ಬೆಂಗಳೂರಿಗರ ದೀರ್ಘ ವಾರಾಂತ್ಯ ಪ್ರವಾಸ ಆಸೆಗೆ ತಣ್ಣೀರು

By Web DeskFirst Published Aug 9, 2019, 5:21 PM IST
Highlights

ವೀಕೆಂಡ್ ಬಂತೆಂದರೇ ಸಾಕು, ಬೆಂಗಳೂರು ಮಂದಿ ಟ್ರಿಪ್, ಮಸ್ತಿ, ದೇವಾಲಯ ಸೇರಿದಂತೆ ಹಲವು  ಸ್ಥಳಗಳಿಗೆ ಭೇಟಿ ನೀಡೋದು ಕಾಮನ್. ಅದರಲ್ಲೂ ವಾರಾಂತ್ಯದಲ್ಲಿ ಸಾಲು ಸಾಲು ರಜೆ ಇದ್ದರೆ, ಬೆಂಗಳೂರಿಗರನ್ನು ಹುಡುಕಿದರೂ ಸಿಗಲ್ಲ. ಬಹುತೇಕರು ಪ್ರವಾಸಿ ತಾಣಗಳಲ್ಲಿ ಮಿಂದೇಳುತ್ತಾರೆ. ಇದೀಗ ಮತ್ತೆ ಲಾಂಗ್ ವೀಕೆಂಡ್ ಬಂದಿದೆ. ಆದರೆ ಈ ಬಾರಿ ಮಾತ್ರ ಬೆಂಗಳೂರಿಗರೂ ಉದ್ಯಾನ ನಗರಿ ಬಿಟ್ಟು ಕದಡಲ್ಲ. ಟ್ರಿಪ್, ಪ್ರವಾಸಕ್ಕೆ ಉಚಿತ ಟಿಕೆಟ್ ನೀಡಿದರೂ ಯಾರೂ ಕೂಡ ಹೊರಡಲು ತಯಾರಿಲ್ಲ. ಬೆಂಗಳೂರಿಗರ ವೀಕೆಂಡ್ ಮಸ್ತಿಗೆ ಬ್ರೇಕ್ ಹಾಕಿದ್ದು ಭೀಕರ ಪ್ರವಾಹ.  

ಬೆಂಗಳೂರು, (ಆ.09): ರಜಾ ದಿನಗಳು ಬಂತಂದ್ರೆ ಸಾಕು ಜಾಲಿ ಟ್ರಿಪ್ ಪ್ಲಾನ್ ಮಾಡುವ ದೊಡ್ಡ ಸಮೂಹವೇ ನಮ್ಮ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿದೆ. ಹೇಳಿ-ಕೇಳಿ ಇದು ಐಟಿ-ಬಿಟಿ ಕಂಪೆನಿಗಳ ಕರ್ಮಭೂಮಿ. ಇಲ್ಲಿನ ಸಾಫ್ಟ್​ವೇರ್ ಉದ್ಯೋಗಿಗಳೂ, ಟೆಕ್ಕಿಗಳೂ ವಾರವಿಡಿ ಒತ್ತಡದ ಕೆಲಸ ಮಾಡಿ ದಣಿದಿರುತ್ತಾರೆ. 

ಒತ್ತಡದಿಂದ ಕೊಂಚ ಮುಕ್ತಿ ಸಿಕ್ಕರೂ ದೇಹ ಹಾಗೂ ಮನಸ್ಸು ರಿಫ್ರೆಶ್ ಆಗುತ್ತದೆ. ಅದಕ್ಕೆ ಅವರು ಕಂಡುಕೊಂಡಿರುವ ವಿಧಾನವೇ ವೀಕೆಂಡ್ ಔಟಿಂಗ್. 

ಆದ್ರೆ ಕ್ಲಬ್, ಪಬ್, ರೆಸಾರ್ಟ್ ಮುಂತಾದ ಕಡೆಗಳ ವೀಕೆಂಡ್ ಮಸ್ತಿಗಿಂತ ಉಲ್ಲಾಸ ಕೊಡೋದು ಔಟ್​ಸೈಡ್ ರೈಡ್. ಬೆಂಗಳೂರಿನ ಮಡಿಲು ಬಿಟ್ಟು ಬೈಕ್​ನಲ್ಲಿ ಲಾಂಗ್ ರೈಡ್ ಹೋಗೋ ಮಜಾನೇ ಬೇರೆ. 

