ಇದೊಂದು ವಿಚಿತ್ರ ಪ್ರಕರಣ. ಹೀಗೆ ಆಗುತ್ತದೆ ಎಂದು ಇಬ್ಬರು ಭಾವಿಸಿರಲಿಲ್ಲ. ಆದರೆ ಈಗ ಅನಿವಾರ್ಯವಾಗಿ ನ್ಯಾಯಾಲಯದ ಮೆಟ್ಟಿಲು ಹತ್ತಬೇಕಾಗಿದೆ. ಅಲ್ಲಿ ಸಹ ಪ್ರಕರಣ ಸುಲಭವಾಗಿ ಪರಿಹಾರ ಕಾಣುವ ಲಕ್ಷಣ ಇಲ್ಲ.
ಬೊಲಾವಿಯೋ, ಜಿಂಬಾಬ್ವೆ[ಸೆ.14] 34 ವರ್ಷದ ವ್ಯಕ್ತಿ ಮೇಲೆ ಇದೀಗ ಅತ್ಯಾಚಾರದ ಆರೋಪ ಬಂದಿದೆ. ಆರೋಪ ಬಂದಿರುವುದು ಮಾತ್ರ ವಿಚಿತ್ರ. ವೇಶ್ಯೆಯೊಬ್ಬಳು ಆತನ ಮೇಲೆ ಅತ್ಯಾಚಾರದ ಆರೋಪ ಮಾಡಿದ್ದಾಳೆ.
ಗಾಡ್ ಫ್ರಿ ಮುಟೆಸ್ವಾ ಅತ್ಯಾಚಾರದ ಪ್ರಕರಣ ಎದುರಿಸುತ್ತಿದ್ದಾನೆ. ಇದೆಲ್ಲದಕ್ಕೂ ಕಾರಣ ಒಂದು ಕಾಂಡೋಮ್! ಜುಲೈ 30 ರಂದು 28 ವರ್ಷದ ವೇಶ್ಯೆಯೊಬ್ಬಳನ್ನು ಕರೆದುಕೊಂಡು ಹೋದ ಮುಟೆಸ್ವಾ ಸೆಕ್ಸ್ ನಲ್ಲಿ ನಿರತರಾಗಿದ್ದರು. ಆದರೆ ಇದಕ್ಕಿದ್ದಂತೆ ಧರಿಸಿದ ಕಾಂಡೋಮ್ ಒಡೆದುಹೋಗಿದೆ.
ಸೆಕ್ಸ್ ನಿಲ್ಲಿಸಿದರೆ ದೇಹದ ಮೇಲಾಗುವ ಪರಿಣಾಮವೇನು?
ಈ ವೇಳೆ ಲೈಂಗಿಕ ಕ್ರಿಯೆ ಅಲ್ಲಿಗೆ ನಿಲ್ಲಿಸಲು ವೇಶ್ಯೆ ಮನವಿ ಮಾಡಿದ್ದಾಳೆ. ಆದರೆ ಮುಟೆಸ್ವಾ ಕೇಳಿಲ್ಲ. ನಂತರ ಎಲ್ಲವನ್ನು ಮುಗಿಸಿ ಹಾಗೆ ಮಲಗಿದ್ದವ ಹೇಳಿದ ಹಣಕ್ಕಿಂತ ಕಡಿಮೆ ನೀಡಿದ್ದಾನೆ ಎಂದು ಆರೋಪಿಸಿರುವ ವೇಶ್ಯೆ ಆತನ ಮೇಲೆ ಅತ್ಯಾಚಾರದ ಪ್ರಕರಣದ ದಾಖಲಿಸಿದ್ದಾರೆ. ಸದ್ಯ ಪೊಲೀಶರ ವಶದಲ್ಲಿರುವ ಮುಟೆಸ್ವಾ ಆರೋಪ ನಿರಾಕರಿಸಿದ್ದಾನೆ.