ಆರ್ಟಿಕಲ್ 370 ರದ್ದತಿ: ವಿಡಿಯೋ ನೋಡಿದ್ರೆ ಗೊತ್ತಾಗುತ್ತೆ ಇಮ್ರಾನ್ ಸ್ಥಿತಿ!

Published : Aug 09, 2019, 06:00 PM IST
ಆರ್ಟಿಕಲ್ 370 ರದ್ದತಿ: ವಿಡಿಯೋ ನೋಡಿದ್ರೆ ಗೊತ್ತಾಗುತ್ತೆ ಇಮ್ರಾನ್ ಸ್ಥಿತಿ!

ಸಾರಾಂಶ

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಹಿನ್ನೆಲೆ| ಮೋದಿ ನಿರ್ಣಯದಿಂದ ಪಾಕ್ ಪ್ರಧಾನಿ ಸ್ಥಿತಿ ಹೇಗಾಗಿದೆ ಗೊತ್ತಾ?| ಟ್ರೋಲ್’ಗಳ ಸುಳಿಯಲ್ಲಿ ಸಿಕ್ಕು ನಲುಗುತ್ತಿರುವ ಪಾಕ್ ಪ್ರಧಾನಿ| ಸಿಕ್ಕಾಪಟ್ಟೆ ವೈರಲ್ ಆಗಿದೆ ಓಪಿನಿಯನ್ ಪೋಸ್ಟ್ ಟ್ರೋಲ್ ವಿಡಿಯೋ| ಇಮ್ರಾನ್ ಯಾರಾರೊಂದಿಗೆ ಏನೇನು ಮಾತಾಡ್ತಾರೆ ನೀವೇ ನೋಡಿ| ತಮಾಷೆಯ ವಿಡಿಯೊವನ್ನು ತಮಾಷೆಯಾಗಿಯೇ ನೋಡುವಂತೆ ವಿನಂತಿ|

ಬೆಂಗಳೂರು(ಆ.09): ಮೊದಲೆಲ್ಲಾ ಮಹತ್ತರ ರಾಜಕೀಯ ನಿರ್ಣಯಗಳಾದಾಗ ಜನ ಪತ್ರಿಕೆಗಳನ್ನು ಹಿಡಿದು, ಚಾ ಹೀರುತ್ತಾ ಮನೆಯಲ್ಲಿ ಸಾರ್ವಜನಿಕ ಕಟ್ಟೆಗಳಲ್ಲಿ ಹರಟುತ್ತಾ ಚರ್ಚೆ ನಡೆಸುತ್ತಿದ್ದರು. 

ಕಾಲ ಬದಲಾಗಿದೆ. ಇದು ಸೋಶಿಯಲ್ ಮಿಡಿಯಾ ಜಮಾನಾ. ರಾಜಕೀಯವೊಂದೇ ಅಲ್ಲ, ಸಮಾಜದ ಎಲ್ಲ ಆಗುಹೋಗುಗಳ ಕುರಿತು ಯುವ ಸಮುದಾಯ ಈಗ ಬೇಗ ಪ್ರತಿಕ್ರಿಯೆ ನೀಡುತ್ತದೆ. 

ಅದರಲ್ಲೂ ಹೇಳಿ ಕೇಳಿ ಇದು ಟ್ರೋಲ್’ಗಳ ಜಮಾನಾ. ಟ್ರೋಲ್ ಜಗತ್ತು ಯಾರನ್ನೂ ಬಿಡುವುದಿಲ್ಲ. ಅದರಲ್ಲೂ ದೇಶದ ವಿಷಯಕ್ಕೆ ಬಂದರೆ ಯುವ ಸಮುದಾಯ ಟ್ರೋಲ್’ಗಳ ಮೂಲಕವೇ ವಿರೋಧಿಗಳ ಬಾಯಿ ಮುಚ್ಚಿಸುತ್ತದೆ.

ಅದರಂತೆ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿರುವ ಮೋದಿ ಸರ್ಕಾರದ ಕ್ರಮದಿಂದಾಗಿ ಪಾಕಿಸ್ತಾನ ಹೈರಾಣಾಗಿರುವುದು ಎಲ್ಲರಿಗೂ ಗೊತ್ತೇ ಇದೆ.

"

ಕಾಶ್ಮೀರ ವಿಷಯವನ್ನೇ ಉಸಿರಾಡುತ್ತಿದ್ದ ಪಾಕಿಸ್ತಾನಕ್ಕೆ ಮೋದಿ ಸರ್ಕಾರ ನಿಡಿದ ಗುದ್ದು ತಡೆಯಲಾಗುತ್ತಿಲ್ಲ. ಜಾಗತಿಕ ಅಪಮಾನ ಮತ್ತು ಆಂತರಿಕ ಒತ್ತಡ ತಡೆಯಲಾರದೇ, ಪಾಕ್ ಪ್ರಧಾನಿ ಇಮ್ರಾನ್ ಖಾನ್ ನಲುಗಿ ಹೋಗಿದ್ದಾರೆ.

ಈ ಹಿನ್ನೆಲೆಯಲ್ಲಿ ‘ಓಪಿನಿಯನ್ ಪೋಸ್ಟ್’ ಎಂಬ ಡಿಜಿಟಲ್ ಮಾಧ್ಯಮವೊಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ತಮಾಷೆಯ ವಿಡಿಯೋದಿಂದ ಟ್ರೋಲ್ ಮಾಡಿದೆ.

ಆರ್ಟಿಕಲ್ 370 ರದ್ದತಿಯಿಂದಾಗಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಪರಿಸ್ಥಿತಿಯ ಕುರಿತು ತಮಾಷೆಯಾಗಿ ಈ ವಿಡಿಯೋ ಮಾಡಲಾಗಿದೆ. ವಿಡಿಯೋದಲ್ಲಿ ಯಾವುದೇ ವ್ಯಕ್ತಿಗಳ ಬಗ್ಗೆ ನೇರವಾಗಿ ಹೇಳದಿದ್ದರೂ, ಫೋಟೋಗಳನ್ನು ತೋರಿಸುವ ಮೂಲಕ ಇಮ್ರಾನ್ ಖಾನ್ ಫೋನ್ ಮೂಲಕ ಯಾರೊಂದಿಗೆ ಮಾತನಾಡುತ್ತಿದ್ದಾರೆ ಎಂಬುದನ್ನು ತೋರಿಸಲಾಗಿದೆ.

ಈ ವಿಡಿಯೋ ತುಂಬ ತಮಾಷೆಯಾಗಿದ್ದು, ನೀವು ಕೂಡ ಇದನ್ನು ತುಂಬ ತಮಾಷೆಯಾಗಿಯೇ ನೋಡಿ ಎಂಜಾಯ್ ಮಾಡಿ..

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ
ಇಂಡಿಗೋ ವಿಮಾನ ರದ್ದಾಗಿ ಪರದಾಡುತ್ತಿರುವ ಪ್ರಯಾಣಿಕರ ನೆರವಿಗೆ ಧಾವಿಸಿದ ಭಾರತೀಯ ರೈಲ್ವೆ