ಇದರ ಮಜಾ ಅನುಭವಿಸಲೆಂದೇ  ಗುಂಪು-ಗುಂಪಾಗಿ  ಹೊರಗೆಲ್ಲಾದರೂ ಹೋಗೋಣ ಅಂತ ವಾಟ್ಸಪ್ ಗ್ರೂಪಿನಲ್ಲಿ ಒಂದೊಂದು ತಲೆಯಿಂದ ಒಂದೊಂದೇ ಪ್ಲಾನ್‌ಗಳನ್ನ ಹೊರಬರುತ್ತವೆ. 

ಅವುಗಳಲ್ಲಿ ಒಂದನ್ನು ಸೆಲೆಕ್ಟ್ ಮಾಡಿ  ಸರ್ವಸಿದ್ಧತೆಗಳಿಂದ ಹೊರಡುತ್ತಾರೆ. ಆದ್ರೆ, ಇದೀಗ ಪ್ರಸ್ತುತ ಇಡೀ ಕರುನಾಡಿನಲ್ಲಿ ಬಿಟ್ಟು ಬಿಡದೇ ವರುಣ ಅರ್ಭಟಿಸುತ್ತಿದ್ದಾನೆ. ಇದ್ರಿಂದ ಪ್ರವಾಸಿ ತಾಣಗಣಗಳಿಗೆ ನಿಷೇಧವಿದ್ದು, ದಯವಿಟ್ಟು ಯಾರು ನಮ್ಮ ಜಿಲ್ಲೆಗೆ ಬರಬೇಡಿ ಅಂತೆಲ್ಲ ಸಂದೇಶಗಳನ್ನು ನೀಡುತ್ತಿದ್ದಾರೆ.

ಚಿಕ್ಕಮಗಳೂರು: ಪ್ರವಾಸಿಗರಿಗೆ ಕೆಲವು ದಿನ ಜಿಲ್ಲೆಗೆ ಪ್ರವೇಶವಿಲ್ಲ

 ಲಾಂಗ್ ವೀಕೆಂಡ್  ಪ್ಲಾನ್  ಏನು..?
ಹೌದು....09ರ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬದಿಂದ ರಜಾ ದಿನ ಆರಂಭವಾದರೆ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆವರೆಗೂ ರಜಾ ದಿನ. ಸರಿಸುಮಾರು 6 ರಿಂದ 7 ದಿನ ರಜಾ ದಿನ ಸಿಗಲಿದೆ.

ಶನಿವಾರ(ಆ.09) ಎರಡನೇ ಶನಿವಾರ, ರವಿವಾರ(ಆ.10) ರಜಾದಿನ, ಸೋಮವಾರ(ಆ.11 ), ಮಂಗಳವಾರ(ಆ.12) ಬಕ್ರೀದ್, ಬುಧವಾರ(ಆ.13) ರಜಾ ದಿನವಲ್ಲ, ಗುರುವಾರ(ಆ.15) ಸ್ವಾತಂತ್ರ್ಯ ದಿನಾಚರಣೆ. ವಾರಂತ್ಯದಲ್ಲಿ ಈ ರೀತಿ ರಜಾದಿನ ಬಂದಾಗ ಬಸ್, ಟ್ಯಾಕ್ಸಿ ಸೇರಿದಂತೆ ಪ್ರಯಾಣ ದರ ದುಪ್ಪಟ್ಟಾಗುತ್ತದೆ. ಮುಂಗಡ ಟಿಕೆಟ್ ಕಾಯ್ದಿರಿಸಲು ಸಾಧ್ಯವಾಗದೆ ಸಿಕ್ಕ ವಾಹನ ಏರಿಕೊಂಡು ಹೋಗುವ ಪರಿಪಾಠ ಹೊಸದೇನಲ್ಲ. 

