ಪಾಕ್ ಸೇನೆಯಿಂದ ಭಯೋತ್ಪಾದನೆ ಪೋಷಣೆ, ದೇಶ ನಾಶ : ಪಾಕ್ ರಾಜಕಾರಣಿ ಪುತ್ರಿಯ ಆವೇಶ

Published : Dec 01, 2017, 01:43 PM ISTUpdated : Apr 11, 2018, 01:12 PM IST
ಪಾಕ್ ಸೇನೆಯಿಂದ ಭಯೋತ್ಪಾದನೆ ಪೋಷಣೆ, ದೇಶ ನಾಶ : ಪಾಕ್ ರಾಜಕಾರಣಿ ಪುತ್ರಿಯ ಆವೇಶ

ಸಾರಾಂಶ

ಸೇನೆಯ ಇಬ್ಬಗೆ ನೀತಿಯಿಂದ ಭಯೋತ್ಪಾದಕರಿಂದ ನಮ್ಮ ಸೈನಿಕರು ಯಾವುದೇ ಕಾರಣವಿಲ್ಲದೆ ಹುತಾತ್ಮರಾಗುತ್ತಿದ್ದಾರೆ. ಸಾರ್ವಜನಿಕರ ಬದುಕು ನರಕವಾಗುತ್ತಿದೆ.

ನವದೆಹಲಿ( ಡಿ.01 ): ಪಾಕ್ ಸೇನೆಯ ಕುಕೃತ್ಯದ ಬಗ್ಗೆ ಅಲ್ಲಿನ ರಾಜಕಾರಣಿಯ ಪುತ್ರಿಯೊಬ್ಬರು ತಿರುಗಿಬಿದ್ದಿದ್ದಾರೆ. ತೆಹ್ರಿಕ್-ಇ-ಇನ್ಸಾಫ್'ನ ಹಿರಿಯ ನಾಯಕ ಶಿರನ್ ಮಜಾರಿಯ ಪುತ್ರಿಯಾದ ಇಮಾನ್ ಮಜಾರಿ ಪಾಕ್ ಸೇನೆಯು ದೇಶದ ಒಳಗೆ ಹಾಗೂ ಹೊರಗಡೆ ನಡೆಸುತ್ತಿರುವ ದುಷ್ಕೃತ್ಯವನ್ನು ವಿಡಿಯೋ ಮಾಡಿ ಟ್ವಿಟರ್'ನಲ್ಲಿ ಶೇರ್ ಮಾಡಿದ್ದಾಳೆ. ಆದರೆ ಈಕೆಯ ಹೇಳಿಕೆ ಟ್ವಿಟರ್'ನಲ್ಲಿ ರದ್ದಾಗಿದ್ದು, ಯೂಟ್ಯೂಬ್ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಹಾಗಿದೆ.

'ಪಾಕ್ ಸೇನೆ ಭಯೋತ್ಪಾದನೆಯನ್ನು ಪೋಷಿಸುತ್ತಿದೆ. ಇದರಿಂದ ಅಮಾಯಕ ಸೈನಿಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅವರ ಪ್ರಾಣ ತ್ಯಾಗ ವ್ಯರ್ಥವಾಗುತ್ತಿದೆ. ನಾಚಿಕೆಯಾಗಬೇಕು ನಮ್ಮ ಸೇನೆಗೆ. ಭಯೋತ್ಪಾದನೆ ಪೋಷಣೆಗಾಗಿ ಸಾರ್ವಜನಿಕರಿಂದ ನಿಧಿ ಸಂಗ್ರಹಿಸುತ್ತಿರುವ ಸೇನೆ ಇಸ್ಲಾಮಾಬಾದ್ ಹಾಗೂ ದೇಶದ ಹಲವು ಭಾಗಗಳಲ್ಲಿ ಉಗ್ರಗಾಮಿಗಳಿಗೆ ಕುಮ್ಮಕ್ಕು ಕೊಡುತ್ತಿದೆ.

ಸೇನೆಯ ಇಬ್ಬಗೆ ನೀತಿಯಿಂದ ಭಯೋತ್ಪಾದಕರಿಂದ ನಮ್ಮ ಸೈನಿಕರು ಯಾವುದೇ ಕಾರಣವಿಲ್ಲದೆ ಹುತಾತ್ಮರಾಗುತ್ತಿದ್ದಾರೆ. ಸಾರ್ವಜನಿಕರ ಬದುಕು ನರಕವಾಗುತ್ತಿದೆ. ಭಯೋತ್ಪಾದಕರನ್ನು ಪೋಷಣೆಯಿಂದ ದೇಶ ನಾಶವಾಗುತ್ತಿರುವ ಬಗ್ಗೆ ಸೇನೆಯು ಇನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ.

ಇತ್ತೀಚಿಗಷ್ಟೆ ದೈವನಿಂದನೆ ಆರೋಪದಲ್ಲಿ ಪಾಕಿಸ್ತಾನದ ಕಾನೂನು ಸಚಿವ ಝಾಹಿದ್‌ ಹಮೀದ್‌ ರಾಜೀನಾಮೆಗೆ ಆಗ್ರಹಿಸಿ ಇಸ್ಲಾಮಿಕ್ ಮೂಲಭೂತವಾದಿಗಳು ರಾವಲ್ಪಿಂಡಿ ಮತ್ತು ಇಸ್ಲಾಮಾಬಾದ್‌ ನಡುವೆ ರಸ್ತೆ ಬಂದ್ ಮಾಡಿ ಪ್ರತಿಭಟಿಸಿದ ಸಂದರ್ಭದಲ್ಲಿ ಸೇನೆ ಹಾಗೂ ಪ್ರತಿಭಟನಾಕಾರರ ಮಧ್ಯೆ ಗಲಭೆಯಾಗಿ ಕೆಲವರು ಮೃತಪಟ್ಟು ನೂರಾರು ಮಂದಿ ಗಾಯಗೊಂಡಿದ್ದರು. ಇಮಾನ್ ಆರೋಪಕ್ಕೆ ಈ ಘಟನೆ ಕಾರಣ ಎನ್ನಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರಿನಲ್ಲಿ ಊಬರ್‌ ಕ್ರಾಂತಿಯ ಹೆಜ್ಜೆ, B2B ಲಾಜಿಸ್ಟಿಕ್ಸ್, ಮೆಟ್ರೋ ಟಿಕೆಟ್‌ ಕೂಡ ಲಭ್ಯ!
ದೆವ್ವಗಳ ಬಗ್ಗೆ ಪಿಎಚ್‌ಡಿ ಮಾಡಲಿದ್ದಾರೆ ಬಾಗೇಶ್ವರ ಬಾಬಾ ಧೀರೇಂದ್ರ ಶಾಸ್ತ್ರಿ! ಘೋಸ್ಟ್ ಬಗ್ಗೆ ತಿಳಿಯಲು ನಿಮಗೆ ಆಸಕ್ತಿ ಇದೆಯೇ?