
ವಿಶ್ವಸಂಸ್ಥೆ (ಅ.1): ಹಿಂದೆಯೊಮ್ಮೆ ವಿಶ್ವಕ್ಕೆ ಸುಳ್ಳು ಚಿತ್ರ ತೋರಿಸಿ ಅವಮಾನಕ್ಕೀಡಾಗಿದ್ದ ಪಾಕಿಸ್ತಾನ ಇದೀಗ ಮತ್ತದೇ ತಪ್ಪು ಮಾಡಿದೆ. ಸುಳ್ಳು ಚಿತ್ರ ತೋರಿಸಿ, ಭಾರತ ಪಾಕಿಸ್ತಾನದ ವಿರುದ್ಧ ಸದಾ ಕತ್ತಿ ಮಸಿಯುತ್ತಿದೆ ಎಂಬುದನ್ನು ಸಾಬೀತು ಪಡಿಸಲು ವಿಫಲ ಯತ್ನ ನಡೆಸಿದೆ.
ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೊಹ್ಮೂದ್ ಖುರೇಷಿ, 'ಪಾಕಿಸ್ತಾನ ಆಕ್ರಿಮಿತ ಕಾಶ್ಮೀರದಲ್ಲಿ ದೌರ್ಜನ್ಯ' ಎಂಬ ಶಿರ್ಷಿಕೆಯಲ್ಲಿ ಬಿಡುಗಡೆ ಮಾಡಿರುವ ಅಂಚೆ ಚೀಟಿಯನ್ನು ತೋರಿಸಿ, 'ಮಾನವ ಹಕ್ಕು ಉಲ್ಲಂಘನೆ'ಯ ಪ್ರತೀಕ ಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಶನಿವಾರ ಹೇಳಿ ಕೊಂಡಿದ್ದರು.
ಅಲ್ಲದೇ ಈ ಅಂಚೆ ಚೀಟಿಯನ್ನು ನೆಪವಾಗಿಟ್ಟುಕೊಂಡು, ಭಾರತ, ಪಾಕಿಸ್ತಾನದೊಂದಿಗಿನ ಮಾತುಕತೆಯನ್ನು ರದ್ದು ಮಾಡಿದೆ ಎಂದೂ ಹೇಳಿದ್ದರು. ಆದರೆ, ಈ ಅಂಚೆಚೀಟಿಯಲ್ಲಿ ಪಾಕಿಸ್ತಾನ ಬಳಸಿದ 20 ಚಿತ್ರಗಳಲ್ಲಿ ಎರಡನ್ನು ನಕಲಿ ಸೃಷ್ಟಿಸಿದ್ದು, ಎಂಬದು ತಿಳಿದು ಬಂದಿದೆ.
ಕಾಶ್ಮೀರ ಹುತಾತ್ಮ ದಿನದ ಅಂಗವಾಗಿ ಪಾಕಿಸ್ತಾನ ಜುಲೈ 13, 2018ರಂದು 20 ಸ್ಮರಣಾರ್ಥ ಅಂಚೆ ಚೀಟಿಗಳನ್ನು ಬಿಡುಗಡೆಗೊಳಿಸಿತ್ತು. ಪಾಕಿಸ್ತಾನ ಮಾಧ್ಯಮ ಹಾಗೂ ಬ್ಲಾಗ್‌ವೊಂದರಲ್ಲಿ ಈ ಸುದ್ದಿಯೂ ಪ್ರಕಟವಾಗಿತ್ತು. ಪಾಕಿಸ್ತಾನದ ನಗದು 8 ರೂ.ಗೆ ಈ ಅಂಚೆ ಚೀಟಿಯನ್ನು ಮಾರಲಾಗಿತ್ತು.
ಈ ಅಂಚೆ ಚೀಟಿಯಲ್ಲಿ ಬಳಸಿದ ಎರಡು ಫೋಟೋಗಳು ಜನವರಿ 19, 2014ರಂದು ಕಾಶ್ಮೀರಿ ಪಂಡಿತರ ವಲಸೆ ದಿನದಂದು ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಫೋಟೋ, ಎಂದು ಬಿಜೆಪಿ ದಿಲ್ಲಿ ವಕ್ತಾರ ತಜೀಂದರ್ ಪಾಲ್ ಸಿಂಗ್ ಬಗ್ಗಾ ಟ್ವೀಟ್ ಮಾಡಿದ್ದಾರೆ.
ಈ ಫೋಟೋವನ್ನು 'ಮಿಸ್ಸಿಂಗ್ ಪರ್ಸನ್' ಎಂಬ ಶಿರ್ಷಿಕೆಯಡಿಯಲ್ಲಿ ಪಾಕಿಸ್ತಾನ ಬಳಸಿಕೊಂಡಿದೆ. ಆ ಮೂಲಕ ಸುಳ್ಳು ಚಿತ್ರಗಳ ಮೂಲಕ ವಿಶ್ವವನ್ನು ದಾರಿ ತಪ್ಪಿಸಲು ಪಾಕಿಸ್ತಾನ ಯತ್ನಿಸಿದೆ.
ಪ್ಯಾಲೇಸ್ತೀನ್ ಬಾಲಕಿಯ ಚಿತ್ರವನ್ನು ತೋರಿಸಿ, ಕಾಶ್ಮೀರದಲ್ಲಿ ನಡೆದ ಕಲ್ಲು ತೂರಾಟದ ಸಂತ್ರಸ್ತೆ ಎಂದು ಸಾಬೀತು ಪಡಿಸಲು ಪಾಕಿಸ್ತಾನ ಕಳೆದ ವರ್ಷ ವಿಶ್ವಸಂಸ್ಥೆ ಸಭೆಯಲ್ಲಿ ಯತ್ನಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