ಪ್ರತಿ ಮಳೆಗಾಲದಲ್ಲಿ ಕರ್ನಾಟಕದ ಪ್ರಸಿದ್ಧ ಪ್ರವಾಸಿ ತಾಣಗಳಾದ ಕೊಡಗು, ಚಿಕ್ಕಮಗಳೂರು, ಉತ್ತರ ಕನ್ನಡ, ಮಲೆನಾಡು ಮತ್ತು ಕರಾವಳಿ ಪ್ರದೇಶಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತವೆ. ಆದರೆ ಈ ಬಾರಿ ಪ್ರವಾಹದಿಂದ ಪ್ರವಾಸಿ ತಾಣಗಳೇ ಕೊಚ್ಚಿ ಹೋಗಿವೆ. ಕರ್ನಾಟಕ ಮಾತ್ರವಲ್ಲ, ಕೇರಳದ ವಯನಾಡ್, ಇಡುಕ್ಕಿ , ಮಹಾರಾಷ್ಟ್ರ, ಆಂಧ್ರಪ್ರದೇಶದ ಪ್ರಮುಖ ತಾಣಗಳು ಪ್ರವಾಹಕ್ಕೆ ತುತ್ತಾಗಿವೆ. 

ಈ ತಾಣಗಳನ್ನು ಸಂಪರ್ಕಿಸುವ ರಸ್ತೆಗಳೂ ಕೂಡ ನೀರಿನಲ್ಲಿ ಕೊಚ್ಚಿ ಹೋಗಿವೆ. ಹೀಗಾಗಿ ಐಟಿ-ಬಿಟಿ ಮಂದಿ ಬೆಂಗಳೂರು ಜಿಟಿ ಜಿಟಿ ಮಳೆಯನ್ನೇ ಆನಂದಿಸಬೇಕಿದ್ದು, ಈ ರಜಾ ದಿನಗಳನ್ನು ಬೆಂಗಳೂರಿಗರು ಹೇಗೆ ಕಳೆಯುತ್ತಾರೆ ಎನ್ನುವುದೇ ಮಿಲಿಯನ್ ಡಾಲರ್ ಪ್ರಶ್ನೆ.

ಈ ಹಿನ್ನೆಲೆಯಲ್ಲಿ ಈ ವಾರದ ಲಾಂಗ್ ಲೀವ್‌ನ್ನು ಬೆಂಗಳೂರಿಗರು, ನಗರದಲ್ಲಿಯೇ ಶಾಪಿಂಗ್ , ಸಿನಿಮಾ ಮತ್ತು ಗೆಳೆಯರೊಡನೆ ಸೇರಿ ಒಂದು ಕಡೆ ಸೇರಿ ಹರಟೆ ಹೊಡೆಯುವುದು ಅಥವಾ ಕುಟುಂಬದೊಂದಿಗೆ ಕಾಲ ಕಳೆಯಬಹುದು ಅಷ್ಟೇ. ಇದನ್ನು ಬಿಟ್ರೇ ಬೇರೆ ದಾರಿ ಇಲ್ಲ. 

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಎಣ್ಣೆ ನಮ್ದು ಊಟ ನಿಮ್ದು..! 
ಇನ್ನು ಎಣ್ಣೆ ಮಂದಿಗೆ ಅಂತೂ ಪ್ಲಾನ್ ಹೇಳಿಕೊಡಬೇಕಿಲ್ಲ. ಅದು ಬೇರೆ ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣ ಸಾಲದಕ್ಕೆ ಜಿನಿ-ಜಿನಿ ಜಿನುಗುವ ಮಳೆರಾಯ ಮತ್ತೇನು ಬೇಕು. ಒಂದು ಮನೆಯಲ್ಲಿ ಎಣ್ಣೆ ನಮ್ದು ಊಟ ನಿಮ್ದು ಅಂತ ಫುಲ್ ಪಾರ್ಟಿ ಮಾಡುವುದು ತಲೆಯಲ್ಲಿ ಓಡಾಡುತ್ತಿರುತ್ತೆ ಅಷ್ಟೇ.

ಇನ್ನು ಕೆಲವರಿಗೆ ರಜೆ ಮಜೆ ಮಾಡುವುದು ಅವರವರ ವಿವೇಚನೆಗೆ ಬಿಟ್ಟಿದ್ದು. ಬೆಂಗಳೂರಿಗರಿಗೆ ಯಾವ ಪರಿಸ್ಥಿತಿ ಎದುರಾಗಿದೆ ಅಂದ್ರೆ ಹಲ್ಲು ಇದ್ರೂ ಕಡಲೆ ಇಲ್ಲ ಎನ್ನುವಂತಾಗಿದೆ.

click me!