾಟಲ್‌ಗೆ ಅನುಮತಿ ನೀಡಿದರೆ ನಮ್ಮ ಆದಾಯ ಹೆಚ್ಚಲಿದೆ" ಎಂದರು.

ಹೆಚ್ಚಿನ ಬಾಟಲ್‌ಗಳ ಮದ್ಯವನ್ನು ತೆಗೆದುಕೊಂಡು ಬಂದರೆ ಗೋವಾ ಗಡಿ ದಾಟುವ ಚೆಕ್ ಪೋಸ್ಟ್‌ನಲ್ಲಿ ಹಿಡಿಯಲಾಗುತ್ತದೆ. ಮಹಾರಾಷ್ಟ್ರ ಮತ್ತು ಕರ್ನಾಟಕದ ಪ್ರವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮದ್ಯವನ್ನು ಗೋವಾದಿಂದ ತೆಗೆದುಕೊಂಡು ಹೋಗುತ್ತಾರೆ. 

ರಾಜ್ಯಗಳ ಗಡಿಯನ್ನು ದಾಟಿ ಬರುವಾಗ ಎರಡು ರಾಜ್ಯದ ಚೆಕ್ ಪೋಸ್ಟ್ ದಾಟಿ ಬರಬೇಕಾಗುತ್ತದೆ.  ಈ ವೇಳೆ ವಾಹನಗಳನ್ನು ಪರಿಶೀಲನೆಗೆ ಒಳಪಡಿಸಲಾಗುತ್ತದೆ.

click me!