
ಅಹ್ಮದಾಬಾದ್(ಡಿ.1): ಚುನಾವಣೆ ಎದುರಿಸುತ್ತಿರುವ ಗುಜರಾತ್‌ನಲ್ಲಿ ಬಿಜೆಪಿ ವಿರುದ್ಧ ಸಮರ ಸಾರಿರುವ ಪಟೇಲ್ ಸಮುದಾಯದ ನಾಯಕ ಹಾರ್ದಿಕ್ ಪಟೇಲ್ ಸಾಮಾಜಿಕ ಜಾಲತಾಣದಲ್ಲಿ ರಾಜ್ಯದ ಆಡಳಿತಾರೂಢ ಪಕ್ಷದ ವಿರುದ್ಧ ತೀವ್ರ ಪೈಪೋಟಿ ನೀಡುತ್ತಿದ್ದಾರೆ.
ಅದರಲ್ಲೂ ಫೇಸ್‌ಬುಕ್‌ನಲ್ಲಿ ಬಿಜೆಪಿಗಿಂತ ಹಾರ್ದಿಕ್ ಪಟೇಲ್ ಹೆಚ್ಚು ಜನಪ್ರಿಯರಾಗಿದ್ದಾರೆ. ಬಿಜೆಪಿಗೆ ಮತದಾನ ಮಾಡದಂತೆ ಕೋರಿರುವ ಹಾರ್ದಿಕ್ ಫೇಸ್‌ಬುಕ್ ಪೋಸ್ಟ್'ಗೆ ಗುರುವಾರ ಮಧ್ಯಾಹ್ನ 11 ರವರೆಗೆ 8 ಲಕ್ಷ ಲೈಕ್ ಬಂದಿವೆ. ಬಿಜೆಪಿಯ ಫೇಸ್'ಬುಕ್ ಪುಟಕ್ಕಿಂತ ಹಾರ್ದಿಕ್ ಫೇಸ್'ಬುಕ್ ಪುಟಕ್ಕೆ ಶೇ.300ರಷ್ಟು ಅಧಿಕ ಪ್ರತಿಕ್ರಿಯೆಗಳು ಈ ಹೊತ್ತಿಗೆ ವ್ಯಕ್ತವಾಗಿದ್ದವು.
ಕಳೆದ 7 ಸಮಾವೇಶಗಳ ಫೇಸ್‌ಬುಕ್ ಲೈವ್'ನಲ್ಲಿ, ಹಾರ್ದಿಕ್ ನೇರ ಪ್ರಸಾರವನ್ನು ಒಟ್ಟು 33.24 ಲಕ್ಷ ಮಂದಿ ವೀಕ್ಷಿಸಿದ್ದರೆ, ಪ್ರಧಾನಿ ಮೋದಿಯವರ ಲೈವ್ ಪ್ರಸಾರ 10.9 ಲಕ್ಷ ಮಂದಿ ಮಾತ್ರ ವೀಕ್ಷಿಸಿದ್ದಾರೆ. ಹೀಗಾಗಿ ಗುಜರಾತ್‌ನಲ್ಲಿ ಬಿಜೆಪಿಯ ಸಾಮಾಜಿಕ ಜಾಲತಾಣ ವಿಭಾಗ ಹಾರ್ದಿಕ್ ಪಟೇಲ್ ಜೊತೆ ತೀವ್ರ ಪೈಪೋಟಿ ನೀಡುವಂತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.